ಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ
- ರಾಜ್ಯಸರ್ಕಾರದ ವಿರುದ್ಧ ಬಿಜೆಪಿ ಆರೋಪ
- ತೀವ್ರ ಹೋರಾಟದ ಎಚ್ಚರಿಕೆ ನೀಡಿದ ಕುಮಾರಸ್ವಾಮಿ
- ಒಳಮೀಸಲಾತಿ ಮಸೂದೆ
ಚಿತ್ರದುರ್ಗ: ಶೇ.೫೬ರಷ್ಟು ಮೀಸಲಾತಿ ಕಡೆಗಣಿಸಿ ೫೬,೪೩೨ಹುದ್ದೆಗಳ ಭರ್ತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಘೋರ ಅನ್ಯಾಯವಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್‌ಸಿ ಮೀಸಲಾತಿ ವರ್ಗೀಕರಣಕ್ಕಾಗಿ ನ್ಯಾ. ನಾಗಮೋಹನ್‌ದಾಸ್ ಆಯೋಗ ರಚನೆ ವೇಳೆ ಹಾಗೂ ಒಳಮೀಸಲಾತಿಗಾಗಿ ಮಸೂದೆ ಮಂಡಿಸಿ ರಾಜ್ಯಪಾಲರ ಅನುಮೋದನೆ ಪಡೆಯುವಾಗಲೂ ಶೇ.೫೬ ಮೀಸಲಾತಿ ಇತ್ತು.
ಆದರೆ, ಆರ್ಥಿಕವಾಗಿ ದಿವಾಳಿಯಾಗಿರುವ ಸರ್ಕಾರ ತನ್ನ ವೈ-Àಲ್ಯ ಮುಚ್ಚಿಕೊಳ್ಳಲು ಮೀಸಲಾತಿ ಗೊಂದಲ ಸೃಷ್ಟಿಸುತ್ತಿದೆ. ಶೇ.೫೬ರ ಮೀಸಲಾತಿಯೊಂದಿಗೆ ಕಳೆದ ೩ ವರ್ಷಗಳಿಂದ ವೃತ್ತಿ ಶಿಕ್ಷಣ ಪ್ರವೇಶ, ನೇಮಕಾತಿ ಸುಗಮವಾಗಿತ್ತು. ಆದರೆ, ಶೇ.೫೬ ಮೀಸಲಾತಿಯನ್ನು ಶೇ.೫೦ಕ್ಕೆ ಇಳಿಸುವ ಮೂಲಕ ಸರ್ಕಾರ ಯುವಜನರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ. ಇದರಿಂದ ೪ ಸಾವಿರಕ್ಕೂ ಹೆಚ್ಚು ಎಸ್‌ಸಿ, ಎಸ್‌ಟಿ ಯುವ ಜನರು ಉದ್ಯೋಗಾವಕಾಶದಿಂದ ವಂಚಿತರಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ನೀಡಿರುವ ಶೇ.೫೬ರ ಮೀಸಲಾತಿ ಭಾಗಶಃ ತಡೆಗೆ, ತನ್ನ ನಿರ್ಧಾರ ಸಮರ್ಥಿಸುವ ಮತ್ತು ಪೂರಕ ದಾಖಲೆಗಳನ್ನು ಕೋರ್ಟಿಗೆ ಸಲ್ಲಿಸುವಲ್ಲಿ ರಾಜ್ಯ ಸರ್ಕಾರ ವಿ-Àಲವಾಗಿರುವುದು ಕಾರಣವಾಗಿದೆ. ಜಾರ್ಖಂಡ್, ಛತ್ತೀಸ್‌ಗಢ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಶೇ.೫೦ ದಾಟಿದ್ದರೂ ಊರ್ಜಿತವಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಬದ್ಧತೆ ಇಲ್ಲವಾಗಿದೆ ಎಂದು ಆರೋಪಿಸಿದರು.
