ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಸಿ. ಶಿವಲಿಂಗಪ್ಪ ಮೀರಾಸಾಬಿಹಳ್ಳಿ, ಎಂ. ನಾರಾಯಣಸ್ವಾಮಿ, ನಿರಂಜನ ದೇವರಮನೆ, ಪ್ರೊ.ಎಂ.ಜಿ. ರಂಗಸ್ವಾಮಿ, ನಿರ್ಮಲಾ ಮರಡಿಹಳ್ಳಿ, ಗೀತಾ ಭರಮಸಾಗರ ಇತರರು ಇದ್ದರು. 
ಚಿತ್ರದುರ್ಗ

ಜ್ಞಾನಾಭಿವೃದ್ಧಿಗೆ ಪುಸಕ್ತ, ಪತ್ರಿಕೆ ಓದು ಬಹಳ ಮುಖ್ಯ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಡಾ.ಸಿ. ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಅನಿಸಿಕೆ
  • ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ
  • ಜ್ಞಾನಾರ್ಜನೆ
ಚಿತ್ರದುರ್ಗ: ಆಧುನಿಕ ಕಾಲಘಟ್ಟದಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಸಾಹಿತಿ ಡಾ.ಸಿ. ಶಿವಲಿಂಗಪ್ಪ ಮೀರಾ ಸಾಬಿಹಳ್ಳಿ ಹೇಳಿದರು.
ಕನ್ನಡ ಪುಸ್ತಕ ಪ್ರಾಽಕಾರದ ಚಿತ್ರದುರ್ಗ ಜಿಲ್ಲಾ ಜಾಗÊತಿ ಸಮಿತಿ ನಗರದ ಪ್ರೊ. ಎಚ್.ಲಿಂಗಪ್ಪ ಅವರ ನಿವಾಸದಲ್ಲಿ ಭಾನುವಾರ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ಪ್ರಭಾವದಿಂದ ಪುಸ್ತಕ ಓದುವ ಹವ್ಯಾಸ ಕಡಿಮೆ ಆಗುತ್ತಿದೆ. ಬದುಕಿನ ತಲ್ಲಣ ಹಾಗೂ ಪಲ್ಲಟಗಳ ನಡುವೆ ಬೌದ್ಧಿಕ ವಿಕಾಸ, ಜ್ಞಾನಾರ್ಜನೆಗೆ ಪುಸ್ತಕಗಳ ಓದು ಅಗತ್ಯವಿದೆ. ಈ ದಿಸೆಯಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಅರ್ಥಪೂರ್ಣ, ಸಾರ್ಥಕ ಕಾರ್ಯಕ್ರಮವಾಗಿದೆ.
ನಾಡಿನ ಸಾಹಿತ್ಯ ಸಂಪತ್ತು ಹೇರಳವಾಗಿದೆ. ಓದುವ ಅಭ್ಯಾಸ ಬೆಳಸಿಕೊಳ್ಳುವ ಮೂಲಕ ಲೇಖಕ, ಕÊತಿಗೆ ಗೌರವ ಕೊಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕಿದೆ. ಆಗ ಪುಸ್ತಕಗಳು ಸರಕಾಗದೆ, ಸಂಸ್ಕೃತಿಯಾಗಿ ಉಳಿಯುತ್ತವೆ ಎಂದರು.
ಜಿಲ್ಲಾ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಎಂ. ನಾರಾಯಣಸ್ವಾಮಿ ಮಾತನಾಡಿ, ಕÊತಿಕಾರರ ಸಂಖ್ಯೆ ಜಾಸ್ತಿಯಾಗಿದ್ದು, ಓದುವವರ ಸಂಖ್ಯೆ ವಿರಳವಾಗುತ್ತಿದೆ. ಸಾಮಾನ್ಯ ಜ್ಞಾನಕ್ಕೆ ಪುಸ್ತಕ, ಪತ್ರಿಕೆಗಳು ತುಂಬಾ ಸಹಕಾರಿಯಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಚ್. ಲಿಂಗಪ್ಪ ಮಾತನಾಡಿ, ಬುದ್ಧ, ಬಸವ, ಗಾಂಽಜೀ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಹುಮುಖಿ ಚಿಂತನೆಗಳು ಕÊತಿಗಳಲ್ಲಿ ವ್ಯಕ್ತವಾಗಿ ಎಲ್ಲರ ಬದುಕಿನಲ್ಲಿ ಅನುಷ್ಠಾನಗೊಂಡಾಗ ಸತ್ವಪೂರ್ಣ, ಸಾತ್ವಿಕ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಪುಸ್ತಕ ಪ್ರಾಽಕಾರದ ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ನಿರಂಜನ ದೇವರಮನೆ, ಪ್ರೊ.ಎಂ.ಜಿ. ರಂಗಸ್ವಾಮಿ, ಡಾ. ಪ್ರವೀಣ ಕುಮಾರ್, ಪ್ರೊ. ಚೆನ್ನಬಸಪ್ಪ, ರಂಗಸ್ವಾಮಿ ಸಕ್ಕರ, ನಿರ್ಮಲಾಮರಡಿಹಳ್ಳಿ, ಗೀತಾ ಭರಮಸಾಗರ, ಗಂಜಿಗಟ್ಟೆ ಕÊಷ್ಣಮೂರ್ತಿ, ಕೆ.ಸಿ.ರುದ್ರೇಶ್ ಇತರರು ಇದ್ದರು.