ಚಿತ್ರದುರ್ಗದ -Àಲಪುಷ್ಪ ಪ್ರದರ್ಶನದಲ್ಲಿ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ವಸ್ತು ಪ್ರದರ್ಶನ ಮಳಿಗೆಗಳನ್ನು ಟಿ. ವೆಂಕಟೇಶ್ ವೀಕ್ಷಿಸಿದರು. ಶಿವಣ್ಣ, ಬಿ.ಟಿ. ಕುಮಾರಸ್ವಾಮಿ, ಡಾ.ಜಿ.ಪಿ. ರೇಣುಪ್ರಸಾದ್, ಸವಿತಾ, ಡಾ.ಡಿ.ಎಂ. ಅಭಿನವ ಇತರರಿದ್ದರು.
- ಜಿ¯್ಲÁಽಕಾರಿ ಟಿ. ವೆಂಕಟೇಶ್ ಹೇಳಿಕೆ
- ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ವಸ್ತು ಪ್ರದರ್ಶನ
- ಭ್ರೂಣಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ
ಚಿತ್ರದುರ್ಗ: ಭ್ರೂಣಲಿಂಗ ಪತ್ತೆ ಹಚ್ಚುವ, ಭ್ರೂಣ ಹತ್ಯೆ ಮಾಡುವ ವೈದ್ಯರು, ಸ್ಕ್ಯಾನಿಂಗ್ ಸೆಂಟರ್‌ಗಳು, ಗರ್ಭಿಣಿಯರಿಗೆ ಒತ್ತಾ ಯಿಸುವ ಸಂಬAಽಕರು ಮತ್ತು ದ¯್ಲÁಳಿಗಳ ವಿರುದ್ಧ ಮಾಹಿತಿ ನೀಡುವ ಸಾರ್ವಜನಿಕರಿಗೆ ೧ ಲಕ್ಷ ರೂ.ಬಹುಮಾನ ನೀಡಲಾಗುವುದು ಎಂದು ಜಿ¯್ಲÁಽಕಾರಿ ಟಿ. ವೆಂಕಟೇಶ್ ತಿಳಿಸಿದರು.
ತೋಟಗಾರಿಕೆ ಇಲಾಖೆಯ -Àಲಪುಷ್ಪ ಪ್ರದರ್ಶನದಲ್ಲಿ ಜಿ¯್ಲÁಡಳಿತ, ಜಿಪಂ, ಆರೋಗ್ಯ ಇಲಾಖೆ ಆಯೋಜಿಸಿದ್ದ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ವಸ್ತು ಪ್ರದರ್ಶನ ಮಳಿಗೆಗಳನ್ನು ವೀಕ್ಷಿಸಿ ಮಾತನಾಡಿದರು.
ಇಂತಹ ಅಕ್ರಮಗಳ ವಿರುದ್ಧ ಗುಪ್ತ ಕಾರ್ಯಾಚರಣೆ ನಡೆಸಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಸಹಾಯ ಮಾಡುವ ಮಾಹಿತಿದಾರರಿಗೆ ಈ ಪುರಸ್ಕಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಿ ಬಾಲ ಗರ್ಭಿಣಿಯರಾಗದಂತೆ ನಿಗಾವಹಿಸ ಬೇಕು. ಆ ಮೂಲಕ ತಾಯಿ ಮತ್ತು ಶಿಶು ಮರಣ ತಡೆಯಬೇಕು ಎಂದು ಸಲಹೆ ನೀಡಿದರು.
ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ಮಾತನಾಡಿ, ಭ್ರೂಣಲಿಂಗ ಪತ್ತೆ ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಹೆಣ್ಣು ಮಕ್ಕಳನ್ನು ಉಳಿಸಿ, ಅವರನ್ನು ಚೆನ್ನಾಗಿ ಓದಿಸಿ ಎಂಬ ಆಶಯದೊಂದಿಗೆ ಸಮಾಜ ಬೆಳೆಯಬೇಕು ಎಂದರು.
ಜಿ¯್ಲÁ ಆರ್‌ಸಿಎಚ್ ಅಽಕಾರಿ ಡಾ.ಡಿ.ಎಂ. ಅಭಿನವ ಮಾತನಾಡಿ, ಹೆಣ್ಣು ಸಂತಾನ ಕಡಿಮೆಯಾದಂತೆ ಮುಂದೊAದು ದಿನ ಮನುಕುಲಕ್ಕೆ ಅಘಾತ ಉಂಟಾಗಲಿದೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಸೇರಿ ಇನ್ನಿತರೆ ದೌರ್ಜನ್ಯಗಳಾಗದಂತೆ ತಡೆಯಬೇಕಿದೆ. ಹೆಣ್ಣು ಸಂತಾನ ಹೆಚ್ಚಿಸಿ ಲಿಂಗಾನುಪಾತದಲ್ಲಿ ಸಮಾನತೆ ಕಾಯ್ದುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ಜಿ¯್ಲÁಧ್ಯಕ್ಷ ಆರ್. ಶಿವಣ್ಣ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ,ಟಿಎಚ್‌ಒ ಡಾ.ಬಿ.ವಿ. ಗಿರೀಶ್, ಕ್ರಮವಾಗಿ ಜಿ¯್ಲÁ, ತಾಲೂಕು, ಕ್ಷೇತ್ರ ಆರೋಗ್ಯ ಶಿಕ್ಷಣಾಽಕಾರಿಗಳಾದ ಕೃಷ್ಣನಾಯಕ್, ಬಿ. ಮೂಗಪ್ಪ, ಬಿ. ಜಾನಕಿ, ನಮ್ಮ ಕ್ಲಿನಿಕ್ ವೈದ್ಯಾಽಕಾರಿ ಡಾ. ಅಕ್ಷತಾ, ಆರೋಗ್ಯ ನಿರೀಕ್ಷಣಾಽಕಾರಿಗಳಾದ ನಾಗರಾಜ, ರವಿಶಂಕರ್ ಇತರರಿದ್ದರು.