ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಸ್ವಾತಂತ್ರ‍್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರು ರಾಷ್ಟç ಧ್ವಜಾರೋಹಣ ನೆರವೇರಿಸಿ ವಿವಿಧ ತುಗಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಗೋವಿಂದ ಎಂ. ಕಾರಜೋಳ, ಕೆ.ಎಸ್. ವೀರೇಂದ್ರ ಪಪ್ಪಿ, ಎಂಎಲ್‌ಸಿ ಕೆ.ಎಸ್. ನವೀನ್, ಜಿ.ಎಸ್. ಮಂಜುನಾಥ, ಪಿ. ರಘು, ಟಿ. ವೆಂಕಟೇಶ್, ಡಾ.ಎಸ್. ಆಕಾಶ್, ರಂಜಿತ್‌ಕುಮಾರ್ ಬಂಡಾರು ಮತ್ತಿತರರು ಇದ್ದರು.
- ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಹೇಳಿಕೆ
- ಸ್ವಾತಂತ್ರ÷್ಯಹೋರಾಟಗಾರರ ಕೊಡುಗೆ ಸ್ಮರಣೆ
- ತುರುವನೂರಲ್ಲಿ ಇತಿಹಾಸ ಬಿಂಬಿಸುವ ಉದ್ಯಾನ
ಚಿತ್ರದುರ್ಗ:
ಬರಗಾಲ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಬಿತ್ತನೆ ವೈ-Àಲ್ಯ(P್ಟಛಿqಛ್ಞಿಠಿಛಿb oಟಡಿಜ್ಞಿಜ)ದಡಿ ಅಂದಾಜು ೧೬೭ ಕೋಟಿ ರೂ. ಬೆಳೆ ವಿಮೆ ಪರಿಹಾರಕ್ಕೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಹೇಳಿದರು.
ಜಿಲ್ಲಾಡಳಿತ ನಗರದ ಮರುಘರಾಜೇಂದ್ರ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ೮೦ನೇ ಸ್ವಾತಂತ್ರ‍್ಯೋತ್ಸವದಲ್ಲಿ ರಾಷ್ಟç ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಬರ ಹಿನ್ನೆಲೆಯಲ್ಲಿ ೬ ತಾಲೂಕುಗಳಲ್ಲಿ ಸಮಸ್ಯೆಗಳ ಕುರಿತು ಖುದ್ದು ಪರಿಶಿಲಿಸಿದ್ದೇನೆ. ಸಕಾಲದಲ್ಲಿ ಮಳೆಯಾಗದೆ ಬಿತ್ತನೆ ಕುಂಠಿತವಾಗಿದೆ ಎಂದರು.
ಬಿತ್ತನೆ ವೈ-Àಲ್ಯದಡಿ ವಿಮೆ ಪರಿಹಾರಕ್ಕಾಗಿ ವರದಿ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಈ ಬಾರಿ ೧.೯೬ ಲಕ್ಷ ಅಽಕ ರೈತರು ಬೆಳೆ ವಿಮೆಗೆ ನೋಂದಾಯಿಸಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬರಗಾಲ ಪೀಡಿತ ಜನರಿಗೆ ಆಸರೆಯಾಗಿವೆ ಎಂದು ಅಂಕಿ ಅಂಶಗಳ ಸಹಿತ ವಿವರಿಸಿದರು.
ಸಂಸದ ಗೋವಿಂದ ಎಂ ಕಾರಜೋಳ, ಶಾಸಕ ಕೆ.ಎಸ್.ವೀರೇಂದ್ರ ಪಪ್ಪಿ,ಎಂಎಲ್‌ಸಿ ಕೆ.ಎಸ್.ನವೀನ್,ರಾಜ್ಯಆದಿಜಾಂಬವ ಅಭಿವÊದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ,ರಾಜ್ಯಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು,ಕುಡಾ ಅಧ್ಯಕ್ಷ ಎಂ.ಕೆ.ತಾಜ್ ಪೀರ್,ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಽಕಾರ ಅಧ್ಯಕ್ಷ ಆರ್.ಶಿವಣ್ಣ,ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಡಿಸಿ ಟಿ.ವೆಂಕಟೇಶ್,ಜಿ.ಪA.ಸಿ ಇಒ ಡಾ.ಆಕಾಶ್,ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಸೇರಿದಂತೆ ನಾನಾ ಗಣ್ಯರು,ಅಽಕಾರಿಗಳು ಇದ್ದರು.
