ಚಿತ್ರದುರ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ದಾವಣಗೆರೆ ರಸ್ತೆಗೆ ತೆರಳುತ್ತಿರುವ ಬಸ್‌ಗಳು. ---
- ಪ್ರಾಯೋಗಿಕ ಕ್ರಮದಿಂದ ಹಿಂದೆ ಸರಿದ ಅಽಕಾರಿಗಳು
- ಹೊಳಲ್ಕೆರೆ ರಸ್ತೆ ವಿಚಾರವಿನ್ನೂ ಪೆಂಡಿAಗ್
- ವಾಹನ ಸಂಚಾರ ದಟ್ಟಣೆ
ಚಿತ್ರದುರ್ಗ: ನಗರದಲ್ಲಿ ವಾಹನ ಸಂಚಾರ ದಟ್ಟಣೆ, ಸಂಚಾರ ಸಿಕ್ಕು ನಿಯಂತ್ರಣಕ್ಕೆ ನಗರದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳಿಂದ ಹೊರಕ್ಕೆ ತೆರಳುವ ಬಸ್ಸುಗಳು ಬಿಡಿ ರಸ್ತೆ ಹಾಗೂ ಹೊಳಲ್ಕೆರೆ ರಸ್ತೆ ಮೂಲಕ ತೆರಳುವಂತಿಲ್ಲವೆAದು ಜಿಲ್ಲಾಡಳಿತ ವಿಽಸಿದ್ದ ನಿರ್ಬಂಧವನ್ನು ಕೈ ಬಿಟ್ಟಿದೆ.
ಕಳೆದ ಅಕ್ಟೋಬರ್‌ನಿಂದ ಒಂದು ತಿಂಗಳು ಪ್ರಾಯೋಗಿಕವಾಗಿ ನಿಲ್ದಾಣಗಳಿಂದ ರಸ್ತೆಗಳ ಮೂಲಕ ಪರಸ್ಥಳಗಳಿಗೆ ಬಸ್ಸುಗಳು ತೆರಳುವುದನ್ನು ನಿರ್ಬಂಽಸಲಾಗಿತ್ತು. ಆದರೆ, ಇನ್ನೂ ಮುಂದುವರಿದ ನಿರ್ಬಂಧದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಈಗ ಈ ನಿರ್ಬಂಧವನ್ನು ಹಿಂದಕ್ಕೆ ಪಡೆಯಲಾಗಿದೆ. ಹೊಳಲ್ಕೆರೆ ರಸ್ತೆ ಹೊರತು ಪಡಿಸಿ ಉಳಿದಂತೆ ಎಂದಿನAತೆ ಬಸ್‌ಗಳು ಸಂಚರಿ ಸಲಿವೆ.
ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಹೊಳಲ್ಕೆರೆ, ಹೊಸದುರ್ಗ, ಶಿವಮೊಗ್ಗದ ಕಡೆಗೆ ತೆರಳುವ ಬಸ್‌ಗಳು ದಾವಣಗೆರೆ ರಸ್ತೆ, ಜೆಎಂಐಟಿ ವೃತ್ತದ ಮೂಲಕ ತೆರಳಬೇಕಿತ್ತು. ಅದೇ ರೀತಿಯಲ್ಲಿ ಹೊಸಪೇಟೆ, ಬೆಂಗಳೂರು, ಚಳ್ಳಕೆರೆ, ಮೊಳಕಾಲ್ಮೂರು, ಬಳ್ಳಾರಿ ಕಡೆಗೆ ತೆರಳುವ ಬಸ್‌ಗಳು ಜೆಎಂಐಟಿ ಕಡೆಯಿಂದ ರಾ.ಹೆ.ಯಲ್ಲಿ ಸಾಗಬೇಕಿತ್ತು.
