ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಪತ್ತು ನಿರ್ವಹಣಾ ಜಿಲ್ಲಾ ಮಟ್ಟದ ಸಭೆಯಲ್ಲಿ ಶಾಸಕರಾದ ಟಿ. ರಘುಮೂರ್ತಿ,ಬಿ.ಜಿ. ಗೋವಿಂದಪ್ಪ, ಕೆ.ಸಿ.ವೀರೇಂದ್ರಪಪ್ಪಿ, ಡಿಸಿ ಟಿ. ವೆಂಕಟೇಶ್ ಇತರರು ಇದ್ದರು.
- ಅಽಕಾರಿಗಳಿಗೆ ಶಾಸಕ ರಘಮೂರ್ತಿ ತಾಕೀತು
- ಜಿಲ್ಲಾ ವಿಪತ್ತು ನಿರ್ವಹಣೆ ಸಭೆ
- ಜಲಜೀವನ್ ಮಿಷನ್ ಕಾಮಗಾರಿ
ಚಿತ್ರದುರ್ಗ: ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಕೂಡಲೇ ಸ್ಪಂದಿಸಿ, ಸಮಸ್ಯೆ ಪರಿಹರಿಸಬೇಕೆಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಅಽಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಽಕಾರಿ ಕಚೇರಿಯಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹನಾ ಪ್ರಾಽಕಾರದ ಸಭೆಯಲ್ಲಿ ಅವರು ಮಾತನಾಡಿದರು.
ಹಿರಿಯೂರು ತಾಲೂಕು ದಿಂಡಾವರ, ಕರಿಯಾಲ ಹಾಗೂ ಜೆ.ಜೆ. ಹಳ್ಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅಽಕಾರಿ ಗಳು ಎಚ್ಚರದಿಂದ ಕಾರ್ಯನಿರ್ವಹಿಸಬೇಕು. ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಂಡಿರುವ ಹಳ್ಳಿಗಳಲ್ಲಿ ನೀರು ಸರಬ ರಾಜಿಗೆ ಚಾಲನೆ ನೀಡಬೇಕು.
ಗ್ರಾಮೀಣ ಭಾಗದ ಶಿಥಿಲ ಸಾಕಷ್ಟು ಆರ್‌ಒ ಗಳ ದುರಸ್ಥಿಗೆ ಕ್ರಮ ವಹಿಸಬೇಕು. ಮಳೆ ಕೊರತೆ ಎದುರಾಗುವ ಸಂಭವವಿದೆ. ಪ್ರಾ ದೇಶಿಕ ಆಯುಕ್ತರ ಅನುಮತಿ ಪಡೆದು ವಾಣಿ ವಿಲಾಸ ಸಾಗರ ಜಲಾಶಯದಿಂದ ಚಳ್ಳಕೆರೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸ ಬೇಕೆಂದು ರಘುಮೂರ್ತಿ ಹೇಳಿದರು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಹೊಸದುರ್ಗ ತಾಲೂಕಿನಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಇರುವ ೪ ಗ್ರಾಮಗಳು ಹಾಗೂ ಸಮಸ್ಯೆ ತಲೆದೋರಬಹುದಾದ ೯ ಗ್ರಾಮಗಳಲ್ಲಿ ಹೊಸ ಬೋರ್‌ವೆಲ್ ಕೊರೆಸಬೇಕು ಅಥವಾ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಬೇಕು.
ಹೊಸದುರ್ಗ ಪಟ್ಟಣಕ್ಕೆ ನೀರಿನ ಸಮಸ್ಯೆ ಇಲ್ಲ. ಆದರೆ, ವಿತರಣೆ ಜಾಲ ಹಾಗೂ ಅಽಕಾರಿಗಳ ಸಮನ್ವಯತೆ ಕೊರತೆಯಿಂದ ಕೃತಕ ಅಭಾವ ಉಂಟಾಗುತ್ತಿದೆ ಎಂದರು. ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮಾತನಾಡಿ, ಚಿತ್ರದುರ್ಗ ಹೊರವಲಯದ ಮದಕರಿ ಪುರಕ್ಕೆ ನಗರದ ಕುಡಿಯುವ ನೀರಿನ ಸಂಪರ್ಕ ಜಾಲದಿಂದ ನೀರು ಒದಗಿಸಬೇಕು.
