ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಮಂಗಳವಾರ ಏರ್ಪಡಿಸಿದ್ದ ಯೋಗಾಭ್ಯಾಸ ತರಬೇತಿ ಶಿಬಿರ ಸಮಾರೋಪದಲ್ಲಿ ಯೋಗ ಗುರು ಎಂ.ಬಿ.ಮುರಳಿ ಅವರನ್ನು ಗೌರವಿಸಲಾಯಿತು. ಸಿದ್ದರಾಮ ಬಿ.ಪಾಟೀಲ, ರಾಮಣ್ಣ ಹೆರಕಲ್, ಮಡಿವಾಳಪ್ಪ ತಳವಾರ್, ಡಾ.ಬಿ.ಎಂ. ಗುರುನಾಥ್, ಆರ್.ಎ.ಶ್ರೀರಾಮರೆಡ್ಡಿ ಇದ್ದರು.
- ಡಾ.ಬಿ.ಎಂ.ಗುರುನಾಥ ಸಲಹೆ
- ಕಾರಾಗೃಹದಲ್ಲಿ ಯೋಗ ತರಬೇತಿ ಶಿಬಿರದ ಸಮಾರೋಪ
ಚಿತ್ರದುರ್ಗ: ಮನಸ್ಸಿನ ದುಗುಡ, ನೋವು, ಅನ್ಯರಿಗೆ ಅರ್ಥವಾಗದು. ಉತ್ತಮ ಚಟುವಟಿಕೆಗಳ ಅಭ್ಯಾಸ ಮೂಲಕ ಮತ್ತೆ ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ಕಾರಾಗೃಹ ನಿವಾಸಿಗಳಿಗೆ ಸಲಹೆ ನೀಡಿದರು.
ಮಲ್ಲಾಪುರ ಚಿನ್ಮಯ ಮಯೂರ ಯೋಗ, ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯಿಂದ ವಿಶ್ವ ಧ್ಯಾನ ದಿನದ ಅಂಗವಾಗಿ ೧೨ ದಿನಗಳ ಯೋಗ, ಧ್ಯಾನ, ಮನ ಪರಿವರ್ತನಾ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. ಮಂಗಳ ವಾರ ಜರುಗಿದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿಗೆ ಬಂದAಥ ಎಲ್ಲರ ಜೀವನದಲ್ಲೂ ಒಂದು ನೋವು ಇದ್ದೇ ಇರುತ್ತದೆ ಎಂದರು.
ಕ್ಷಣಿಕ ಸಿಟ್ಟು, ಸೆಡುವು ಇತರ ಕಾರಣಗಳಿಂದಾಗಿ ತಾವಿಲ್ಲಿದ್ದೀರಿ. ತಮ್ಮ ಆರೋಗ್ಯಕ್ಕೆ ಯೋಗಾಭ್ಯಾಸದಂಥ ಚಟುವಟಿಕೆಗಳು ಸಹಕಾರಿ. ಕಾರಾಗೃಹದಲ್ಲಿ ಕೊಡುವಂಥ ಕೌಶಲ ತರಬೇತಿಗಳ ಸದುಪಯೋಗ ಪಡೆದು ತಮ್ಮ ಬಂಧು, ಬಳಗವನ್ನು ಮರಳಿ ಸೇರಿಕೊಂಡು, ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ. ಒಳ್ಳೆಯ, ಆಲೋಚನೆ, ಹವ್ಯಾಸಗಳು ನಿಮ್ಮ ಸಂಕಷ್ಟಗಳನ್ನು ದೂರ ಮಾಡಬಲ್ಲವು ಎಂದರು.
ಜಿಲ್ಲಾ ಕಾರಾಗೃಹ ಅಽÃಕ್ಷಕ ಸಿದ್ದರಾಮ ಬಿ.ಪಾಟೀಲ ಮಾತನಾಡಿ, ಕಾರಾಗೃಹ ನಿವಾಸಿಗಳಿಗೆ ವರ್ಷದ ೩೬೫ ದಿನಗಳು ಯೋಗಾಭ್ಯಾಸ ತರಬೇತಿ ಏರ್ಪಡಿಸಲಾಗುತ್ತದೆ. ಬಂಽಗಳ ಮನಪರಿರ್ತನೆ, ಅವರ ಆರೋಗ್ಯಕ್ಕೆ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಡಿಜಿಪಿ ಅಲೋಕ್‌ಕುಮಾರ್ ಅವರ ನಿರ್ದೇಶನವೂ ಇದೆ. ಅರ್ಹರಿಗೆ ಕೊಡುವಂಥ ಕೌಶಲ ತರಬೇತಿಗಳ ಸದು ಪಯೋಗ ಆಗಬೇಕು. ಬೇಡದ ವಿಚಾರಗಳೆಡೆ ಮನಸ್ಸು ಹರಿಬಿಡದೆ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಕೈದಿಗಳಿಗೆ ಅರಿವು ಮೂಡಿಸಿದರು.
ಯೋಗ ಗುರು ಎಂ.ಬಿ.ಮುರಳಿ ಮಾತನಾಡಿ, ನನಗೆ ತಾವು ಸಲ್ಲಿಸುವ ಗುರುಕಾಣಿಕೆ ಎಂದರೆ, ಇಲ್ಲಿ ಕಲಿಸಿರುವ ಸರಳವಾದ ಆಸನಗಳನ್ನು ನಿತ್ಯವೂ ನಿಗದಿತ ಸಮಯದಲ್ಲಿ ಮಾಡುವುದಾಗಿದೆ. ಮನಸ್ಸಿನ ನಿರಾಳತೆ, ದೈಹಿಕ ಆರೋಗ್ಯಕ್ಕೆ ಯೋಗ, ಧ್ಯಾನ ನೆರವಾಗುತ್ತವೆ ಎಂದರು.
ಸಹಾಯಕ ಜೈಲು ಅಽÃಕ್ಷಕ ರಾಮಣ್ಣ ಹೆರಕಲ್, ಮಡಿವಾಳಪ್ಪ ತಳವಾರ್, ವಾರ್ಡನ್‌ಗಳಾದ ವೆಂಕಟೇಶ್, ಡಿ.ಕೆ.ಸುಧಾ, ತುಬುದ್ದೀನ್ ವಾಲೇಕಾರ್ ಇತರರು ಇದ್ದರು. ಕೆಲವು ಶಿಬಿರಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊAಡರು. ಶಿಕ್ಷಕ ಆರ್.ಎ. ಶ್ರೀರಾಮರೆಡ್ಡಿ ನಿರೂಪಿಸಿದರು.