ಕೆ.ಎಂ. ಸುದರ್ಶನ್,ಮೇಘನಾ, ಕೆ. ಗಂಗೋತ್ರಿ,ಪಿ.ಎನ್. ಅಂಕಿತಾ,ಎಚ್.ಆರ್. ಆಕಾಶ್,ನಮಿತಾರಾಜ್,ಡಿ.ನೇತ್ರಾ, ಆರ್.ಸಂದೇಶ್ 
ಚಿತ್ರದುರ್ಗ

ನೀಟ್‌ನಲ್ಲಿ ಎಸ್‌ಆರ್‌ಎಸ್ ಪಿಯು ಕಾಲೇಜಿಗೆ ದಾಖಲೆಯ ಫಲಿತಾಂಶ

ಪ್ರಮುಖ ಮುಖ್ಯಾಂಶಗಳು

  • ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳ ಪ್ರವೇಶಕ್ಕೆ ಅರ್ಹತೆ
  • ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹರ್ಷ
  • ರಾಜ್ಯ,ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ರ‍್ಯಾಂಕ್‌
ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಪಿಯು ಕಾಲೇಜು ನೀಟ್ ಪರೀಕ್ಷೆಯಲ್ಲಿ ರಾಜ್ಯ,ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ರ‍್ಯಾಂಕ್‌ ಗಳೊಂದಿಗೆ ಉತ್ತಮ -Àಲಿತಾಂಶ ಪಡೆದಿದೆ.
೨೦೨೬ರ ನೀಟ್ ಪರೀಕ್ಷೆಗೆ ಹಾಜರಾಗಿದ್ದ ದೇಶದ ಒಟ್ಟು ೨೨,೭೯,೦೦೦ ವಿದ್ಯಾರ್ಥಿಗಳಲ್ಲಿ, ರಾಷ್ಟ್ರ ಮಟ್ಟದಲ್ಲಿ ೭೫ನೇ ರ‍್ಯಾಂಕ್‌ನೊಂದಿಗೆ ಎಸ್‌ಆರ್‌ಎಸ್ ಪಿಯು ಕಾಲೇಜು ವಿದ್ಯಾರ್ಥಿಗಳು ಐತಿಹಾಸಿಕ ದಾಖಲೆ ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಾಲೇಜಿನ ಕೆ.ಎಂ. ಸುದರ್ಶನ್ ೭೨೦ಕ್ಕೆ ೬೮೦ ಅಂಕಗಳನ್ನು ಪಡೆದು ರಾಜ್ಯಹಾಗೂ ರಾಷ್ಟ್ರಮಟ್ಟದಲ್ಲಿ ಐತಿಹಾಸಿಕ ಸಾಧನೆಗೆ ಕಾರಣ ರಾಗುವುದರ ಜತೆಗೆ ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ನಂತರ ಸ್ಥಾನದಲ್ಲಿ ವೈ. ಮೇಘನಾ-೬೦೯, ಕೆ. ಗಂಗೋತ್ರಿ-೫೬೨, ಪಿ.ಎನ್. ಅಂಕಿತಾ-೫೫೭, ಎಚ್.ಆರ್. ಆಕಾಶ್-೫೪೫, ನಮಿತಾರಾಜ್-೫೩೫, ಡಿ. ನೇತ್ರಾ-೫೩೧, ಆರ್. ಸಂದೇಶ್- ೫೨೩ ಹೀಗೆ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದುಕೊಂಡಿದ್ದಾರೆ. ೬೩ ವಿದ್ಯಾರ್ಥಿಗಳು ೫೧೫ಕ್ಕಿಂತ ಅಽಕ ಅಂಕಗಳೊಂದಿಗೆ ಶೇ.೯೩ ವಿದ್ಯಾರ್ಥಿಗಳು ಸರ್ಕಾರಿ ಕೋಟಾ ದಡಿ ಎಂಬಿಬಿಎಸ್ ಸೀಟಿಗೆ ಅರ್ಹತೆ ಗಳಿಸಿದ್ದಾರೆ.
ಇವರೆಲ್ಲರೂ ರೆಗ್ಯೂಲರ್ ಬ್ಯಾಚ್‌ನ ವಿದ್ಯಾರ್ಥಿಗಳಾಗಿದ್ದು, ಎಐಎಂಎಸ್ ಹಾಗೂ ಇತರೆ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವುದು ವಿಶೇಷ.
ರಾಷ್ಟ್ರ ಮಟ್ಟದಲ್ಲಿ ರ‍್ಯಾಂಕ್‌ನೊಂದಿಗೆ ಉತ್ತಮ ಫಲಿತಾಂಶ ಪಡೆದು ಕಾಲೇಜು ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾಧನೆಗೆ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಆಡಳಿತ ಮಂಡಳಿ ಪ್ರಮುಖರು, ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.