ಚಳ್ಳಕೆರೆ ನಗರದ ವಿವಿಧೆಡೆ ತಂಬಾಕು ಉತ್ಪನ್ನಗಳ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ಆರೋಗ್ಯ ಮತ್ತು ಅಬಕಾರಿ ಇಲಾಖೆ ಅಽಕಾರಿಗಳ ತಂಡ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕೋಟ್ಪಾ ೨೦೦೩ರ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಿತು.
- ತಂಬಾಕು ಉತ್ಪನ್ನ
- ದುಶ್ಚಟ
- ಆರೋಗ್ಯ ಮತ್ತು ಅಬಕಾರಿ ಇಲಾಖೆ
ಚಿತ್ರದುರ್ಗ: ಯುವ ಜನತೆ ತಂಬಾಕು ಉತ್ಪನ್ನಗಳ ದುಶ್ಚಟಕ್ಕೆ ಬಲಿಯಾಗುವುದನ್ನು ತಡೆಗಟ್ಟಲು ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ತನಿಖಾ ತಂಡ ಚಳ್ಳಕೆರೆ ನಗರದ ವಿವಿಧೆಡೆ ಬುಧವಾರ ಜಂಟಿ ಕಾರ್ಯಾಚರಣೆ ನಡೆ ಸಿತು.
ಚಳ್ಳಕೆರೆ ನಗರದ ವಿವಿಧೆಡೆ ತಂಬಾಕು ಉತ್ಪನ್ನಗಳ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ಆರೋಗ್ಯ ಮತ್ತು ಅಬಕಾರಿ ಇಲಾಖೆ ಅಽಕಾರಿಗಳ ತಂಡ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕೋಟ್ಪಾ ೨೦೦೩ರ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಿತು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿರುವ ವಿಚಾರಕ್ಕೆ ಸಂಬAಽಸಿದAತೆ ೩೧ ಪ್ರಕರಣ ದಾಖಲಿಸಿ ೩,೧೦೦ ದಂಡ ವ ಸೂಲಿ ಮಾಡಲಾಯಿತು.
ನಿಯಮಬಾಹಿರವಾಗಿ ತಂಬಾಕು ಮಾರಾಟ ಮಾಡಿದ ೨ ಪ್ರಕರಣ ದಾಖಲಿಸಿ ೨೦೦ ರೂ. ದಂಡ ವಿಽಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ಮತ್ತು ತಂಬಾಕು ಜಗಿದು ಉಗಿಯದಂತೆ ಸಾರ್ವಜನಿಕರಲ್ಲಿ ಜಾಗÊತಿ ಮೂಡಿಸಲಾಯಿತು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ, ಅಬಕಾರಿ ಇನ್ಸ್ಪೆಕ್ಟರ್ ಗಂಗರಾಜು, ಆರೋಗ್ಯ ನಿರೀಕ್ಷಣಾಽಕಾರಿ ಅಮೃತ್‌ರಾಜ್ ಹಾಗೂ ತಾಲೂಕು ಆರೋಗ್ಯಾಽಕಾರಿ ಕಚೇರಿಯ ಡಿಇಒ ಸ್ವಾಮಿ ಇದ್ದರು.