ಹಿರಿಯೂರಿನಲ್ಲಿ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಸಭೆ ನಡೆಯಿತು. Meeting
ಚಿತ್ರದುರ್ಗ

ವಿವಿ ಸಾಗರಕ್ಕೆ 2 ಟಿಎಂಸಿ ಹರಿಸಿ

ಸ್ಪಂದಿಸದಿದ್ದರೆ ಹಿರಿಯೂರು ಬಂದ್​, ರೈತರ ಹಿತರಣಾ ಸಮಿತಿ ಆಗ್ರಹ

ಹಿರಿಯೂರು: ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ಕನಿಷ್ಟ ಎರಡು ಟಿಎಂಸಿ ನೀರು ಹರಿಸಬೇಕು. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಹಿರಿಯೂರ್​ ಬಂದ್​ ಆಚರಣೆ ಮಾಡುವುದು ಅನಿವಾರ್ಯವಾಗಲಿದೆ ಎಂದು ವಿವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತರಣಾ ಸಮಿತಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತುರ್ತಾಗಿ ವಿವಿ ಸಾಗರಕ್ಕೆ ಎರಡು ಟಿಎಂಸಿ ನೀರು ಹರಿಸುವುದು ಸೇರಿದಂತೆ ಹಲವು ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ರುಮೂರ್ತಿ ಅವರನ್ನು ಭೇಟಿ ಮಾಡಲು ಗುರುವಾರ ನಡೆದ ಸಮಿತಿ ಸಭೆ ನಿರ್ಧರಿಸಿದೆ. ಒಂದು ವೇಳೆ ಸರ್ಕಾರ ಸ್ಪಂದಿಸಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು.

ಚಿತ್ರದುರ್ಗ ಜಿಲ್ಲೆಯ ಕುಡಿಯುವ ನೀರಿನ ಪ್ರಮುಖ ಕೇಂದ್ರವಾದ ವಾಣಿವಿಲಾಸ ಸಾಗರ ಜಲಾಶಯಕ್ಕೆ ಜಿಲ್ಲೆಯ ಬಹುತೇಕ ತಾಲೂಕುಗಳ ಕುಡಿಯುವ ನೀರಿಗಾಗಿ ಈ ವರ್ಷ ಕನಿಷ್ಠ ಎರಡು ಟಿಎಂಸಿ ನೀರನ್ನಾದರೂ ಹರಿಸಬೇಕು. ಇಲ್ಲ ವಾದಲ್ಲಿ ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ತೀವ್ರ ತೊಂದರೆಯಾಗಲಿದೆ. ಅಲ್ಲದೆ, ಅಚ್ಚುಕಟ್ಟುದಾರ ರೈತರಿಗೆ 2027ರ ಬೇಸಿಗೆ ಹಂಗಾಮಿಗೆ ನೀರು ಕೊಡುವುದು ಸಹ ಕಷ್ಟವಾಗುತ್ತದೆ. ಆದ್ದರಿಂದ ತುರ್ತಾಗಿ ಭದ್ರಾ ಮೇಲ್ದಂಡೆ ಯೋಜನೆಯಿಂದ ಕನಿಷ್ಠ ಎರಡು ಟಿಎಂಸಿ ನೀರನ್ನು ವಿ.ವಿ ಸಾಗರ ಜಲಾಶಯಕ್ಕೆ ಹರಿಸಬೇಕು ಎಂದು ಹಲವು ಮುಖಂಡರು ಒತ್ತಾಯಿಸಿದರು.

