ಮುರುಘಾಮಠ ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ಸಸಿ ನೆಡುವ ಸಪ್ತಾಹ ಕಾರ್ಯಕ್ರಮದಲ್ಲಿ ನ್ಯಾಯಾಽÃಶೆ ರಶ್ಮಿ ಎಸ್. ಮರಡಿ, ಡಾ. ಬಸವಕುಮಾರ ಸ್ವಾಮೀಜಿ, ಶ್ರೀಬಸವ ಕೃಷ್ಣ ಯಾದಾವನಂದ ಸ್ವಾಮೀಜಿ, ಕೆ.ಎಂ. ವೀರೇಶ್, ಆನಂತರೆಡ್ಡಿ ಇತರರು ಇದ್ದರು. 
ಚಿತ್ರದುರ್ಗ

ಸಸ್ಯ ಸಂಪತ್ತಿನ ವೃದ್ಧಿಯಿಂದ ಪರಿಸರ ಮಾಲಿನ್ಯಕ್ಕೆ ಕಡಿವಾಣ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಽÃಶೆ ರಶ್ಮಿ ಎಸ್.ಮರಡಿ ಅಭಿಮತ
  • ಬಾಪೂಜಿ ಪ್ರೌಢಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ
  • ಸಸ್ಯ ಸಂಪತ್ತು ವೃದ್ಧಿ
ಚಿತ್ರದುರ್ಗ: ಸಸ್ಯ ಸಂಪತ್ತು ವೃದ್ಧಿಯಾದರೆ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ನಗರದ ಪ್ರಧಾನ ಸಿವಿಲ್ ಮತ್ತು ಜೆಎಂಎ-ï‌ಸಿ ನ್ಯಾಯಾಽÃಶೆ ರಶ್ಮಿ ಎಸ್. ಮರಡಿ ಹೇಳಿದರು.
ನಗರದ ಹೊರ ವಲಯದ ಮಲ್ಲಾಪುರ ಬಾಪೂಜಿ ಸಮನ್ವಯ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಮುರುಘಾಮಠ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಸಪ್ತಾಹದ ೩ನೇ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಸಿಗಳನ್ನು ನೆಡುವುದರೊಂದಿಗೆ ಅವುಗಳನ್ನು ಮಕ್ಕಳಂತೆ ಜೋಪಾನವಾಗಿ ಬೆಳೆಸಬೇಕಿದೆ. ಗಿಡಮರಗಳಿಂದ ಮಾಲಿನ್ಯ ನಿಯಂತ್ರಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಆಸ್ತಿ ರೂಪದಲ್ಲಿ ಕೊಡೋಣ ಎಂದರು.
ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಈ ಸಪ್ತಾಹದಲ್ಲಿ ೭ ಸಾವಿರ ಸಸಿಗಳನ್ನು ನೆಡುವ ಗುರಿ ಇದೆ. ಶ್ರೀಮಠದ ಜಾಗ, ಅರಣ್ಯ ಭೂಮಿಯನ್ನು ಗುರುತಿಸಿ ೧೦೦ ಎಕರೆಯಲ್ಲಿ ಸಸಿ ನೆಡುತ್ತೇವೆ ಎಂದರು.
ಶ್ರೀ ಯಾದವ ಗುರುಪೀಠದ ಶ್ರೀ ಬಸವ ಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಪ್ರಕೃತಿಯನ್ನು ರಕ್ಷಿಸ ಬೇಕಿ ದೆ. ಮುರುಘಾಮಠ ಸಸಿ ನೆಡುವ ಕಾರ್ಯಕ್ರಮದ ಮೂಲಕ ಪರಿಸರದ ಬಗ್ಗೆ ಕಾಳಜಿ ವಹಿಸಿದೆ. ಶ್ರೀಮಠ ಜನಪರ ಮತ್ತು ಜೀವಪರ ಕಾಳಜಿ ಇಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದರು.
ವಾಯುಮಾಲಿನ್ಯ ಕುರಿತು ವಿಷಯಾವಲೋಕನ ಮಾಡಿದ ನಿವÊತ್ತ ಪ್ರಾಚಾರ್ಯ ಡಾ.ಇ. ರುದ್ರಮನಿ, ವಾಯು ಮಾಲಿನ್ಯದಿಂದ ಪರಿಸರದ ಮೇಲೆ ಅಗಾಧ ದುಷ್ಪರಿಣಾಮ ಉಂಟಾಗುತ್ತದೆ. ಪ್ರತಿಯೊಬ್ಬರೂ ಒಂದಕ್ಕಿAತ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಬೇಕಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ. ಕೃಷ್ಣಮೂರ್ತಿ, ನಿವೃತ್ತ ಡಿವೈಎಸ್ಪಿಗಳಾದ ಮಹಾಂತರೆಡ್ಡಿ, ಅಬ್ದುಲ್‌ರೆಹಮಾನ್, ರೆಡ್‌ಕ್ರಾಸ್ ಸಂಸ್ಥೆಯ ಆನಂತರೆಡ್ಡಿ, ಸಮಾಜಸೇವಕಿ ಗಾಯತ್ರಿ ಶಿವರಾಮ್, ಕೆಇಬಿ ಷಣ್ಮುಖಪ್ಪ, ಪ್ರಾಂಶುಪಾಲರಾದ ಪಂಚಾಕ್ಷರಿ, ಎಸ್. ದಿನೇಶ್, ನಾನಾ ಸಮಾಜ, ಸಂಘ-ಸAಸ್ಥೆಗಳ ಪ್ರಮುಖರು ಇದ್ದರು.
ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ. ವೀರೇಶ್ ಸ್ವಾಗತಿಸಿ, ಶೈಲಜಾ ವಂದಿಸಿದರು.