ನಗರದ ಮೆದೇಹಳ್ಳಿ ರಸ್ತೆÀಯ ಖಾಸಗಿ ಬಸ್ ನಿಲ್ದಾಣದಿಂದ ಪರಸ್ಥಳಗಳಿಗೆ ತೆರಳುವ ಬಸ್‌ಗಳು ರಾ.ಹೆ.೪೮ರ ಸರ್ವಿಸ್ ರಸ್ತೆಗಳ ಮೂಲಕ ತೆರಳಬೇಕಿದೆ. ಹೊಳಲ್ಕೆರೆ, ಹೊಸದುರ್ಗ ಹಾಗೂ ಶಿವಮೊಗ್ಗದ ಕಡೆಗೆ ಹೋಗಲು, ಕನಕ ವೃತ್ತ, ಚಂದ್ರವಳ್ಳಿ ಬಳಿ ಹಾಗೂ ಚಳ್ಳಕೆರೆ, ಮೊಳಕಾಲ್ಮೂರು, ಬಳ್ಳಾರಿ, ಹಿರಿಯೂರು, ಬೆಂಗಳೂರು ಕಡೆಗೆ ಹೋಗಲು ಪ್ರವಾಸಿ ಮಂದಿರ, ಜಿಲ್ಲಾಸ್ಪತ್ರೆ ಬಳಿ ಕಾಯುತ್ತಿದ್ದ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಪ್ರಯಾಣಿಕರು ಅನಿವಾರ್ಯವಾಗಿ ಬಸ್ ನಿಲ್ದಾಣ, ಅಥವಾ ಚಳ್ಳಕೆರೆ ಗೇಟ್‌ಗೆ ಹೋಗುವಂತಾಗಿತ್ತು.
ನಿಲ್ದಾಣಗಳಿAದ ಪರಸ್ಥಳಗಳಿಗೆ ತೆರಳುವ ಎಲ್ಲ ಬಸ್‌ಗಳಿಗೂ ನಿರ್ಬಂಧ ಇದೆಯಾದರೂ ಪರಸ್ಥಳಗಳಿಂದ ಬರುವ ಬಸ್‌ಗಳಿಗೆ ನಗರ ದೊಳಗೆ ಬರಲು ಅವಕಾಶವಿತ್ತು. ಇದನ್ನು ವಿರೋಽಸಿ ರೈತರು ಪ್ರತಿಭಟಿಸಿದ್ದರು. ತ್ರೆÊ ಮಾಸಿಕ ಕೆಡಿಪಿ ಸಭೆಯಲ್ಲೂ ಚರ್ಚೆಯಾಗಿತ್ತು. ನಗ ರದಿಂದ ದಿನದ ೨೪ ಗಂಟೆ ೧೨೬೯ ಬಸ್‌ಗಳು ಹಾಗೂ ನಿತ್ಯ ೨೦೦ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಎಂಪಿಎAಸಿ ಮಾರುಕಟ್ಟೆ ಒಳಗೆ ಬಸ್‌ಗಳು ಸಂಚರಿಸಿದAತೆ ಗೇಟ್‌ವೊಂದರಲ್ಲಿ ತಡೆವೊಡ್ಡಲಾಗಿದೆ.
ಚಿತ್ರದುರ್ಗ ನಗರದಿಂದ ಹೊರಕ್ಕೆ ಹೋಗುವಂಥ ಬಸ್‌ಗಳು ಬಿಡಿ ರಸ್ತೆ, ಹೊಳಲ್ಕೆರೆ ರಸ್ತೆ ಮೂಲಕ ಹೋಗುವಂತಿಲ್ಲವೆAಬ ನಿರ್ಬಂಧ ಸಡಿಸಲಾಗಿದೆ. ಹೊಳಲ್ಕೆರೆ ರಸ್ತೆ ಹೊರತು ಪಡಿಸಿ, ಬಿಡಿ ರಸ್ತೆಯಲ್ಲಿ ಎಂದಿನAತೆ ಸಂಚಾರ ಆರಂಭವಾಗಿದೆ.
ಜಿಲ್ಲಾಡಳಿತದ ನಿರ್ಧಾರದಿಂದ ಗ್ರಾಮೀಣರು, ಬಡ ಪ್ರಯಾಣಿಕರು, ವಿದ್ಯಾರ್ಥಿಗಳು, ರೈತರಿಗೆ ಬಹಳ ತೊಂದರೆಯಾಗಿದೆ. ನಗರದೊಳಗೆ ಸಂಚಾರ ದಟ್ಟಣೆ ನಿಯಂತ್ರಿಸಲು ಚಿತ್ರದುರ್ಗದ ಗಾಂಽ ವೃತ್ತದನಿಂದ ಐಬಿವರೆಗೆ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಲಿ.
ನಗರದೊಳಗೆ ಬಸ್‌ಗಳ ಸಂಚಾರ ನಿರ್ಬಂಧಕ್ಕೆ ತಾವು ಆದೇಶಿಸಿರಲಿಲ್ಲ. ಪೊಲೀಸರು ಈಗ ಮತ್ತೆ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟಿ ದ್ದಾರೆ.