ನಗರದಲ್ಲಿರುವ ೧೯ ಆರ್‌ಒ ಪ್ಲಾಂಟ್‌ಗಳಲ್ಲಿ ೧೬ ಸ್ಥಗಿತವಾಗಿವೆ. ಒಂದು ವಾರದಲ್ಲಿ ಇವುಗಳನ್ನು ಪಿಪಿಪಿ ಮಾದರಿ ಖಾಸಗಿಯವರಿಗೆ ವಹಿಸಲು ಕ್ರಮ ಕೈಗೊಳ್ಳಬೇಕೆಂದು ನಗರಸಭೆ ಅಽಕಾರಿಗಳಿಗೆ ಸೂಚಿಸಿದರು.
ಕೆಎಂಇಆರ್‌ಸಿ ಅಥವಾ ಜಿಲ್ಲಾ ಖನಿಜ ಪ್ರತಿಷ್ಠಾನ ನಿಽಯಡಿ ಜಿಲ್ಲೆಯ ಎಲ್ಲ ಆರ್‌ಒಗಳನ್ನು ಪಿಪಿಪಿ ಮಾದರಿ ೫ ವರ್ಷಗಳ ಅವಽ ಗುತ್ತಿಗೆ ನೀಡಬೇಕೆಂದು ಎಲ್ಲ ಶಾಸಕರು ಅಽಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಽಕಾರಿ ಟಿ. ವೆಂಕಟೇಶ್ ಮಾತನಾಡಿ, ತಾಪಂ ಮತ್ತು ತಹಸೀಲ್ದಾರ್ ಕಚೇರಿಗಳಲ್ಲಿ ವಿಪತ್ತು ನಿರ್ವಹಣಾ ಕೋಶ ತೆರೆಯಬೇಕು.
ದಿನದ ೨೪ ಗಂಟೆಯೂ ಈ ಕೇಂದ್ರಗಳು ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಸದ್ಯ ೧೫ ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮುಂದೆ ೬೯ ಹಳ್ಳಿಗಳಲ್ಲಿ ಸಮಸ್ಯೆ ಉದ್ಭವಿಸಬಹುದು ಎಂದು ಅಽಕಾರಿಗಳನ್ನು ಎಚ್ಚರಿಸಿದರು. ಪ್ರಸ್ತುತ ಜಿಲ್ಲೆಯಲ್ಲಿ ೪೪ ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ ಎಂದು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಕುಮಾರ್ ತಿಳಿಸಿದರು.
ಜಿಲ್ಲೆಯ ೨೭೩ ಆರ್‌ಒಗಳಲ್ಲಿ ೬೮ನ್ನು ದುರಸ್ಥಿಗೊಳಿಸಬೇಕಿದೆ. ಇದಕ್ಕಾಗಿ ೪೬ ಲಕ್ಷ ರೂ.ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ ೧೦೦ ಕ್ಕೂ ಹೆಚ್ಚು ಫಿಲ್ಟರ್‌ಗಳನ್ನು ಸರಿಪಡಿಸಲಾಗಿದೆ ಎಂದು ಜಿಪಂ ಸಿಇಒ ಡಾ. ಆಕಾಶ್ ಹೇಳಿದರು. ಜಿಲ್ಲೆಯಲ್ಲಿ ಏಪ್ರಿಲ್‌ನಲ್ಲಿ ಸುರಿದ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದ ೧೫೮ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.
ಕಂದಾಯ ಮತ್ತು ತೋಟಗಾರಿಕೆ ಇಲಾಖೆಗಳಿಂದ ಜಂಟಿ ಸಮೀಕ್ಷೆ ಕೈಗೊಳ್ಳಲಾಗಿದ್ದು, ಅಂದಾಜು ೩೨.೫೮ ಲಕ್ಷ ರೂ.ಪರಿಹಾ ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಜಿ. ಸವಿತಾ ಹೇಳಿದರು.
ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಬಿಸಿಲಾಘಾತದ ಕುರಿತು ಚರ್ಚಿಸಲಾಯಿತು. ಎಡಿಸಿ ಬಿ.ಟಿ. ಕುಮಾರಸ್ವಾಮಿ,ಎಸಿ ಡಾ. ಕೆ.ಜೆ.ಕಾಂತರಾಜು, ಎಎಸ್‌ಪಿ ಶಿವಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಮರನಾಥ್ ಜೈನ್, ಕÊಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಇತರರು ಇದ್ದರು.