ಚಿತ್ರದುರ್ಗದಲ್ಲಿ ಬುಧವಾರ ಎಸ್ಸೆಸ್ಸೆಲ್ಲಿ ಪರೀಕ್ಷೆ ಸಿದ್ಧತಾ ಸಭೆಯಲ್ಲಿ ಬಿ.ಟಿ.ಕುಮಾರಸ್ವಾಮಿ, ಶಿವಕುಮಾರ್, ಎಂ.ಆರ್.ಮAಜುನಾಥ್, ಹನುಮಕ್ಕ ಇದ್ದರು.
- ವಾಹನಗಳ ಅನಗತ್ಯ ನಿಲುಗಡೆ, ವಿಳಂಬ ಸಲ್ಲದು
- ಮುಂಜಾಗ್ರತೆಗೆ ಅಪರ ಜಿಲ್ಲಾಽಕಾರಿ ತಾಕೀತು
- ಎಸ್‌ಎಸ್‌ಎಲ್‌ಸಿ ಪರೀಕ್ಷೆ
ಚಿತ್ರದುರ್ಗ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಅತ್ಯಂತ ವ್ಯವಸ್ಥಿತ ಮತ್ತು ಪಾರದರ್ಶಕವಾಗಿ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅಽಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಡಿಸಿ ಕಚೇರಿಯಲ್ಲಿ ಬುಧವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಅಽಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಪರೀಕ್ಷೆ ಕಾರ್ಯಗಳಿಗಾಗಿ ಚಿತ್ರದುರ್ಗ ತಾಲೂಕಿಗೆ ೯, ಚಳ್ಳಕೆರೆ- ೮, ಹಿರಿಯೂರು-೬, ಹೊಸದುರ್ಗ-೫ ಹಾಗೂ ಮೊಳಕಾಲ್ಮೂರು ೪ ವಾಹನಗಳನ್ನು ನಿಯೋಜಿಸಲಾಗಿದೆ. ವಿಶೇಷವಾಗಿ ರೈಲ್ವೆ ಕ್ರಾಸಿಂಗ್ ಇರುವ ಮಾರ್ಗಗಳಲ್ಲಿ ರೈಲು ಸಂಚಾರ ಅವಽ ಗಮನ ದಲ್ಲಿ ಇಟ್ಟುಕೊಂಡು, ಯಾವುದೇ ವಿಳಂಬವಾಗದAತೆ ಪರ್ಯಾಯ ವ್ಯವಸ್ಥೆ ಅಥವಾ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಸಂಬAಧಪಟ್ಟ ಬಿಇಒಗಳು ಈ ವಾಹನಗಳನ್ನು ಪಡೆದು ಪರೀಕ್ಷಾ ಕೇಂದ್ರಗಳಿಗೆ ಸಕಾಲದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಬೇಕು. ವಾಹನಗಳು ಖಜಾನೆಯಿಂದ ಹೊರಟ ನಂತರ ನೇರ ಪರೀಕ್ಷಾ ಕೇಂದ್ರಗಳನ್ನು ತಲುಪಬೇಕು. ದಾರಿಯಲ್ಲಿ ಹೋಟೆಲ್‌ಗಳ ಮುಂದೆ ನಿಲ್ಲಿಸುವುದು ಅಥವಾ ಅನಗತ್ಯ ವಿಳಂಬ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಽಸಲಾಗಿದೆ ಎಂದರು.
ಪರೀಕ್ಷೆ ಅತ್ಯಂತ ಸೂಕ್ಷ÷್ಮಪ್ರಕ್ರಿಯೆಯಾಗಿದ್ದು, ಸಣ್ಣ ಲೋಪದಿಂದ ದೊಡ್ಡ ಸಮಸ್ಯೆ ಆಗಬಹುದು. ಜಾಲತಾಣಗಳ ಯುಗದಲ್ಲಿ ಸಣ್ಣ ಸುದ್ದಿಯೂ ವೇಗವಾಗಿ ಹರಡುವುದರಿಂದ ಅಽಕಾರಿಗಳು ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಹೇಳಿದರು.
ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಜಿಲ್ಲಾ ಮಟ್ಟದ ಅಽಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗುತ್ತದೆ. ಪ್ರತಿ ೪ ರಿಂದ ೫ ಕೇಂದ್ರಗಳಿಗೆ ಒಬ್ಬರಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಽಕಾರಿಗಳನ್ನು ಮೇಲ್ವಿಚಾರಣೆಗೆ ನಿಯೋಜಿಸಲಾಗುವುದು ಎಂದರು.