ಸ್ವಾತಂತ್ರ‍್ಯದ ಇತಿಹಾಸ ಬಿಂಬಿಸುವ ಉದ್ಯಾನ
ಸ್ವಾತಂತ್ರ‍್ಯಕ್ಕಾಗಿ ನಡೆದ ಹೋರಾಟವನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ತುರವನೂರಲ್ಲಿ ಸ್ವಾತಂತ್ರ‍್ಯ ಉದ್ಯಾನ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಎಂದು ರಘುಮೂರ್ತಿ ತಿಳಿಸಿದರು.
ತುರವನೂರಿಗೂ ಮಹಾತ್ಮ ಗಾಂಽÃಜಿಯವರಿಗೂ ಭಾವನಾತ್ಮಕ ಸಂಬAಧವಿತ್ತು. ಈಚಲು ಮರದ ಸತ್ಯಾಗ್ರಹಕ್ಕೆ ತುರುವನೂ ರು ಕೇಂದ್ರ ಬಿಂದುವಾಗಿತ್ತು. ಗ್ರಾಮದ ಪ್ರತಿ ಮನೆಯಿಂದಲೂ ಹೋರಾಟದಲ್ಲಿ ಪಾಲ್ಗೊಂಡು ರಾತ್ರೋರಾತ್ರಿ ಸಾವಿರಾರು ಈಚಲು ಮರಗಳನ್ನು ಕಡಿದು ಹಾಕಿದ್ದರು.
ಈ ಮಾಹಿತಿ ತಿಳಿದ ಗಾಂಽÃಜಿ ತಾವು ಕೂಡ ಹೋರಾಟದಲ್ಲಿ ಭಾಗವಹಿಸುವ ಹಂಬಲ ವ್ಯಕ್ತಪ ಡಿಸಿದ್ದರು. ಕೊನೇಗಳಿಗೆಯಲ್ಲಿ ಅವರ ಪರವಾಗಿ ಮಹದೇವ್‌ದೇಸಾಯಿ ಗ್ರಾಮಕ್ಕೆ ಭೇಟಿ ನೀಡಿ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆಂರು ತಿಳಿಸಿದರು.
ಜಿಲ್ಲೆ, ರಾಜ್ಯದ ಅನೇಕ ಮಹನೀಯರು ಸ್ವಾತಂತ್ರ‍್ಯಕ್ಕಾಗಿ ನಡೆಸಿದ ಹೋರಾಟ, ಜಿಲ್ಲೆಯ ಕೊಡುಗೆ, ರಾಜ್ಯದ ನಾನಾ ಅವಿ ಸ್ಮರಣೀಯ ಹೋರಾಟದ ಸ್ಥಳಗಳನ್ನು ನೆನಪಿಸಿದರು.
ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ನೇರ ರೈಲು ಮಾರ್ಗ ೨೦೨೮ರ ವೇಳೆಗೆ ಪೂರ್ಣಗೊಳ್ಳಲಿದೆ. ಚಿಕ್ಕಜಾಜೂರು-ಬಳ್ಳಾರಿ ರೈಲ್ವೆ ಡಬ್ಲಿಂಗ್ ಯೋಜನೆ ಪ್ರಗತಿಯಲ್ಲಿದೆ. ಈ ರೈಲ್ವೆ ಯೋಜನೆಗಳಿಂದ ಜಿಲ್ಲೆಯ ಗಣಿಗಾರಿಕೆಗೆ, ವಾಣಿಜ್ಯೋದ್ಯಮ, ಹೈನುಗಾರಿಕೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ರಘುಮೂರ್ತಿ ತಿಳಿಸಿದರು.
