ಚಿತ್ರದುರ್ಗದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ನಾಗರಿಕ ನೋಂದಣಿ ಪದ್ಧತಿಯ ಮೊದಲನೇ ತ್ರೆÊಮಾಸಿಕ ಸಮನ್ವಯ ಸಮಿತಿ ಸಭೆಯಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಡಾ.ಜಿ.ಪಿ. ರೇಣುಪ್ರಸಾದ್, ಡಾ. ಆನಂದ್‌ಪ್ರಕಾಶ್, ಡಾ.ಬಿ.ವಿ. ಗಿರೀಶ್, ರವಿಕುಮಾರ್, ಶಶಿರೇಖಾ ಇತರರು ಇದ್ದರು.
- ಡಿಎಚ್‌ಒ, ಡಿಎಸ್‌ಗೆ ಕಾರಣ ಕೇಳಿ ನೋಟಿಸ್ ಜಾರಿ
- ವಿಳಂಬವಾದರೆ ಇತರೆ ಅಽಕಾರಿಗಳ ವಿರುದ್ಧವೂ ಕ್ರಮ
- ಎಡಿಸಿ ಬಿ.ಟಿ. ಕುಮಾರಸ್ವಾಮಿ ಎಚ್ಚರಿಕೆ
ಚಿತ್ರದುರ್ಗ: ನಿಗದಿತ ಸಮಯದೊಳಗೆ ಜನನ-ಮರಣ ನೋಂದಾಯಿಸಿ ಪ್ರಮಾಣ ಪತ್ರ ವಿತರಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ನೋಂದಣಿ ಸಹಿಸಲಾಗದು ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಅಽಕಾರಿಗಳಿಗೆ ಎಚ್ಚರಿಕೆ ನೀಡಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಮಟ್ಟದ ನಾಗರಿಕ ನೋಂದಣಿ ಪದ್ಧತಿಯ ಮೊದಲನೇ ತ್ರೆÊಮಾಸಿಕ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೨೦೨೬ರ ಜನವರಿಯಿಂದ -ೆಬ್ರವರಿ ಅಂತ್ಯದವರೆಗೆ ೧೩೯ ವಿಳಂಬ ನೋಂದಣಿ ಗಳಾಗಿವೆ.
ಇದರಲ್ಲಿ ೨೭ ಜನನ, ೧೧೨ ಮರಣ ಪ್ರಕರಣಗಳು ಸೇರಿವೆ. ಯಾವುದೇ ಘಟನೆ ನಡೆದ ೨೧ ದಿನಗಳ ಒಳಗೆ ಉಚಿತವಾಗಿ ನೋಂದಣಿ ಮಾಡಿಸಬೇಕು. ಆದರೆ, ಒಂದು ವರ್ಷಕ್ಕೂ ಮೀರಿದ ೪೩೧ ಜನನ ಹಾಗೂ ೪೬೮ ಮರಣ ಸೇರಿ ೮೯೯ ಪ್ರಕರಣ ಗಳು ಬಾಕಿ ಇರುವುದು ಅಽಕಾಗಳ ಬೇಜವಾಬ್ದಾರಿತನ ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೋಂದಣಿ ವಿಳಂಬ ಮಾಡುತ್ತಿರುವ ಜಿಲ್ಲಾ ಆರೋಗ್ಯಾಽಕಾರಿ, ಜಿಲ್ಲಾ ಶಸ್ತಚಿಕಿತ್ಸಕರಿಗೆ ಕಾರಣ ಕೇಳಿ ನೋಟಿಸ್ ನೀಡಿ ಎಂದು ಸೂಚಿಸಿದ ಅವರು, ವಿಳಂಬ ಪ್ರಕರಣಗಳಿಗೆ ಸಂಬAಽಸಿದAತೆ ಗ್ರಾಪಂ ಅಭಿವೃದ್ಧಿ ಅಽಕಾರಿ, ಗ್ರಾಮ ಆಡಳಿತಾಽಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ಜನನ-ಮರಣ ಪ್ರಮಾಣ ಪತ್ರಗಳು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಅತ್ಯಗತ್ಯ. ಆಸ್ತಿ ಖಾತೆ ಬದಲಾವ ಣÉ ಯಂತಹ ಕೆಲಸಗಳಿಗೆ ಈ ದಾಖಲೆಗಳು ಬೇಕು. ವಿಳಂಬದಿAದ ಜನರು ಕಚೇರಿಗಳಿಗೆ ಅಲೆಯುವಂತಾಗಬಾರದು ಎಂದರು.
