ಎಸ್ಸೆಸ್ಸೆಲ್ಸಿ -Àಲಿತಾಂಶ ಹೆಚ್ಚಳ ಸಂಬAಧ ನಿಧಾನಗತಿ ಕಲಿಕಾರ್ಥಿಗಳ ಶೇ.೫೦ ಅಂಕಗಳಿಕೆ ಉದ್ದೇಶದಿಂದ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳ ಕನ್ನಡ ಭಾಷಾ ಶಿಕ್ಷಕರಿಗೆ ನಗರದ ಚಿನ್ಮೂಲಾದ್ರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 
ಚಿತ್ರದುರ್ಗ

ಉತ್ತಮ -Àಲಿತಾಂಶಕ್ಕೆ ಬೇಕು ನಿರಂತರ ಅಭ್ಯಾಸ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್ ಹೇಳಿಕೆ
  • ಎಸ್ಸೆಸ್ಸೆಲ್ಸಿ -Àಲಿತಾಂಶ ಹೆಚ್ಚಳಕ್ಕೆ ಕನ್ನಡ ಭಾಷಾ ಶಿಕ್ಷಕರಿಗೆ ತರಬೇತಿ
  • ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್
ಚಿತ್ರದುರ್ಗ: ನಿರಂತರ ಅಭ್ಯಾಸ, ಪುನರ್‌ ಮನನದಿಂದ ಉತ್ತಮ -Àಲಿತಾಂಶ ಪಡೆಯಲು ಸಾಧ್ಯ ಎಂದು ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್ ಹೇಳಿದರು.
ಎಸ್ಸೆಸ್ಸೆಲ್ಸಿ -Àಲಿತಾಂಶ ಹೆಚ್ಚಳ ಸಂಬAಧ ನಿಧಾನಗತಿ ಕಲಿಕಾರ್ಥಿಗಳ ಶೇ.೫೦ ಅಂಕಗಳಿಕೆ ಉದ್ದೇಶದಿಂದ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳ ಕನ್ನಡ ಭಾಷಾ ಶಿಕ್ಷಕರಿಗೆ ನಗರದ ಚಿನ್ಮೂಲಾದ್ರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶಾಲೆಗೆ ನಿತ್ಯ ಹಾಜರಾಗಲು ಶಿಕ್ಷಕರು ಕ್ರಮವಹಿಸಬೇಕು. ಇಲಾಖೆ ನಿಗದಿಪಡಿಸಿದ ೪ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರವನ್ನು ಮತ್ತೆ, ಮತ್ತೆ ಅಭ್ಯಾಸ ಮಾಡಿಸಬೇಕು. ಪ್ರಶ್ನೆಪತ್ರಿಕೆ ಸ್ವರೂಪ, ಸರಳ, ಸಾಧಾರಣ, ಕ್ಲಿಷ್ಟ ಪ್ರಶ್ನೆಗಳನ್ನು ಪರಿಚಯಿಸಬೇಕು. ವಿದ್ಯಾರ್ಥಿಗಳ ಉತ್ತರಗಳನ್ನು ಪ್ರಶ್ನೆವಾರು ವಿಶ್ಲೇಷಿಸಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಬಿಇಒ ಎಚ್. ಗಿರಿಜಾ ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಮಕ್ಕಳ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ವಿಷಯ ಅರ್ಥೈಸಿ ಬೋಽಸುವ ಮೂಲಕ ಉತ್ತೀರ್ಣರಾಗುವಂತೆ ಎಲ್ಲ ಮಕ್ಕಳನ್ನು ಸಿದ್ಧಗೊಳಿಸಬೇಕು ಎಂದರು.
ಪ್ರತಿ ಮಗುವಿನಲ್ಲಿ ಪ್ರತಿಭೆಯಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಇದರಿಂದ ಮಕ್ಕಳು ಸಮಾಜಮುಖಿಯಾಗಿ ಜೀವನ ನಡೆಸುವಂತಾಗಲು ಹಾಗೂ ಉತ್ತಮ ಮಾನವ ಸಂಪನ್ಮೂಲ ಸಾಧ್ಯವಾಗಲಿದೆ ಎಂದರು.
ಉಪನ್ಯಾಸಕ ಎಸ್. ಬಸವರಾಜು ಮಾತನಾಡಿದರು. ಕನ್ನಡ ಭಾಷಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಿಜಲಿಂಗಪ್ಪ, ಮುರಳಿ, ಕಾರ್ಯದರ್ಶಿ ಸಿ. ಮಂಜಪ್ಪ, ಖಜಾಂಚಿ ಲಿಂಗೇಶ್, ಶಿಕ್ಷಣ ಸಂಯೋಜಕರಾದ ಕೆ.ಆರ್. ಲೋಕೇಶ್, ಮಲ್ಲಿಕಾರ್ಜುನ, ರಮೇಶ್‌ರೆಡ್ಡಿ, ತಿಪ್ಪೇಸ್ವಾಮಿ, ವ ಸಂತಕುಮಾರ, ಸತೀಶ ಇತರರು ಇದ್ದರು.