ಚಿತ್ರದುರ್ಗ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಗ್ರಹಣ ಸಮಾರಂಭವನ್ನು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಉದ್ಘಾಟಿಸಿದರು. ಮಾಲತೇಶ ಮುದ್ದಜ್ಜಿ, ಎಂ.ಆರ್. ಮಂಜುನಾಥ್, ಮಹಂತೇಶ, ಪಿ.ಜೆ. ಗುರುನಾಥ್, ಶಿವಕುಮಾರ್ ಇತರರು ಇದ್ದರು. 
ಚಿತ್ರದುರ್ಗ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ೪೪ ಕೋಟಿ ರೂ. ಪ್ರಸ್ತಾವನೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿಕೆ
  • ಶಿಕ್ಷಕರ ಸಂಘದ ಪದಗ್ರಹಣ ಕಾರ್ಯಕ್ರಮ
  • ಗುರು ಭವನ ನಿರ್ಮಾಣ ಭರವಸೆ
ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ೪೪ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾ ಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಸಭಾಂಗಣದಲ್ಲಿ ಶನಿವಾರ ಆಯೋಜಿ ಸಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿತ್ರದುರ್ಗ ತಾಲೂಕು ಘಟಕದ ಪದಾಽಕಾರಿಗಳ, ನಿರ್ದೇಶಕರ ಪದಗ್ರಹಣ ಸ ಮಾರಂಭ ಉದ್ಘಾಟಿಸಿ ಮಾತನಾಡಿದ ರು.
ಈ ಪ್ರಸ್ತಾವನೆಗೆ ಸರ್ಕಾರ ಅಸ್ತು ಎಂದರೆ ತಾಲೂಕಿನ ಸರ್ಕಾರಿ ಶಾಲೆಗಳ ದುರಸ್ತಿ, ಹೂಸ ಕೊಠಡಿಗಳ ನಿರ್ಮಾಣ ಸಾಧ್ಯವಾಗ ಲಿದೆ. ಶಿಕ್ಷಕರು ಸಮಾಜವನ್ನು ತಿದ್ದುವ, ಕಟ್ಟುವ ಕೆಲಸ ಮಾಡುವಂಥವರು.
ರಾಜ್ಯದಲ್ಲೇ ಸಂಘದ ಚಿತ್ರದುರ್ಗ ತಾಲೂಕು ಶಾಖೆಗೆ ಅವಿರೋಧ ಆಯ್ಕೆಯಾಗಿದೆ.ಪದಾಽಕಾರಿಗಳು ಶಿಕ್ಷಕರ ಸಮಸ್ಯೆ ಪರಿಹರಿ ಸಲು ಗಮನ ಕೊಡಬೇಕು. ನಾನು ಕೂಡ ತಮ್ಮೊಂದಿಗೆ ಇರುತ್ತೇನೆ. ಚಿತ್ರದುರ್ಗ ತಾಲೂಕು ಗುರುಭವನ ನಿರ್ಮಾಣ ಬೇಡಿಕೆಗೆ ತಮ್ಮ ಬೆಂಬಲ, ಸಹಕಾರವಿದೆ. ಎಲ್ಲರ ಸಹಕಾರದೊಂದಿಗೆ ಭವನ ನಿರ್ಮಿಸೋಣ ಎಂದು ಶಾಸಕರು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ ಮುದ್ದಜ್ಜಿ ಮಾತನಾಡಿ, ಶಾಸಕರ ನಿರ್ದೆಶನದ ಮೇರೆಗೆ ಶಿಕ್ಷಕರ ಸಂ ಘದ ತಾಲೂಕು ಘಟಕಕ್ಕೆ ಅವಿರೋಧ ಆಯ್ಕೆ ಆಗಿದೆ. ಶಿಕ್ಷಕರಿಗೆ ಅನ್ಯ ಕಾರ್ಯಾಭಾರ ಹೊರೆ ಹೆಚ್ಚಾಗುತ್ತಿದೆ. ಇದರಿಂದ ಬೋ ಧನೆಗೆ ಕಷ್ಟವಾಗುತ್ತಿದೆ ಎಂದು ಶಾಸಕರ ಗಮನ ಸೆಳೆದರು.
ಡಿಡಿಪಿಐ ಎಂ.ಆರ್. ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಂತೇಶ, ಸಂಘದ ತಾಲೂಕು ಘಟಕದ ಅಧ್ಯಕ್ಷ ಪಿ.ಜೆ. ಗುರುನಾಥ್, ಶಿವಕುಮಾರ್, ಮಹೇಶ್, ಶ್ರೀನಿವಾಸ್, ರಾಜಪ್ಪ, ರಮೇಶ್, ಕೆಂಚಪ್ಪ, ವಿಮಲಾಕ್ಷಮ್ಮ, ಶಿವಣ್ಣ, ಚಿದಾನಂದಪ್ಪ ಮತ್ತಿತರರು ಇದ್ದರು. ಕಲಾವಿದ ಗಂಗಾಧರ್ ಮತ್ತವರ ತಂಡ ಪ್ರಾರ್ಥಿಸಿತು. ಲತಾ ಸ್ವಾಗತಿಸಿ, ಬಸವರಾಜು ನಿರೂಪಿಸಿದರು.