ಚಿತ್ರದುರ್ಗ ತಾಲೂಕು ಗೂಳಯ್ಯನಹಟ್ಟಿ ಮುರಾರ್ಜಿ ವಸತಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಡಿಆರ್‌ಜಿ ಸಭೆ ಯಲ್ಲಿ ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್, ಉಪ ಪ್ರಾಚಾರ್ಯ ಎಸ್. ನಾಗಭೂಷಣ್ ಇತರರು ಪಾಲ್ಗೊಂಡಿದ್ದರು. 
ಚಿತ್ರದುರ್ಗ

ಸಂಖ್ಯಾಜ್ಞಾನ ಸಾಮರ್ಥ್ಯ ವೃದ್ಧಿಗೆ ಮರುಸಿಂಚನ ಪೂರಕ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್ ಅನಿಸಿಕೆ
  • ಜಿಲ್ಲಾಮಟ್ಟದ ಡಿಆರ್‌ಜಿ ಸಭೆ
  • ಓದು ಕರ್ನಾಟಕ
ಚಿತ್ರದುರ್ಗ: ವಿದ್ಯಾರ್ಥಿಗಳಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಸಾಮರ್ಥ್ಯ ಬೆಳೆಸಲು ಮರುಸಿಂಚನ ಕಾರ್ಯಕ್ರಮ ಪೂರಕವಾಗಿದೆ ಎಂದು ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್ ಹೇಳಿದರು.
ಡಯಟ್, ಬಿಇಒ ಮತ್ತು ಬಿಆರ್‌ಸಿ ಕಚೇರಿಯಿಂದ ಚಿತ್ರದುರ್ಗ ತಾಲೂಕು ಗೂಳಯ್ಯನಹಟ್ಟಿ ಮುರಾರ್ಜಿ ವಸತಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಡಿಆರ್‌ಜಿ ಸಭೆ ಉದ್ಘಾಟಿಸಿ ಮಾತನಾಡಿದರು.
ಇಲಾಖೆ ಅಳವಡಿಸಿರುವ ಗಣಿತ ಗಣಕ, ಓದು ಕರ್ನಾಟಕ, ಮರುಸಿಂಚನ ಕಾರ್ಯಕ್ರಮಗಳು ಬುನಾದಿ ಸಾಕ್ಷರತೆ ವೃದ್ಧಿಗೆ ಪೂ ರಕವಾöದೆ. ಶಿಕ್ಷಣದ ಮೂಲ ಉದ್ದೇಶ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಅನುಷ್ಠಾ ನಾಽ ಕಾರಿಗಳ ಪಾತ್ರ ಮುಖ್ಯವಾಗಿದೆ. ಮಕ್ಕಳ ಕಲಿಕಾ ಪ್ರಗತಿ, ಇಲಾಖೆ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಈ ಕಾರ್ಯ ಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಉಪ ಪ್ರಾಚಾರ್ಯ ಎಸ್. ನಾಗಭೂಷಣ್ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳ ಪ್ರಗತಿ, ೬ ತಾಲೂಕುಗಳಲ್ಲಿ ಪೂರ್ವ ಪ್ರಾಥ ಮಿಕ ಹಂತದಿ ಂದ ಎಸ್‌ಎಸ್‌ಎಲ್‌ಸಿವರೆಗೆ ಕಲಿಕಾ ಪ್ರಗತಿ, ಕಾರ್ಯಕ್ರಮಗಳ ಅನುಷ್ಠಾನ ಕುರಿತು ಚಿಂತನ ಮಂಥನ ನಡೆ ಸುವಲ್ಲಿ ಈ ಸಭೆ ಪ್ರಮುಖವಾಗಿದೆ ಎಂದರು.
ಹಿರಿಯ ಉಪನ್ಯಾಸಕರಾದ ಎಸ್.ಸಿ. ಪ್ರಸಾದ್,ಅಶ್ವಥ್‌ನಾರಾಯಣ, ತಿಪ್ಪೇಸ್ವಾಮಿ, ಜ್ಞಾನೇಶ್ವರಿ, ಬಿಇಒಗಳಾದ ಗಿರಿಜಾ, ಸಿ. ಎಂ.ತಿಪ್ಪೇಸ್ವಾಮಿ, ಸೈಯದ್‌ಮೋಸಿನ್, ಸುರೇಶ್, ನಿರ್ಮಲಾದೇವಿ, ಶಿಕ್ಷಣಾಽಕಾರಿ ತಿಪ್ಪೇಸ್ವಾಮಿ, ಡಿವೈಪಿಸಿ ವೆಂಕಟೇಶಪ್ಪ, ಬಿಆರ್‌ಸಿ ಸಂಪತ್ ಕುಮಾರ್, ವಸತಿ ಶಾಲೆ ಪ್ರಾಚಾರ್ಯ ಮಂಜುನಾಥರೆಡ್ಡಿ, ಉಪನ್ಯಾಸಕರಾದ ಎಸ್. ಬಸವರಾಜು, ಶಿವ ಲೀಲಾ, ಎಲ್. ರೇವಣ್ಣ, ರಾಮಚಂದ್ರಪ್ಪ, ಪದ್ಮಾ, ಮಂಜುಳಾ, ರಂಗಸ್ವಾಮಿ, ವಿಷಯ ಪರಿವೀಕ್ಷಕ ಕೆ.ಜಿ. ಪ್ರಶಾಂತ್, ನಿತ್ಯಾನಂದ, ರಂಗನಾಯ್ಕ, ತಾಂತ್ರಿಕ ಸಹಾಯಕ ಅವಿನಾಶ್, ಲಿಂಗರಾಜು ಇತರರು ಇದ್ದರು.