ಚಿತ್ರದುರ್ಗದಲ್ಲಿ ಬುಧವಾರ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಎಚ್.ಎಂ. ರೇವಣ್ಣ ಮಾಹಿತಿ ನೀಡಿದರು. ಡಾ. ಆಕಾಶ್, ತಾಜ್‌ಪೀರ್, ಶಿವಣ್ಣ, ಮೈಲಾರಪ್ಪ, ಗಾಯತ್ರಿ ಇತರರಿದ್ದರು.
- ೧,೪೪,೦೫೬ ಮೃತರಿಗೆ ಗೃಹಲಕ್ಷಿ÷್ಮÃ ಹಣ ಸ್ಥಗಿತ
- ಎಚ್.ಎಂ. ರೇವಣ್ಣ ಸ್ಪಷ್ಟನೆ
- ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ
ಚಿತ್ರದುರ್ಗ: ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಬದ್ಧವಾಗಿದ್ದು, ಲೋಪದೋಷ ಸರಿಪಡಿ ಸಿ,ಅರ್ಹರಿಗೆ ಸೌಲಭ್ಯಗಳನ್ನು ತಲುಪಿಸಲು ಪರಿಷ್ಕರಣೆ ಅಗತ್ಯ. ಈ ನಿಟ್ಟಿನಲ್ಲಿ ಕ್ರಮ ವಹಿಸಲು ಸರ್ಕಾರಕ್ಕೆ ಸಲಹೆ ನೀಡ ಲಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಸ್ಪಷ್ಟಪಡಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಷ್ಕರಣೆ ಹೆಸರಲ್ಲಿ ಗ್ಯಾರಂಟಿ ಯೋಜನೆ ನಿಲ್ಲಿಸಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪ ಸತ್ಯಕ್ಕೆ ದೂರ. ತೆರಿಗೆದಾರರ ಹಣ ವ್ಯರ್ಥವಾಗದೆ, ಬಡವರ ಮತ್ತು ಮಹಿಳೆಯರ ಸಬಲೀಕರಣ ಆಗಬೇಕೆಂಬುದೇ ಸರ್ಕಾರದ ಪ್ರಮುಖ ಆಶಯವಾಗಿದೆ ಎಂದರು.
ನಮ್ಮ ರಾಜ್ಯ ದೊಡ್ಡದಿದೆ. -Àಲಾನುಭವಿಗಳು ಹೆಚ್ಚಿದ್ದಾರೆ. ಹೀಗಾಗಿ ಐದು ಇಲಾಖೆಯ ಪ್ರಧಾನ ಕಾರ್ಯದರ್ಶಿ, ಜಿ¯್ಲÁ ಮಟ್ಟ ದಲ್ಲಿ ಸಿಇಒ,ತಾಲೂಕು ಹಂತದಲ್ಲಿ ಇಒ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬAಧ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಒಟ್ಟು ೪ಸಾವಿರಕ್ಕೂ ಹೆಚ್ಚು ಮಂದಿಯ ಬೃಹತ್ ಉಸ್ತುವಾರಿ ಕಾರ್ಯಪಡೆ ಸಕ್ರಿಯವಾಗಿ ತೊಡಗಿದೆ ಎಂದು ಹೇಳಿದರು.
ಸಿಎಂ ಡಿ.ಕೆ. ಶಿವಕುಮಾರ್ ಈ ಯೋಜನೆಗಳ ಪರಿಷ್ಕರಣೆಗೆ ಮುಂದಾಗಿರುವ ಕ್ರಮ ಸ್ವಾಗತಾರ್ಹ. ಗೃಹಲಕ್ಷಿ÷್ಮÃ ಯೋಜನೆ ಯಡಿ ಮರಣ ಹೊಂದಿದವರ ಖಾತೆಗೆ ಹಣ ವರ್ಗಾವಣೆಯಾಗುತ್ತಿದ್ದ ಗಂಭೀರ ಲೋಪವನ್ನು ಪ್ರಾಽಕಾರ ಪತ್ತೆ ಹಚ್ಚಿದೆ. ಒಟ್ಟು ೧,೪೪,೦೫೬ ಮೃತರ ಖಾತೆಗೆ ಸಂದಾಯವಾಗುವುದನ್ನು ಸ್ಥಗಿತಗೊಳಿಸಲಾಗಿದೆ. ಅದನ್ನು ಹಿಂಪಡೆಯಲು ಕ್ರಮ ವಹಿಸು ವುದಾಗಿ ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಒಂದೇ ಮನೆಯನ್ನು ಕೃತಕವಾಗಿ ವಿಭಜಿಸಿರುವುದು, ವಾಣಿಜ್ಯ ಬಳಕೆ ಯದ್ದನ್ನು ಗೃಹ ಬಳಕೆ ವ್ಯಾಪ್ತಿಗೆ ತರುತ್ತಿರುವ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಹೊರ ರಾಜ್ಯದವರು ಯೋಜನೆಗಳ ಲಾಭ ಪಡೆಯುವುದನ್ನು ತಡೆಯಲು ಸರ್ಕಾರ ಮುಂದಾಗಲಿದೆ. ಶಕ್ತಿ ಯೋಜನೆ ಮತ್ತಷ್ಟು ವ್ಯವಸ್ಥಿತಗೊಳಿಸಲು ಮಹಿಳೆಯರಿಗೆ ಶೀಘ್ರದ¯್ಲೆÃ ಸ್ಮಾರ್ಟ್ ಕಾರ್ಡ್ ನೀಡಲಾಗುವುದು ಎಂದು ಹೇಳಿದರು.
