ಚಿತ್ರದುರ್ಗದ ಹೊರವಲಯದ ಮದಕರಿಪುರದಲ್ಲಿ ಶನಿವಾರ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಭೂಮಿ ಪೂಜೆ ನೆರವೇರಿಸಿದರು. ತಾಪಂ ಇಒ ರವಿಕುಮಾರ್, ಸಂತೋಷ್, ನಾಗರಾಜ್, ಅಂಜಿನಪ್ಪ, ರಾಜೇಶ್ ಮದುರೆ ಇತರರು ಇದ್ದರು.
- ಶಾಸಕ ಕೆ.ಸಿ. ವೀರೇಂದ್ರಪಪ್ಪಿ
- ಸಿಸಿ ರಸ್ತೆ ನಿರ್ಮಾಣ
- ಗುಣಮಟ್ಟದ ಕಾಮಗಾರಿ
ಅಭಿವೃದ್ಧಿ ಕೆಲಸಗಳ ಯಶಸ್ವಿ ಅನುಷ್ಠಾನಕ್ಕೆ ಜನರ ಸಹಕಾರ ಅಗತ್ಯ ಎಂದು ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಹೇಳಿ ದರು.
ಮದಕರಿಪುರ ಮತ್ತು ನಗರದ ಅಮೃತ ಆಯುರ್ವೇದಿಕ್ ಕಾಲೇಜು ಬಳಿ ತಲಾ ೭೦ ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಅಭಿವೃದ್ಧಿ ಕಾಮಗಾರಿಗಳಿಗೆ ಜನರು ಹಾಗೂ ಅಽಕಾರಿಗಳ ಸಹಕಾರ ಅವಶ್ಯಕ ಎಂದು ತಿಳಿಸಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ಇತರ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆಗಳ ಮೂಲಕ ಅನುದಾನ ಬಿಡುಗಡೆ ಮಾಡುತ್ತಿದೆ. ಜನರಿಗೆ ಶಾಶ್ವತ ಹಾಗೂ ಗುಣಮಟ್ಟದ ಸೌಲಭ್ಯ ಕಲ್ಪಿಸುವುದು ಸರ್ಕಾರದ ಮುಖ್ಯಉದ್ದೇಶವಾಗಿದೆ ಎಂದರು.
ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಲಾಗದು. ಅಽಕಾರಿಗಳು ನಿರಂತರವಾಗಿ ಸ್ಥಳ ಪರಿಶೀಲನೆ ನಡೆಸ ಬೇಕು. ಗುತ್ತಿಗೆದಾರರು ಸರ್ಕಾರದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ನಿಗದಿತ ಅವಽಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ತಾಪಂ ಇಒ ರವಿಕುಮಾರ್, ಕೆಡಿಪಿ ಸಭೆ ಸದಸ್ಯರಾದ ಸಂತೋಷ್,ನಾಗರಾಜ್, ಅಮೃತ ಆಯುರ್ವೇದ ಕಾಲೇಜು ಆಡಳಿ ತ ಮಂಡಳಿ ಕಾರ್ಯದರ್ಶಿ ಭರತ್, ಶಿಕ್ಷಣ ಇಲಾಖೆ ನಿವೃತ್ತ ಅಽಕಾರಿಗಳಾದ ರೇವಣಸಿದ್ದಪ್ಪ, ರಮೇಶ್, ಅಂಜಿನಪ್ಪ, ರಾಜೇಶ್ ಮದುರೆ, ಕಾಂಗ್ರೆಸ್ ಪ್ರಮುಖರು, ಸ್ಥಳೀಯ ಮುಖಂಡರು, ಗ್ರಾಮಸ್ಥರು ಇದ್ದರು.