ಚಿತ್ರದುರ್ಗದಲ್ಲಿ ಭಾನುವಾರ ನಡೆದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಕೆ.ವಿ.ಗಗನ್‌ದೀಪ್, ಡಾ.ವಿಜಯಲಕ್ಷಿ÷್ಮÃ ಗಗನ್‌ದೀಪ್ ಅವರನ್ನು ಸನ್ಮಾನಿಸಲಾಯಿತು. ಡಾ.ಬಿ.ಆರ್. ರವಿಕಾಂತೇಗೌಡ, ರಂಜಿತ್‌ಕುಮಾರ್ ಬಂಡಾರು, ಎಚ್.ಟಿ.ಶೇಖರ್ ಇತರರಿದ್ದರು. 
ಚಿತ್ರದುರ್ಗ

ಸ್ನೇಹ ಸಮ್ಮಿಲನದಲ್ಲಿ ನೆನಪುಗಳ ಮೆಲುಕು

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಕ್ಲಿಷ್ಟಕರ ಪರಿಸ್ಥಿತಿ ಎದುರಿಸಿದ್ದೇನೆ
  • ನಿವÊತ್ತ ಐಪಿಎಸ್ ಅಽಕಾರಿ ಗಗನ್‌ದೀಪ್ ಭಾವುಕ ನುಡಿ
  • ಗೌರವ ಸಮರ್ಪಣೆ ಕಾರ್ಯಕ್ರಮ
ಚಿತ್ರದುರ್ಗ: ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ, ಸಭೆ, ಸಮಾರಂಭ, ಸಮಾವೇಶ ಹಾಗೂ ಉತ್ಸವಗಳಿಗೆ ರಕ್ಷಣೆ ನೀಡುವಲ್ಲಿ ಸದಾ ನಿರತರಾಗುವ ಪೊಲೀಸ್ ಅಽಕಾರಿಗಳು, ಸಿಬ್ಬಂದಿ ತಮ್ಮ ಕುಟುಂಬಸ್ಥರೊAದಿಗೆ ಸಂತೋಷದಿAದ ಒಂದೆಡೆ ಸೇರುವುದು ಅಪರೂಪ. ಆದರೂ ನಾಲ್ಕೆÊದು ತಾಸು ಹಳೆಯ ಕಹಿ ಘಟನೆಗಳ ಸಮೇತ ಮಧುರ ನೆನಪುಗಳನ್ನು ಮೆಲುಕು ಹಾಕಿದರು.
ಚಳ್ಳಕೆರೆ ರಸ್ತೆಯ ಎಸ್‌ಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ೧೯ ೯೬ನೇ ಬ್ಯಾಚ್‌ನ ಪೊಲೀಸ್ ಅಽಕಾರಿಗಳ ಸ್ನೇಹ ಸಮ್ಮಿಲನ, ಗೌರವ ಸಮರ್ಪಣೆ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಯಿತು.
ನಿವÊತ್ತ ಐಪಿಎಸ್ ಅಽಕಾರಿ ಕೆ.ವಿ.ಗಗನ್‌ದೀಪ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಗೆ ಎಸ್ಪಿಯಾಗಿz್ದÁಗ ಕಷ್ಟ ಕರ ಪರಿಸ್ಥಿತಿ ಎದುರಿಸಿದ್ದೇನೆ. ಸಂತೆ ಹೊಂಡದಲ್ಲಿ ಬಸ್ ಬಿದ್ದು, ೬೦ ಮಂದಿ ಮೃತಪಟ್ಟಿದ್ದು, ಐಮಂಗಲದಲ್ಲಿ ನಟೋರಿಯಸ್ ಕ್ರಿಮಿನಲ್ ಉಮೇಶ್ ರೆಡ್ಡಿಯನ್ನು ಬಂಽಸಿದ್ದ ಸಂದರ್ಭ ನೆನಪಿಸಿಕೊಂಡರು.
೧೯೯೦ರಲ್ಲಿ ಪುತ್ತೂರಿನಲ್ಲಿ ಎಎಸ್ಪಿಯಾಗಿ, ೧೯೯೬ರಲ್ಲಿ ಚಿತ್ರದುರ್ಗ ಎಸ್ಪಿಯಾದಾಗ ೨೫೦ ಕಾನ್‌ಸ್ಟೆಬಲ್‌ಗಳ ನೇಮಕ ಮಾಡಿ ದ್ದೇನೆ. ಅದೇ ರೀತಿ ಬೆಳಗಾವಿ, ಬಳ್ಳಾರಿಯಲ್ಲಿಯೂ ಮಾಡಿದ್ದೇನೆ. ಹೋದ ಕಡೆಯಲ್ಲೆಲ್ಲ ಪಾರದರ್ಶಕವಾಗಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ್ದೇನೆ. ಎಲ್ಲಿಯೂ ಭ್ರಷ್ಟಾಚಾರಕ್ಕೆ ಆಸ್ಪದ ಕೊಟ್ಟಿಲ್ಲ ಎಂದರು.