ಜಿಲ್ಲೆಯ ಜನರ ಹೋರಾಟದ -Àಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಸಕಾರಗೊಳ್ಳುತ್ತಿದೆ. ಚಿತ್ರದುರ್ಗ ಶಾಖಾ ಕಾಲುವೆ ಪೂರ್ಣ ಗೊಳ್ಳುವುದರಿಂದ ಚಿತ್ರದುರ್ಗದ ೬ ತಾಲೂಕು, ದಾವಣಗೆರೆ ಜಿಲ್ಲೆಯ ಜಗಳೂರು, ತುಮಕೂರಿನ ಪಾವಗಡದ ರೈತರಿಗೆ ಅನು ಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.
೧೩೪.೫ ಕಿ.ಮೀ.ಉದ್ದದ ಕಾಲುವೆ ಕಾಮಗಾರಿಯಲ್ಲಿ ೧೧೪ ಕಿ.ಮೀ.ನಷ್ಟು ಪೂರ್ಣಗೊಂಡಿದೆ. ಈ ತಿಂಗಳಾAತ್ಯಕ್ಕೆ ಗೋನೂರು ಕೆರೆಗೆ ಭದ್ರಾ ನೀರು ಹರಿಯಲಿದೆ. ಈ ಕಾರ್ಯಕ್ರಮಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಲಾಗುವುದು. ಮುಂದಿನ ವರ್ಷ ಜನವರಿವೊಳಗೆ ಗೋನೂರು ಅಕ್ವಾಡೆಕ್ಟ್ ಪೂರ್ಣಗೊಳಲಿದ್ದು, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಘೋಷಿಸಿರುವ ೫೩೦೦ ಕೋಟಿ ರೂ.ಬಿಡುಗಡೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಲಾಗುತ್ತಿದೆ. ಪಕ್ಷಭೇದ ಮರೆತು ಜಿಲ್ಲೆಯ ಎಲ್ಲ ಜನಪ್ರತಿನಿಽಗಳು ಇದಕ್ಕೆ ಪ್ರಯತ್ನಿಸುತ್ತಿದ್ದಾರೆ. ಸಿರಿಗೆರೆ ಬ್ರಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಘೋಷಿತ ಅನುದಾನದ ಮೊತ್ತವೀಗ ೬೨೦೦ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ ಎಂದರು.
ಡಾ.ಬಿ.ಆರ್.ಅAಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಈಡೇರಿಸಲು, ಸಾಮಾಜಿಕ ನ್ಯಾಯದ ಪರಿಕಲ್ಪನೆಯೊಂದಿಗೆ ಅಭಿವೃದ್ಧಿ ಗುರಿ ತಲುಪಬೇಕಿದೆ. ಪಕ್ಷಾತೀತವಾಗಿ ಜನಪ್ರತಿನಿಽಗಳು ಒಗ್ಗೂಡಿ ಜಿಲ್ಲೆಯ ಅಭಿವೃದ್ಧಿ, ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಒತ್ತು ಕೊಡಬೇಕಿದೆ ಎಂದರು.
ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ೧೦೦ ದಿನಗಳ ಅಭಿವೃದ್ಧಿ ಮತ್ತು ಕಾರ್ಯ ಸೂಚಿಗಳನ್ನು ಉಲ್ಲೇಖಿಸಿದ ಸಚಿವರು, ಅಽಕಾರಿ ವರ್ಗದ ಸಹಕಾರದಿಂದ ಅಭಿವೃದ್ಧಿ ಪಥದಲ್ಲಿ ನಡೆಯಲು ನಮ್ಮ ಸರ್ಕಾರ ಬದ್ಧವಿದೆ ಎಂದು ಸಚಿವರು ತಿಳಿಸಿದರು.
ಸಶಸ್ತç ಮೀಸಲು ಪಡೆ, ನಾಗರಿಕ ಪೊಲೀಸ್, ಗÊಹ ರಕ್ಷಕ ಹಾಗೂ ಅರಣ್ಯಇಲಾಖೆ ತುಕಡಿಗಳು, ಎನ್‌ಸಿಸಿ, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳ ತಂಡಗಳು ಹಾಗೂ ಪೊಲೀಸ್ ಬ್ಯಾಂಡ್‌ನಿAದ ಆಕರ್ಷಕ ಪಥ ಸಂಚಲನ ನಡೆಯಿತು. ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆಗಳಿಗೆ ನೃತ್ಯರೂಪಕಗಳನ್ನು ಪ್ರದರ್ಶಿಸಿದರು.