ಜಿ¯್ಲÉಯ ಸಾಧನೆಗೆ ಪ್ರಶಂಸೆ: ರಾಜ್ಯದ ೩೧ ಜಿ¯್ಲÉಗಳ¯್ಲÉÃ ಚಿತ್ರದುರ್ಗ ಜಿ¯್ಲÉಯಲ್ಲಿ ಯೋಜನೆಗಳ ಸಂಬAಧ ಅಽಕಾರಿ ಗಳು, ಸಮಿತಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿ¯್ಲÉಗೆ ಪ್ರಶಸ್ತಿ ಸಿಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿ ಸಿದರು.
ಈ ಹಿಂದೆ ಇಡೀ ಜಿ¯್ಲÉಯ ಎಲ್ಲ ಇಲಾಖೆಗಳ ಒಟ್ಟು ವಾರ್ಷಿಕ ಬಜೆಟ್ ಹಂಚಿಕೆ ಸುಮಾರು ೧,೬೦೦ ಕೋಟಿ ರೂ. ಇರುತ್ತಿತ್ತು. ಆದರೆ, ಇಂದು ಕೇವಲ ಗ್ಯಾರಂಟಿ ಯೋಜನೆಗಳಿಗಾಗಿ ೩,೭೮೩ ಕೋಟಿ ರೂ. ಹಣ ಹರಿದುಬಂದಿದೆ. ಇದು ನೇರವಾಗಿ ಜನರ ಕೈ ಸೇರುತ್ತಿದ್ದು, ಪ್ರತಿ ಕುಟುಂಬಕ್ಕೂ ಮಾಸಿಕ ಕನಿಷ್ಠ ೫ ಸಾವಿರ ರೂ. ಉಳಿತಾಯವಾಗುತ್ತಿದೆ ಎಂದರು.
ಜಿಪಂ ಸಿಇಒ ಡಾ. ಆಕಾಶ್, ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಗ್ಯಾರಂಟಿ ಪ್ರಾಽಕಾರದ ಜಿ¯್ಲÁಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಜಿಪಂ ಸಿಪಿಒ ಗಾಯತ್ರಿ ಇತರರಿದ್ದರು.
ಬಿಜೆಪಿಯಿಂದ ಗ್ಯಾರಂಟಿ ಅನುಷ್ಠಾನ ಅಸಾಧ್ಯ
ಕರ್ನಾಟಕದಲ್ಲಿ ಗ್ಯಾರಂಟಿ ಜಾರಿ ಬಳಿಕ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿಗರು ಟೀಕೆ ಮಾಡಿದ್ದುಂಟು. ಆದರೆ, ಸರ್ಕಾರ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದು ರೇವಣ್ಣ ತಿಳಿಸಿದರು.
ಇದೇ ಯೋಜನೆಗಳನ್ನು ನಕಲು ಮಾಡಿ ಮಹಾರಾಷ್ಟç, ಮಧ್ಯಪ್ರದೇಶ ಸೇರಿ ಬೇರೆ ರಾಜ್ಯಗಳಲ್ಲಿ ಬಿಜೆಪಿ ಜಾರಿಗೊಳಿಸಿದ ಯೋಜನೆಗಳು ಸ್ಥಗತಿವಾಗಿವೆ. ಚುನಾವಣಾ ಗೆಲುವಿಗಾಗಿ ಮಾತ್ರ ಯೋಜನೆ ಘೋಷಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.