ಸಂಚಾಲಕ ಆರನಕಟ್ಟೆ ಶಿವಕುಮಾರ್​ ಮಾತನಾಡಿ, ಅಚ್ಚು ಕಟ್ಟುದಾರ ರೈತರ ಜಮೀನುಗಳಿಗೆ ನೀರು ಮೀಸಲಿಡದಿದ್ದಲ್ಲಿ ತೋಟಗಳು ಒಣಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು. ನಿರ್ದೇಶಕ ಪಿಟ್ಲಾಲಿ ಶ್ರೀನಿವಾಸ್​ ಮಾತನಾಡಿ, ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಇದರಿಂದ ಮುಂದಿನ ವರ್ಷ ನೀರು ಪಂಪ್​ ಮಾಡು ವುದು ಕಷ್ಟವಾಗಲಿದೆ ಎಂದು ತಿಳಿಸಿದರು. ಖಜಾಂಚಿ ಬಬ್ಬೂರು ಸುರೇಶ್​, ಉಪಾಧ್ಯ ರಾಜೇಂದ್ರ, ಸಿವಿಲ್​ ಇಂಜಿನಿಯರ್​ ಶಿವರಾಮ್​ ಹೊನ್ನಯ್ಯ, ಆರ್​.ಕೆ. ಗೌಡ, ಅದಿವಾಲ ತ್ರಯಂಬಕಮೂರ್ತಿ, ಎರೆನಾಡು ರೈತ ಸಂದ ಕೆ.ಟಿ. ರುದ್ರಮುನಿ, ಶಿಡ್ಲಯ್ಯನಕೋಟೆ ಮಲ್ಲಿಕಾರ್ಜುನಪ್ಪ, ಮಮತಾ ಕೃಷ್ಣಮೂರ್ತಿ ಸಭೆಯಲ್ಲಿದ್ದರು.

ಮತ್ತೊಮ್ಮೆ ಚರ್ಚೆ

ವಿವಿ ಸಾಗರಕ್ಕೆ ಭದ್ರಾ ಜಲಾಶಯದಿಂದ ನೀರು ಹರಿಸುವ ಕುರಿತು ಮತ್ತೊಮ್ಮೆ ಚರ್ಚಿಸಲಾಗುವುದು. ನೀರು ಬಿಡಲು ಒಪ್ಪದಿದ್ದಲ್ಲಿ ಶ್ರೀದಲ್ಲೆ ಉಗ್ರ ಹೋರಾಟ ಮಾಡಿ ಹಿರಿಯೂರು ಬಂದ್​ ಮಾಡಲಾಗುವುದು ಎಂದು ಕಾರ್ಯಾಧ್ಯ ಎಚ್​.ಆರ್​. ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಆಲೂರು ಸಿದ್ದರಾಮಪ್ಪ ಎಚ್ಚರಿಸಿದರು.