ಎಸ್ಟಾಬ್ಲಿಷ್‌ಮೆAಟ್ ಸೆಕ್ಷನ್‌ನವರು ಸರಿಯಾಗಿ -ೆÊಲï‌ಗಳನ್ನು ಪುಟ್‌ಅಪ್ ಮಾಡದಿದ್ದರೆ, ಸಿಬ್ಬಂದಿ ಬಡ್ತಿಯಲ್ಲಿ ಅನ್ಯಾಯಕ್ಕೆ ಒಳಗಾಗಬೇಕಾಗುತ್ತದೆ. ಕಾನ್‌ಸ್ಟೆಬಲ್‌ನಿಂದ ಉನ್ನತ ಅಽಕಾರಿವರೆಗೂ ಬಡ್ತಿ ಮುಖ್ಯ. ನಿವೃತ್ತಿ ಬಳಿಕ ಇದರ ಮಹತ್ವ ತಿಳಿಯಲಿದೆ ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರಿ ಎಂಬುದು ಕಠಿಣವಾಗುತ್ತಿದೆ. ಅದೃಷ್ಟವಶಾತ್ ನಾನು ಕೆಲಸ ಮಾಡಿದ ಕಡೆಯಲೆಲ್ಲ ಸಿ ಬ್ಬಂದಿ ಹಾಗೂ ಮೇಲಾಽಕಾರಿಗಳ ಸಹಕಾರ ಸಿಕ್ಕ ಕಾರಣ ಎಂತಹ ಸಮಸ್ಯೆ ಎದುರಾದರೂ ಧೈರ್ಯವಾಗಿ ನಿಭಾಯಿಸಿದ್ದೇನೆ. ೧೯೯೬ನೇ ಬ್ಯಾಚ್‌ನವರು ಇಲ್ಲಿಗೆ ಕರೆಸಿ, ಸನ್ಮಾನಿಸಿದ್ದನ್ನು ಎಂದಿಗೂ ಮರೆಯಲಾರೆ ಎಂದು ಭಾವುಕರಾದರು.
ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಮಾತನಾಡಿ, ಹುಬ್ಬಳ್ಳಿ-ಧಾರವಾಡದಲ್ಲಿ ಅಕ್ರಮ ಮದ್ಯ ದಂಧೆಯನ್ನು ಮಟ್ಟ ಹಾಕಿದ ಯಶಸ್ಸು ಗಗನ್‌ದೀಪ್ ಅವರಿಗೆ ಸಲ್ಲುತ್ತದೆ. ಅಲ್ಲಿ ಪೊಲೀಸ್ ಕಮೀಷನರ್ ಆಗಿz್ದÁಗ ಕೆಲವೊಂದು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ಆಗ ಅವರ ಮೇಲೆ ಷಡ್ಯಂತ್ರಗಳು ನಡೆದವು. ಪ್ರಾಮಾಣಿಕತೆ ಮಾತಿಗೆ ಸೀಮಿತವಾಗ ದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ವಿವಿಧೆಡೆ ಎಸ್ಪಿಯಾಗಿದ್ದಾಗಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಅಽಕಾರವನ್ನು ಪತ್ನಿ, ಕುಟುಂಬಸ್ಥರು ಎಂದಿಗೂ ದುರು ಪಯೋಗ ಪಡಿಸಿಕೊಂಡಿಲ್ಲ. ಈ ಮೂಲಕ ಬದ್ಧತೆ ಪ್ರದರ್ಶಿಸಿದರು. ಪೊಲೀಸರು ಕಷ್ಟದಲ್ಲಿರುವವರಿಗೆ ಸ್ಪಂದಿಸಿ, ಸಮಸ್ಯೆ ಗಳನ್ನು ಬಗೆಹರಿಸಿದಾಗ ವ್ಯವಸ್ಥೆ ಮೇಲೆ ಜನರಲ್ಲಿ ನಂಬಿಕೆ ಹೆಚ್ಚಾಗುತ್ತದೆ. ಆ ಮೂಲಕ ಇಲಾಖೆಯ ಗೌರವವನ್ನು ಎತ್ತಿಹಿಡಿಯುವಂತೆ ಕಿವಿ ಮಾತು ಹೇಳಿದರು.
ಎಸ್ಪಿಗಳಾದ ರಂಜಿತ್‌ಕುಮಾರ್ ಬಂಡಾರು, ಎಚ್.ಟಿ.ಶೇಖರ್, ಎಎಸ್‌ಪಿಗಳಾದ ಡಾ.ಆರ್.ಶಿವಕುಮಾರ್, ಎಚ್.ಪರಮೇಶ್ವರ್, ಡಿವೈಎಸ್ಪಿ ಉಮೇಶ್ ಈಶ್ವರ್‌ನಾಯ್ಕ್, ಡಾ.ವಿಜಯಲಕ್ಷಿ÷್ಮÃ ಗಗನ್‌ದೀಪ್, ಜೈಲರ್ ಸಿದ್ದರಾಮಯ್ಯ ಇತರರಿದ್ದರು.
"