ಪ್ರಶ್ನೆ ಪತ್ರಿಕೆಗಳನ್ನು ಆಯಾ ತಾಲೂಕು ಕೇಂದ್ರಗಳ ಉಪ ಖಜಾನೆಗಳಲ್ಲಿ ಅತ್ಯಂತ ಭದ್ರತೆಯೊಂದಿಗೆ ಸಂಗ್ರಹಿಸಬೇಕು. ಪರೀಕ್ಷಾ ಸಾಮಗ್ರಿಗಳನ್ನು ಮಾರ್ಗಾಽಕಾರಿಗಳಿಗೆ ಹಸ್ತಾಂತರಿಸಲು ತಹಸೀಲ್ದಾರ್, ಬಿಇಒ ಮತ್ತು ಪ್ರೌಢಶಾಲೆ ಮುಖ್ಯ ಶಿಕ್ಷಕರೊಬ್ಬರಿರುವ ತ್ರಿ ಸದಸ್ಯ ಸಮಿತಿ ಸಮ್ಮುಖದಲ್ಲೇ ಪ್ರಶ್ನೆ ಪತ್ರಿಕೆಗಳ ವಿತರಣೆ ಮತ್ತು ಉತ್ತರ ಪತ್ರಿಕೆಗಳ ಸಂಗ್ರಹ ನಡೆಯಬೇಕು. ಅಂಗವಿಕಲ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ನೆಲಮಹಡಿಯಲ್ಲೇ ಕೊಠಡಿ ನಿಗದಿಪಡಿಸಬೇಕು ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛ ಶೌಚಗೃಹ ಇರಬೇಕು. ಸಮರ್ಪಕ ನೀರು ಸರಬರಾಜು ಇರುವುದನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳಬೇಕು. ಬಿಸಿಲಿನ ತಾಪ ಹೆಚ್ಚಿರುವುದರಿಂದ ಆರೋಗ್ಯ ಸಿಬ್ಬಂದಿ ನಿಯೋಜಿಸಬೇಕು. ಪರೀಕ್ಷಾ ಕೇಂದ್ರದ ಸುತ್ತಲಿನ ೨೦೦ ಮೀಟರ್ ಪ್ರದೇಶವನ್ನು ನಿಷೇಽತ ಪ್ರದೇಶವೆಂದು ಘೋಷಿಸಲಾಗಿದೆ ಎಂದರು.
ಈ ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಽಯಲ್ಲಿ ಕಡ್ಡಾಯವಾಗಿ ಮುಚ್ಚಬೇಕು. ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ವಿದ್ಯಾರ್ಥಿಗಳ ರೋಲ್‌ನಂಬರ್ ಮತ್ತು ಕೊಠಡಿ ಸಂಖ್ಯೆಯ ಮಾಹಿತಿ -Àಲಕಗಳನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕು. ಪರೀಕ್ಷಾ ಅವಽಯಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಕಡಿತ ಮಾಡಬಾರದು. ಬೆಸ್ಕಾಂ ಅಽಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಇರುವಂತೆ ನೋಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ನಿರ್ದೇಶಿಸಿದರು.
ಜಿಲ್ಲೆಯ ೮೪ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗುವುದು. ನಗರದ ಸೇಂಟ್ ಜೋಸೆ-ï ಶಾಲೆಯಲ್ಲಿ ಉತ್ತರ ಪತ್ರಿಕೆಗಳ ಸಂಗ್ರಹಕ್ಕೆ ತಾತ್ಕಾಲಿಕ ಭದ್ರತಾ ಕೊಠಡಿ ನಿರ್ಮಿಸಿದ್ದು, ಇಲ್ಲಿ ಚುನಾವಣೆ ಮಾದರಿ ೨೪/೭ ಬಿಗಿ ಪೊಲೀಸ್ ಕಾವಲು ಇರಲಿದೆ. ಜಿಲ್ಲೆಯ ೬ ಮೌಲ್ಯಮಾಪನ ಕೇಂದ್ರಗಳಿಗೂ ಪರೀಕ್ಷೆ ಮುಗಿಯುವವರೆಗೆ ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದರು.
ಸೂಕ್ಷ÷್ಮ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಬೇಕಾದಲ್ಲಿ ಬಿಇಒಗಳು ಡಿವೈಎಸ್ಪಿಗಳನ್ನು ಸಂಪರ್ಕಿಸುವAತೆ ಎಎಸ್‌ಪಿ ಶಿವಕುಮಾರ್ ತಿಳಿಸಿದರು. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-೧ ಮಾ.೧೮ರಿಂದ ಏಪ್ರಿಲ್ ೨ರವರೆಗೆ ನಡೆಯಲಿವೆ. ೨೪೫೬೭ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊAಡಿದ್ದಾರೆ ಎಂದು ಡಿಡಿಪಿಐ ಎಂ.ಆರ್.ಮAಜುನಾಥ ಹೇಳಿದರು. ಡಯಟ್ ಉಪ ಪ್ರಾಚಾರ್ಯ ನಾಗಭೂಷಣ್, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲಾ ಪರೀಕ್ಷಾ ವೀಕ್ಷಕಿ ಹನುಮಕ್ಕ ಇತರ ಅಽಕಾರಿಗಳಿದ್ದರು.