ಜಿಲ್ಲೆಯಲ್ಲಿ ಈಚೆಗೆ ಮÊತಪಟ್ಟವರ ಹೆಸರಿನ ಜಾಗದಲ್ಲಿ ಅರ್ಜಿದಾರರ ಹೆಸರು ನಮೂದಿಸಿರುವ ಗಂಭೀರ ಪ್ರಕರಣ ಉಲ್ಲೇಖಿಸಿದ ಎಡಿಸಿ, ಮÊತರ ಹೆಸರು ಬದಲಿಗೆ ಅರ್ಜಿದಾರರ ಹೆಸರನ್ನೇ ಎಂಟ್ರಿ ಮಾಡಲಾಗಿದೆ. ಒಮ್ಮೆ ವ್ಯಕ್ತಿ ಮÊತಪಟ್ಟಿದ್ದಾನೆಂದು ದಾಖಲೆಯಾದರೆ ಆತನಿಗೆ ಸಿಗಬೇಕಾದ ಪಿಂಚಣಿ ಸೇರಿ ಎಲ್ಲ ಸರ್ಕಾರಿ ಸೌಲಭ್ಯಗಳು ಸ್ಥಗಿತಗೊಳ್ಳುತ್ತವೆ.
ಇಂತಹ ತಪ್ಪುಗಳಿಂದ ಬದುಕಿರುವವರೇ ಸರ್ಕಾರಿ ದಾಖಲೆಗಳಲ್ಲಿ ಮÊತಪಟ್ಟಂತಾಗುತ್ತದೆ. ದಾಖಲೆಗಳನ್ನು ನೀಡುವ ಮೊದಲು ಕನಿಷ್ಠ ಎರಡು ಬಾರಿ ಪರಿಶೀಲಿಸಿ, ಅನುಮೋದನೆ ನೀಡಬೇಕು. ಇದರಲ್ಲಿ ನಿರ್ಲಕ್ಷ್ಯ ತೋರುವ ಅಽಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಕುಮಾರಸ್ವಾಮಿ ಹೇಳಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಽಕಾರಿ ರವಿಕುಮಾರ್ ಮಾತನಾಡಿ, ಎಲ್ಲ ಸರ್ಕಾರಿ ಆಸ್ಪತ್ರೆಗಳು ಜನನ, ಮರಣ ಘಟನೆಗಳನ್ನು ಸಂ ಭವಿಸಿದ ೨೧ ದಿನದೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿ ಪ್ರಮಾಣ ಪತ್ರ ವಿತರಿಸುವುದು. ಆಸ್ಪತ್ರೆಯಿಂದ ತಾಯಿ ಮತ್ತು ಮಗು ಬಿಡುಗಡೆಯಾಗುವ ಮುನ್ನವೇ ಜನನ ಪ್ರಮಾಣ ಪತ್ರ ವಿತರಿಸಬೇಕು. ಆನ್‌ಲೈನ್‌ನ ಇ-ಜನ್ಮ ಪೋರ್ಟಲ್‌ನಲ್ಲಿ ಪ್ರತಿ ತಿಂಗ ಳ ೫ನೇ ತಾರೀಖಿನೊಳಗೆ ಜನನ-ಮರಣಗಳ ಘಟನೆಗಳ ವರದಿಯನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು ಎಂದರು.
೨೦೨೪ನೇ ವರ್ಷದ ಜನನ -ಮರಣ ದಾಖಲೆಗಳನ್ನು ಸಂರಕ್ಷಿಸಲು ಎಲ್ಲ ನೋಂದಣಾಽಕಾರಿ, ಉಪನೋಂದಣಾಽಕಾರಿಗಳು ಸಂ ಬAಽಸಿದ ತಾಲೂಕು ಕಚೇರಿ,ನಗರ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ. ಮಂಜುನಾಥ್, ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಜಿಲ್ಲಾಸ್ಪತ್ರೆ ಆರ್‌ಎಂಒ ಡಾ. ಆನಂದ ಪ್ರಕಾಶ್, ತಾಲೂಕು ಆರೋಗ್ಯಾಽಕಾರಿ ಡಾ.ಬಿ.ವಿ. ಗಿರೀಶ್, ಜಿಲ್ಲಾ ಸಂಖ್ಯಾ ಸಂಗ್ರಹಣಾಽಕಾರಿ ಕಚೇರಿ ಸಹಾಯಕ ನಿರ್ದೇಶಕಿ ಶಶಿರೇಖಾ, ಸಹಾಯಕ ಸಾಂಖ್ಯಿಕ ಅಽಕಾರಿಗಳಾದ ಬಿ.ಬಿ. ಅಶ್ವತ್ಥಾಮ,ಎಚ್.ವೀಣಾ,ಮಮತಾ, ನಜರೀನ್, ಸಾಂಖ್ಯಿಕ ನಿರೀಕ್ಷ ಕ ರಾಕೇಶ್ ಇದ್ದರು.
ಚಿತ್ರದುರ್ಗದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ನಾಗರಿಕ ನೋಂದಣಿ ಪದ್ಧತಿಯ ಮೊದಲನೇ ತ್ರೆÊಮಾಸಿಕ ಸಮನ್ವ ಯ ಸಮಿತಿ ಸಭೆಯಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಡಾ.ಜಿ.ಪಿ. ರೇಣುಪ್ರಸಾದ್, ಡಾ. ಆನಂದ್‌ಪ್ರಕಾಶ್, ಡಾ.ಬಿ.ವಿ. ಗಿರೀಶ್, ರವಿಕುಮಾರ್, ಶಶಿರೇಖಾ ಇತರರು ಇದ್ದರು.