ಜೋಗಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಆಗ್ರಹಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ವಕೀಲ ಪ್ರತಾಪ್ ಜೋಗಿ ಅವರು ಬೆಂಗಳೂರಲ್ಲಿ ಶನಿವಾರ ಮನವಿ ಸಲ್ಲಿಸಿದರು.  
ಚಿತ್ರದುರ್ಗ

ಸಮುದಾಯದ ಭವನಕ್ಕೆ ೩ ಕೋಟಿ ರೂ.ಮಂಜೂರಾತಿಗೆ ಮನವಿ

ಅಖಿಲ ಕರ್ನಾಟಕ ನಾತ ಪಂಥ ಜೋಗಿ ಮಹಾಸಂಸ್ಥಾನ ಮಠ

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ

ಅತ್ಯಂತ ಹಿಂದುಳಿದ ಜೋಗಿ ಸಮುದಾಯದ ಭವನದ ನಿಮಾರ್ಣಕ್ಕಾಗಿ ೩ ಕೋಟಿ ರೂ.ಅನುದಾನ ಕೊಡುವಂತೆ ಆಗ್ರಹಿಸಿ ನಗರದ ಅಖಿಲ ಕರ್ನಾಟಕ ನಾತ ಪಂಥ ಜೋಗಿ ಮಹಾಸಂಸ್ಥಾನ ಮಠದ ಪ್ರಧಾನ ಸಂಘ ಟನಾ ಕರ‍್ಯದರ್ಶಿ, ವಕೀಲ ಪ್ರತಾಪ್‌ಜೋಗಿ ಅವರು, ಬೆಂಗಳೂರಲ್ಲಿ ಶನಿವಾರ ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಡಳಿತ ಚಿತ್ರದುರ್ಗ ತಾಲೂಕು ಹಿರೇಗುಂಟನೂರು ಹೋಬಳಿ ಚಿಕ್ಕಪುರ ಗ್ರಾಮದ ರಿ.ಸ.ನಂ.೧೦೧ರಲ್ಲಿ ಸಂಘಕ್ಕೆ ೪.೧೨ ಎಕರೆ ಜಮೀನು ಮಂಜೂರು ಮಾಡಿದೆ. ಅತ್ಯಂತ ಹಿಂದುಳಿದ ಸಮುದಾಯದ ಜನರು, ಕೆಲವೆಡೆ, ವ್ಯವಸಾಯ, ಕೂಲಿ, ಬೀಗ ರಿಪೇರಿ ಹಾಗೂ ಕಿನ್ನರಿ ನುಡಿಸುತ್ತಾ ಜೀವನ ಸಾಗಿಸುತ್ತಿದೆ.

ಇಡೀ ರಾಜ್ಯದಲ್ಲಿ ನಮ್ಮ ಸಮುದಾಯಕ್ಕೆ ಎಲ್ಲೂ ಸಮುದಾಯ ಭವನ, ಶಿಕ್ಷಣ ಕೇಂದ್ರಗಳು ಇಲ್ಲ. ಮೂಲ ಸೌರ‍್ಯಗಳಿಂದ ವಂಚಿತ ರಾಗಿರುವ ಈ ಸಮುದಾಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಸಮುದಾಯವಾಗಿದೆ. ಮದುವೆ ಮತ್ತಿತರ ಕರ‍್ಯಕ್ರಮಗಳಿಗೆ ಅನುಕೂಲಕ್ಕಾಗಿ ಅನುದಾನ ಮಂಜೂರು ಮಾಡುವಂತೆ ಪ್ರತಾಪ್‌ಜೋಗಿ ಕೇಂದ್ರ ಸಚಿವರನ್ನು ಆಗ್ರಹಿಸಿದ್ದಾರೆ.