ಏತ ನೀರಾವರಿ ಕನಸಿಗೆ ಭರವಸೆ

ಧರ್ಮಪುರ ಹೋಬಳಿ ಗಡಿಭಾಗದ ಕೆರೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ಮಹತ್ವಾಕಾಂೆಯ ಏತ ನೀರಾವರಿ 2ನೇ ಹಂತದ ಯೋಜನೆ ಕುರಿತು ತಕ್ಷಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್​ಗೆ ಪತ್ರ ಬರೆದಿದ್ದಾರೆ. ಧರ್ಮಪುರ ಹೋಬಳಿಯ ಹಲಗಲದ್ದಿ, ಮದ್ದಿಹಳ್ಳಿ, ಖಂಡೇನಹಳ್ಳಿ, ಹೊಸಕೆರೆ, ಬೇತೂರು, ಅರಳಿಕೆರೆ ಕೆರೆಗಳಿಗೆ ನೀರು ತುಂಬಿಸಲು ಪ್ರಸ್ತಾಪಿಸಿರುವ ಕಾಮಗಾರಿಯ ವಿವರವಾದ ಯೋಜನಾ ವರದಿ ತಯಾರಿಸಿ ತಾಂತ್ರಿಕ ಮೌಲ್ಯ ರ್ನಿಣಯ ಸಮಿತಿ ಮುಂದೆ ಮಂಡಿಸಿ ತೀರುವಳಿ ಪಡೆದು ಪ್ರಸ್ತಾವನೆಯನ್ನು ಸರ್ಕಾರಕ್ಕೆ ತಕ್ಷಣ ಸಲ್ಲಿಸಬೇಕು ಎಂದು ಪತ್ರದ ಮೂಲಕ ಕೋರಲಾಗಿದೆ. ಉಪ ಚುನಾವಣೆ ೂಷಣೆಗೂ ಮುನ್ನ ಯೋಜನೆಗೆ ಅನುಮೋದನೆ ನೀಡಲು ರೈತರು, ಕಾಂಗ್ರೆಸ್​ ಮುಖಂಡರು ಸರ್ಕಾರದ ಮೇಲೆ ಒತ್ತಡ ಹೇರಿದ್ದು, ಇದಕ್ಕೆ ಪೂರಕವಾಗಿ ಸ್ಥಳಿಯ ಮುಖಂಡರು ಮುಂದೆ ನಿಂತು ಯೋಜನೆ ಕಾರ್ಯಗತಕ್ಕೆ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸುತ್ತಿರುವುದು ರೈತರಲ್ಲಿ ಭರವಸೆ ಮೂಡಿಸಿದೆ. 1 ಮತ್ತು 2ನೇ ಹಂತದ ಏತ ನೀರಾವರಿ ಯೋಜನೆಗೆ ಶಾಶ್ವತವಾಗಿ ನೀರಿನ ಹಂಚಿಕೆ ಮಾಡಿದರೆ ಮಾತ್ರ ಭವಿಷ್ಯದಲ್ಲಿ ಗಡಿಭಾಗದ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಅನುದಾನದ ಜತೆ ನೀರಿನ ಅಲೋಕೇಷನ್​ ಕುರಿತು ಸ್ಪಷ್ಟಪಡಿಸಬೇಕು ಎಂಬುದು ರೈತರು ಒತ್ತಾಯವಾಗಿದೆ.

ವಿವಿ ಸಾಗರ ನೀರೇ ಮೂಲಾಧಾರ

ಅಧ್ಯಕ್ಷ ಕಸವನಹಳ್ಳಿ ರಮೇಶ್​ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಎಲ್ಲ ತಾಲೂಕುಗಳ ಜನರಿಗೆ ವಿವಿ ಸಾಗರ ನೀರೇ ಮೂಲಾಧಾರವಾಗಿದೆ. ಇಲ್ಲಿವರೆಗೆ ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ತಾಲೂಕುಗಳ ಸಣ್ಣ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸಲಾಗಿದ್ದು, ಇದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ ಎಂದರು. ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸದಿದ್ದರೆ ಬೇಸಿಗೆ ದಿನಗಳಲ್ಲಿ ನೀರಿನ ಸಮಸ್ಯೆಯಾಗಲಿದೆ. ಹೀಗಾಗಿ ಸಚಿವರ ಗಮನಕ್ಕೆ ತಂದು ಒತ್ತಡ ತರಬೇಕಾಗಿದೆ ಎಂದರು.

ಏತ ನೀರಾವರಿ 2ನೇ ಹಂತದ ಯೋಜನೆಗೆ ಅನುಮೋದನೆ ಸಿಗುವ ಭರವಸೆಯಿದ್ದು, ವಿವಿ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸಿ, ಹೊಸಹಳ್ಳಿ ಬಳಿಯ ಏತ ನೀರಾವರಿ ಪಂಪ್​ಹೌಸ್​ನಿಂದ ಧರ್ಮಪುರ ಸೇರಿದಂತೆ 7 ಕೆರೆಗೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸಬೇಕು.
ಸಕ್ಕರ ಗಿರೀಶ್​, ಅಧ್ಯಕ್ಷ ಧರ್ಮಪುರ ನೀರಾವರಿ ಹೋರಾಟ ಸಮಿತಿ.