ಗೋವಿಂದ ಎಂ.ಕಾರಜೋಳ 
ಚಿತ್ರದುರ್ಗ

ಜಾತಿ ವ್ಯವಸ್ಥೆ ಇರುವವರೆಗೂ ಬೇಕು ಮೀಸಲಾತಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಸಂಸದ ಗೋವಿಂದ ಎಂ.ಕಾರಹೋಳ ಪ್ರತಿಪಾದನೆ
  • ಸಂವಿಧಾನದ ಆಶಯ ಪಾಲನೆಯಾಗಲಿ
  • ನಾಗರಿಕ ದಂಗೆಗೆ ರಾಹುಲ್ ಗಾಂಽ ಪ್ರಚೋದನೆ

ಚಿತ್ರದುರ್ಗ:

ಶ್ರೇಣೀಕೃತ ಜಾತಿ ವ್ಯವಸ್ಥೆ, ಶೋಷಣೆ ದೇಶದಲ್ಲಿ ಜೀವಂತವಾಗಿರುವವರೆಗೂ ಜಾತಿ ಆಧಾರಿತ ಮೀಸಲಾತಿ ಮುಂದುವರಿಯಬೇಕು ಎಂದು ಸಂಸದ ಗೋವಿಂದ ಎಂ. ಕಾರಜೋಳ ಪ್ರತಿಪಾದಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಮೀಸಲಾತಿ ಇರಬೇಕು ಎಂದರು.
ಬ್ರಿಟಿಷರ ಆಡಳಿತಾವಽ ೧೮೫೪ರಲ್ಲಿ ಶಿಕ್ಷಣ ಆಯುಕ್ತರಾಗಿದ್ದ ಚಾರ್ಲ್ಸ್ವುಡ್ ಸಾವಿರಾರು ವರ್ಷಗಳಿಂದ ನೋವನ್ನು ಅನುಭವಿಸು ತ್ತಾ ಬಂದಿರುವ ದಲಿತ ಸಮುದಾಯಗಳಿಗೆ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಗ್ರ‍್ಯಾಂಟ್ ಇನ್ ಏಡ್ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಪ್ರೋತ್ಸಾಹಿಸಿದ್ದರು. ನಾಡಿನ ವಿವಿಧ ಮಠಗಳ ಮಠಾಽÃಶರು, ಸಾಮಾಜಿಕ ಕಳಕಳಿ ಹೊಂದಿರುವAಥವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶೋಷಿತರು, ಹಿಂದುಳಿದವರು, ಬಡವರ ಶಿಕ್ಷಣಕ್ಕೆ ನೂರಾರು ವರ್ಷಗಳಿಂದ ನೆರವಾಗುತ್ತಾ ಬಂದಿದ್ದಾರೆ.
ಈಗ ಜಾತಿ ಆಧಾರಿತ ಮೀಸಲಾತಿ ರದ್ದಾಗಬೇಕೆಂಬ ಹೋರಾಟ ಸಂವಿಧಾನ ವಿರೋಽ ನಡವಳಿಕೆಯಾಗಿದೆ. ಇದರ ಹಿಂದೆ ದೊಡ್ಡ ಸಂಚಿದೆ. ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಜನರು ಇಂಥ ಹುನ್ನಾರ, ಪ್ರಚೋದನಕಾರಿ ಹೋರಾಟಗಳನ್ನು ಬೆಂಬಲಿಸದೆ ಜಾಗೃತಿ ವಹಿಸಬೇಕು. ದೇಶದ ಶಾಂತಿ, ಸೌಹಾರ್ದ ಮತ್ತು ಸಂವಿಧಾನಾತ್ಮಕ ಮೀಸಲಾತಿ ರಕ್ಷಣೆಗೆ ಪ್ರತಿಯೊಬ್ಬ ನಾಗರಿಕನೂ ಅರಾಜಕ ಶಕ್ತಿಗಳ ವಿರುದ್ಧ ಎಚ್ಚರದಿಂದಿರಬೇಕು ಎಂದರು.
ಪರಿಶೀಲನೆ ನೆಪದಲ್ಲಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಶಿಕ್ಷಣ ಇಲಾಖೆ ಅಽಕಾರಿಗಳಿದ್ದರೂ ಕಾನೂ ನು ಕೈಗೆತ್ತಿಕೊಳ್ಳುವ ಅಽಕಾರವನ್ನು ಕೆಲವು ಪುಂಡ ಪೋಕರಿಗಳಿಗೆ ಯಾರು ಕೊಟ್ಟಿದ್ದಾರೆ? ಶಿಕ್ಷಣ ಸಂಸ್ಥೆಗಳ ವಿರುದ್ಧ ಕಿಡಿಕಾರು ತ್ತಿರುವ ರಾಹುಲ್‌ಗಾಂಽ ಯಾಕೆ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳ ವಿರುದ್ಧ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ಪ್ರಮುಖರಾದ ಎ. ಮುರಳಿ, ಜಿ.ಎಚ್. ಮೋಹನ್‌ಕುಮಾರ್, ನಾಗರಾಜ್‌ಬೇದ್ರೆ, ಪರಶುರಾಮ್ ಇದ್ದರು.

