ಚಿತ್ರದುರ್ಗ ಮುರುಘಾಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವ ಶರಣ ಶಿವನಾಗಮಯ್ಯ ಜಯಂತ್ಯುತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಆರ್. ತಿಪ್ಪೇಸ್ವಾಮಿ, ಶ್ರೀ ಗೋವಿಂದ ಸ್ವಾಮಿ, ಡಾ.ಎಲ್.ಈಶ್ವರಪ್ಪ ಇತರರು ಇದ್ದರು.
- ಆರ್. ತಿಪ್ಪೇಸ್ವಾಮಿ ಅನಿಸಿಕೆ
- ಶಿವ ಶರಣ ಶಿವನಾಗಮಯ್ಯನವರ ಜಯಂತ್ಯುತ್ಸವ
- ಮುರುಘಾಮಠ
ಚಿತ್ರದುರ್ಗ: ಹನ್ನೇರಡನೇ ಶತಮಾನ ಸಕಲ ಜೀವರಾಶಿಗಳಿಗೂ ಲೇಸನ್ನೇ ಬಯಸಿದ, ಸಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾ ಡಿದ ಕಾಲ. ಬಸವಣ್ಣ ಸರ್ವರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ದಾರ್ಶನಿಕ ಎಂದು ಚಿತ್ರದುರ್ಗ ಅಂಚೆ ಇಲಾಖೆಯ ಆರ್. ತಿಪ್ಪೇ ಸ್ವಾಮಿ ಹೇಳಿದರು.
ಮುರುಘಾಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವ ಶರಣ ಶಿವನಾಗಮಯ್ಯನವರ ಜಯಂತ್ಯುತ್ಸವದಲ್ಲಿ ವಿಷಯಾವಲೋಕನ ಮಾಡಿ ದ ಅವರು, ಶರಣರ ತತ್ವಗಳು ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. ವೈಚಾರಿಕತೆ ಪ್ರತಿಪಾದಿಸುವ ವಚನಗಳ ಮೂಲಕ ಬಸವಾ ದಿ ಶರಣರು ಸಮಾಜಕ್ಕೆ ಸುಜ್ಞಾನದ ಬೆಳಕು ಪಸರಿಸಿದ್ದಾರೆ. ಅಂಥವರಲ್ಲಿ ಶಿವನಾಗಮಯ್ಯನವರೂ ಒಬ್ಬರು ಎಂದರು.
ಸಾನ್ನಿಧ್ಯವಹಿಸಿದ್ದ ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಶರಣರ ಮಾರ್ಗದಲ್ಲಿ ನಡೆ ದು ಸಮಾನತೆ ಸಮಾಜ ನಿರ್ಮಿಸೋಣ ಎಂದರು.
ಎಸ್‌ಜೆಎA ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಲ್. ಈಶ್ವರಪ್ಪ, ಶ್ರೀ ಗೋವಿಂದ ಸ್ವಾಮೀಜಿ, ಟಿ.ಪಿ. ಜ್ಞಾನಮೂರ್ತಿ, ನಾಗರಾಜಸಂಗA, ಪೈಲ್ವಾನ್ ತಿಪ್ಪೇಸ್ವಾಮಿ, ಬಸವರಾಜ ಕಟ್ಟಿ, ಪ್ರೊ. ಲಿಂಗಪ್ಪ, ಸರಳಾಲಿಂಗಪ್ಪ ಇತರರು ಇದ್ದರು. ಜ್ಯೋತಿ ಗಿರೀಶ್ ಪ್ರಾರ್ಥಿಸಿದರು. ಉಪನ್ಯಾಸಕ ಸಿ.ಎಂ. ವಿಶ್ವನಾಥ್ ಸ್ವಾಗತಿಸಿ, ಡಾ.ಕೆ. ಪುಷ್ಪ ನಿರೂಪಿಸಿದರು.