ಎಲ್ಲ ರಸಗೊಬ್ಬರಗಳಿಗೂ ಎ-ï‌ಒಎಲ್ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಸೀq್ಸï, ಕೆಮಿಕಲ್ಸ್ -Àರ್ಟಿಲೈಜರ್ಸ್ ಮತ್ತು ಪೆಸ್ಟಿಸೈq್ಸï ಮಾರಾಟಗಾರರ ಸಂಘದ ಸದಸ್ಯರು ಚಿತ್ರದುರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಎ.ಎನ್.ಚಂದ್ರಶೇಖರಪ್ಪ, ಸುದರ್ಶನ್ ರೆಡ್ಡಿ, ರಘು, ಉದಯ್‌ಶೆಟ್ಟಿ, ರವಿ ನಾಯ್ಡು, ರವಿಕುಮಾರ್ ಇತರರಿದ್ದರು. 
ಚಿತ್ರದುರ್ಗ

ರಸಗೊಬ್ಬರ ಎ-ï‌ಒಎಲ್ ನೀಡಲು ಕ್ರಮವಹಿಸಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಅನ್ಯ ಉತ್ಪನ್ನಗಳ ಲಿಂಕ್ ಕೈಬಿಡಿ
  • ಶೇ.೮ರ ಡೀಲರ್ ಲಾಭಾಂಶಕ್ಕೆ ಆಗ್ರಹ
  • ಕೇಂದ್ರ ಮತ್ತು ರಾಜ್ಯ ಸರ್ಕಾರ
ಚಿತ್ರದುರ್ಗ: ಎಲ್ಲ ರಸಗೊಬ್ಬರಗಳಿಗೂ ಎ-ï‌ಒಎಲ್ ನೀಡಲು ಕ್ರಮ ವಹಿಸುವಂತೆ ಆಗ್ರಹಿಸಿ ಸೀq್ಸï, ಕೆಮಿಕಲ್ಸï -Àರ್ಟಿಲೈಜರ್ಸ್ ಮತ್ತು ಪೆಸ್ಟಿಸೈq್ಸï ಮಾರಾಟಗಾರರ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ರಾಷ್ಟçವ್ಯಾಪಿ ಕರೆ ಮೇರೆಗೆ ಜಿಲ್ಲೆಯ ಪರಿಕರ ಮಾರಾಟಗಾರರ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತ, ಕೃಷಿ ಇಲಾಖೆ ಮೂಲಕ ಮನವಿ ರವಾನಿಸಿದರು.
ಕಂಪನಿಯವರ ಡಿಎಪಿ, ಯೂರಿಯಾದ ಜತೆಗೆ ಒತ್ತಾಯವಾಗಿ ಬೇರೆ ಉತ್ಪನ್ನಗಳನ್ನು ಲಿಂಕ್ ಮಾಡುವುದನ್ನು ನಿಲ್ಲಿಸಬೇಕು. ಎಲ್ಲ ರಸಗೊಬ್ಬರಗಳ ಎಂಆರ್‌ಪಿ ಮೇಲೆ ಶೇ.೮ರಷ್ಟು ಡೀಲರ್ ಲಾಭಾಂಶ ಇರುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಗೊಬ್ಬರ, ಬೀಜ, ಕೀಟನಾಶಕ ಕಳಪೆ ಎಂಬ ವರದಿ ಬಂದರೆ ಕಂಪನಿಯವರ ಮೇಲೆ ಮಾತ್ರ ಪ್ರಕರಣ ದಾಖಲಿಸಿ, ಡೀಲರ್‌ಗಳನ್ನು ಸಾಕ್ಷಿಯಾಗಿ ಪರಿಗಣಿಸಬೇಕು.
ಡೀಲರ್‌ಗಳಿಂದ ಸ್ಯಾಂಪಲï ಡ್ರಾ ಮಾಡಿದಾಗ ಅದರ ಮೊತ್ತವನ್ನು ಕಡ್ಡಾಯವಾಗಿ ಡೀಲರ್‌ಗಳಿಗೆ ಪಾವತಿಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಅಽಕಾರಿಗಳ ತಪಾಸಣೆಗಾಗಿ ಅಂಗಡಿಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ದಾಳಿ ಎಂಬ ಪದವಾಗ ಲಿ, ಅಂಗಡಿಗಳ -ೆÇÃಟೋ ಬಳಸಬಾರದು. ಎ-ï‌ಐಡಿ ಮೂಲಕ ಯೂರಿಯಾ ರಸಗೊಬ್ಬರ ಮಾರಾಟ ಮಾಡುವ ಆದೇಶ ಸ್ವಾ ಗತಿಸುತ್ತೇವೆ. ನೀರಾವರಿ ಮತ್ತು ಒಣ ಬೇಸಾಯಗಾರರಿಗೆ ಬೆಳೆಗಳ ಆಧಾರದ ಮೇಲೆ ರಸಗೊಬ್ಬರ ದೊರೆಯುವ ಹಾಗೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಎ-ï‌ಐಡಿ ಮೂಲಕ ಡಿಎಪಿ, ಯೂರಿಯಾ ಮಾರಾಟ ಮಾಡುವುದನ್ನು ಹಿಂಗಾರು ಬೆಳೆಗಳವರೆಗೆ ಕಡ್ಡಾಯಗೊಳಿಸಬಾರದು. ಎಸ್‌ಎಟಿಐ ಪೋರ್ಟಲ್ ಅನ್ನು ಮಾರಾಟ ಸ್ನೇಹಿಯಾಗಿ ರೂಪಿಸಬೇಕು ಎಂದು ಉಭಯ ಸರ್ಕಾರಕ್ಕೆ ಕೋರಿದರು. ಸಂಘದ ಅಧ್ಯಕ್ಷ ಎ.ಎನ್.ಚಂದ್ರಶೇಖರಪ್ಪ, ಸುದರ್ಶನ್ ರೆಡ್ಡಿ, ರಘು, ಉದಯ್‌ಶೆಟ್ಟಿ, ರವಿ ನಾಯ್ಡು, ರವಿಕುಮಾರ್ ಇತರರಿದ್ದರು.