ನಾಗರಿಕ ದಂಗೆಗೆ ರಾಹುಲ್ ಗಾಂಽ ಪ್ರಚೋದನೆ
ದೇಶದಲ್ಲಿ ನಡೆಯುತ್ತಿರುವ ಹಲವು ಪ್ರತಿಭಟನೆಗಳು, ಸಂಘರ್ಷಗಳಿಗೆ ಸಂಸತ್ತಿನ ಪ್ರತಿಪಕ್ಷ ನಾಯಕ ರಾಹುಲ್‌ಗಾಂಽ ಅವರ ಕುಮ್ಮಕ್ಕಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
ಬಾಂಗ್ಲಾ, ಪಾಕಿಸ್ತಾನ ಮಾದರಿ ಭಾರತದಲ್ಲೂ ಅರಾಜಕತೆ, ನಾಗರಿಕ ದಂಗೆಗೆ ಪ್ರಚೋದನೆ ನೀಡುತ್ತಿದ್ದಾರೆ. ಅಖಿಲ ಭಾರತ ವಿದ್ಯಾರ್ಥಿ ಸಂಘದ ಅಧ್ಯಕ್ಷೆ, ಜೆಎನ್‌ಯು ವಿವಿಯ ವಿದ್ಯಾರ್ಥಿನಿ ನೇಹಾ ಬೋರಾ ಹೇಳಿಕೆ ಕಳವಳಕಾರಿ. ಆಕೆಯ ವಿದ್ಯಾಭ್ಯಾಸ ವಿನ್ನೂ ಪೂರ್ಣವಾಗಿಲ್ಲ. ತಮ್ಮ ಭವಿಷ್ಯದ ಅರಿವಿಲ್ಲದ ವಿದ್ಯಾರ್ಥಿಗಳು, ಯುವಜನರನ್ನು ವ್ಯಾಸಂಗ, ಉದ್ಯೋಗದಿಂದ ದೂರತಳ್ಳಿ ರಾಜಕಾರಣಕ್ಕೆ ಆಹ್ವಾನಿಸುವುದು ದೇಶದ ಭವಿಷ್ಯಕ್ಕೆ ಮಾರಕ ಎಂದು ಹೇಳಿದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶದ ಸ್ಥಿತಿಗತಿ, ಭಾಷೆ, ಶೋಷಣೆ, ಸಾಮಾಜಿಕ ವ್ಯವಸ್ಥೆ ಅರಿವಿಲ್ಲದ ಜೆನ್‌ಜೀಗಳ ಹೋ ರಾಟ ಬೆಂಬಲಿಸುವ ರಾಹುಲ್‌ಗಾಂಽ ಅವರಲ್ಲಿ ತಾವು ಪ್ರಧಾನಿಯಾಗದಿದ್ದರೆ ದೇಶದಲ್ಲಿ ಅರಾಜಕತೆ ಉಂಟಾಗಬೇಕೆAಬ ಕೆಟ್ಟ ಆಲೋಚನೆ ಇದೆ ಎಂದರು.