ಅಽಕಾರದಲ್ಲಿz್ದÁಗ ಸನ್ಮಾನ, ಗೌರವ ಸಹಜ. ನಿವೃತ್ತಿ ನಂತರವೂ ಅದು ಸಿಗಲಿದೆ ಎಂದರೆ ಗಗನ್‌ದೀಪ್ ಅವರ ಕಾರ್ಯವೈಖರಿ ನಿದರ್ಶನ. ಒತ್ತಡದ ನಡುವೆ ಕೆಲಸ ಮಾಡುವ ಪೊಲೀಸರಿಗೆ ಇಂತಹ ಸ್ನೇಹ ಸಮ್ಮಿಲನ ಅತ್ಯವಶ್ಯಕ. ಇದರಿಂದ ಮನಸ್ಸಿಗೂ ಸಂತೋಷ.

— | ರಂಜಿತ್‌ಕುಮಾರ್ ಬಂಡಾರು, ಚಿತ್ರದುರ್ಗ ಎಸ್ಪಿ


"

ಹುಟ್ಟು ಆಕಸ್ಮಿಕ, ಸಾವು ಖಚಿತ. ಇವೆರಡರ ನಡುವೆ ಶಾಶ್ವತವಾಗಿ ಉಳಿಯುವುದೇ ಮಾಡುವಂಥ ಒಳ್ಳೆಯ ಕೆಲಸಗಳು. ಆ ನಿಟ್ಟಿನಲ್ಲಿ ಗಗನ್‌ದೀಪ್ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ. ಮುಂದೆ ಗುರಿ, ಹಿಂದೆ ಗುರು ಇz್ದÁಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ.

— | ಎಚ್.ಟಿ.ಶೇಖರ್, ದಾವಣಗೆರೆ ಎಸ್ಪಿ