ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಇಒ ಗಿರಿಜಾ, ಎಸ್. ನಾಗಭೂಷಣ್, ವೈಶಾಲಿ, ಎಸ್. ಸಿದ್ದರಾಜು, ಅನ್ನಪೂರ್ಣ, ಸಂಪತ್‌ಕುಮಾರ್ ಇತರರು ಇದ್ದರು. 
ಚಿತ್ರದುರ್ಗ

ಸಾಧನೆಗೆ ಬೇಕು ಸಾರ್ವಜನಿಕರ ಸಹಕಾರ

ಪ್ರಮುಖ ಮುಖ್ಯಾಂಶಗಳು

  • ಬಿಇಒ ಗಿರಿಜಾ ಅಭಿಪ್ರಾಯ
  • ವಿಶ್ವ ಅಂಗವಿಕಲರ ದಿನಾಚರಣೆ
  • ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ
ಚಿತ್ರದುರ್ಗ: ಅಂಗವಿಕಲರು ಅಸಾಮಾನ್ಯರು, ಅವರಿಗೆ ಅಸಾಧ್ಯವೆಂಬುದು ಯಾವುದು ಇರುವುದುಲ್ಲ ಎಂದು ಬಿಇಒ ಗಿರಿಜಾ ಅಭಿಪ್ರಾಯಪಟ್ಟರು.
ಶಿಕ್ಷಣ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಳು ಮತ್ತು ಅಂಗವಿಕಲರ ಆರೈಕೆದಾರರ ಸಂಘದ ಸಹಯೋಗ ದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ನಗರದ ಗುರುಭವನ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೈಹಿಕವಾಗಿ ಅಸಹಯಕರಾಗಿರುವ ಅಂಗವಿಕಲರಲ್ಲಿ ಸಾಽಸುವ ಛಲ ಹಾಗೂ ಗುರಿ ಮುಟ್ಟುವ ತವಕವಿರುತ್ತದೆ. ಹೀಗಾಗಿ ಅವರ ಸಾಧನೆಗೆ ಸಮುದಾಯ ಸಹಕರಿಸಬೇಕು ಎಂದರು.
ಡಯಟ್ ಉಪ ಪ್ರಾಚಾರ್ಯ ಎಸ್. ನಾಗಭೂಷಣ್ ಮಾತನಾಡಿ, ಅಂಗವಿಕಲ ಮಕ್ಕಳು ದೇಶದ ಅಸ್ತಿ ಎನ್ನುವ ನಿಟ್ಟಿನಲ್ಲಿ ಅವರ ಆರೈಕೆಗೆ ಕುಟುಂಬಸ್ಥರು ಸಂಘಟನೆಯೊAದಿಗೆ ಶ್ರಮಿಸುತ್ತಿರುವುದು ಸ್ವಾಗತಾರ್ಹ. ಈ ಮಕ್ಕಳು ಮುಂದಿನ ದಿನಗಳಲ್ಲಿ ಸ್ವಾವಲಂ ಬಿಗಳಾಗುತ್ತಾರೆ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಽಕಾರಿ ವೈಶಾಲಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಸಮಿತಿ ಸದಸ್ಯ ಎಸ್. ಸಿದ್ದರಾಜು, ಬಿಆರ್‌ಸಿ ಸಂಪತ್‌ಕುಮಾರ್ ಮಾತನಾಡಿದರು. ಈ ವೇಳೆ ಸಿದ್ದರಾಜು ಹಾಗೂ ಅಂಗವಿಕಲ ಮಕ್ಕಳ ತಾಯಂದರನ್ನು ಗೌರವಿ ಸಲಾಯಿತು. ಅಂಗವಿಕಲರ ಆರೈಕೆದಾರರ ಸಂಘದ ಅಧ್ಯಕ್ಷೆ ಅನ್ನಪೂರ್ಣ, ರಾಜಣ್ಣ, ನಂದಿನಿ, ವೇದಮೂರ್ತಿ, ಪುಷ್ಪಾ, ಭವ್ಯ, ಚನ್ನಪ್ಪ, ರಾಜು ಇತರರು ಇದ್ದರು.