೨೦೨೨ರಿಂದ ಜಾರಿಯಲ್ಲಿದ್ದ ಶೇ.೧೭(ಎಸ್‌ಸಿ), ಶೇ.೭(ಎಸ್‌ಟಿ)ಮೀಸಲಾತಿಗೆ ಧಕ್ಕೆ ತರುವ ಮೂಲಕ ಸರ್ಕಾರ ದಲಿತ, ಹಿಂದುಳಿದ ವರ್ಗಗಳ ವಿರೋಽ ಎಂಬುದನ್ನು ಸಾಬೀತುಪಡಿಸಿದೆ. ಅಹಂಕಾರ ಬದಿಗಿಟ್ಟು ತಕ್ಷಣವೇ ಕಾನೂನು ತಜ್ಞರು, ಸರ್ವಪಕ್ಷಗಳ ಮುಖಂಡರು, ಹೋರಾಟಗಾರರ ಸಭೆ ಕರೆದು ಚರ್ಚಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಸಿಗಬೇಕಾದ ಸಾಂವಿಧಾನಿಕ ಮೀಸಲಾತಿ ಉಳಿಸಿಕೊಳ್ಳಲು ಗಂಭೀರ ಕ್ರಮಗಳೊಂದಿಗೆ ನೇಮಕಕ್ಕೆ ಮುಂದಾಗದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷ ಅನಿಲ್‌ಕುಮಾರ್ ಮಾತನಾಡಿ, ಬಸವರಾಜ ಬೊಮ್ಮಾಯಿ ಸರ್ಕಾರ ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಶೇ. ೩ ರಿಂದ ೭ಕ್ಕೆ ಹೆಚ್ಚಿಸಿದೆ. ಬೇರೆ ರಾಜ್ಯಗಳಲ್ಲಿ ಮೀಸಲಾತಿ ಶೇ.೫೦ ದಾಟಿದೆ. ಆದರೆ, ಕೋರ್ಟ್ಗೆ ಸೂಕ್ತ ದಾಖಲಾತಿ ಸಲ್ಲಿಸದೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ಪಂಗಡಗಳನ್ನು ವಂಚಿಸಲು ಮುಂದಾಗಿದೆ ಎಂದರು.
ಮುಖAಡ ಪಾಪೇಶನಾಯಕ ಮಾತನಾಡಿ, ರಾಜನಹಳ್ಳಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು ಮೀಸಲಾತಿಗಾಗಿ ಬೆಂಗಳೂರುವರೆಗೆ ಪಾದಯಾತ್ರೆ ಹಾಗೂ ೨೫೦ ದಿನ ನಿರಶನ ನಡೆಸಿದ್ದರು. ಅಂದಿದ್ದ ಬಿಜೆಪಿ ಸರ್ಕಾರ ಜೇನುಗೂಡಿಗೆ ಕೈ ಹಾಕಿ ಮೀಸಲಾತಿ ಜಾರಿ ಮಾಡಿತ್ತು. ಈ ಸರ್ಕಾರ ಮೀಸಲಾತಿ ಕಡಿಮೆ ಮಾಡಿ ಹುದ್ದೆ ಭರ್ತಿ ಮಾಡಲು ಹೊರಟಿರುವದರ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದರು.
ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಾಜು ಮಾತನಾಡಿ, ರಾಜ್ಯಪಾಲರು ಸಹಿ ಹಾಕಿದ ಮಸೂದೆ ಆಶಯಕ್ಕೂ, ಸಂಪುಟದ ನಿರ್ಧಾರಕ್ಕೂ ಸಂಬAಧವಿಲ್ಲದAತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಳೆಕಾಯಿ ರಾಮದಾಸ್, ರಾಜು, ರಾಜೇಶ್ವರಿ, ಪಾಲಯ್ಯ,ನಾಗರಾಜ್‌ಬೇದ್ರೆ, ಬಾಬು ಸುದ್ದಿಗೋಷ್ಠಿಯಲ್ಲಿ ಇದ್ದರು.