ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಉದ್ಘಾಟಿಸಿದರು. ಆರ್. ಶಿವಣ್ಣ, ಡಾ. ರಂಗಸ್ವಾಮಿ, ಡಿ.ಎನ್. ಮೈಲಾರಪ್ಪ, ಶ್ರೀನಿವಾಸ್, ಜೆ. ವೈಶಾಲಿ, ಪಿ.ಕೆ. ದಿನಕರ್, ಕೆ.ಎಸ್. ವಿಜಯಕುಮಾರ್, ಮಂಜುನಾಥ್ ಇತರರು ಇದ್ದರು.
- ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಸಲಹೆ
ಚಿತ್ರದುರ್ಗ: ಅಂಗವಿಕಲರು ಎಂದು ನಿರ್ಲಕ್ಷ್ಯಿಸದೇ ಅವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಯಾಗಿದೆ ಎಂದು ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿದರು.
ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ ಮಾತ ನಾಡಿದರು.
ಕುಟುಂಬ ಸದಸ್ಯರು, ಶಿಕ್ಷಕರು, ಸರ್ಕಾರದ ವಿವಿಧ ಇಲಾಖೆಗಳ ಅಽಕಾರಿ, ಸಿಬ್ಬಂದಿ ಸೇರಿ ಯಾರೂ ಕೂಡ ಅಂಗವಿಕಲರನ್ನು ನಿರ್ಲಕ್ಷ್ಯ ಮಾಡಬಾರದು. ಅವರಿಗೆ ಅನುಕಂಪಕ್ಕಿAತ ಗೌರವ, ಸಮಾನ ಅವಕಾಶ ನೀಡಬೇಕು ಎಂದರು.
ಅAಗವಿಕಲರಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೆ ಇರುತ್ತದೆ. ಸಾಮಾನ್ಯರಿಗಿಂತಲೂ ಉತ್ತಮ ಪ್ರತಿಭೆ ಅವರಲ್ಲಿರುತ್ತದೆ. ಶಿಕ್ಷಣ, ಕ್ರೀಡೆ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಂಗವಿಕಲರ ಮನೆ ಬಾಗಿಲಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಕ್ರಮವಹಿಸಬೇಕು ಎಂದರು.
ಜಾಮೀನು ಇಲ್ಲದೆ ಬ್ಯಾಂಕ್‌ಗಳು ಸಾಲ ಸೌಲಭ್ಯ ನೀಡಿದರೆ ಖಂಡಿತ ಅವರು ಸಾಲ ಮರುಪಾವತಿಸಿ ಉದ್ಯೋಗ ಸೃಷ್ಟಿಗೂ ನೆರವಾಗಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಬದುಕು ಕಟ್ಟಿಕೊಳ್ಳಲು ಅಂಗವಿಕಲರಿಗೆ ಸರ್ಕಾರದ ಸಹಾಯಹಸ್ತ ಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅವರ ಅಭ್ಯುದಯಕ್ಕೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿವೆ ಎಂದರು.
ಜಿಪA ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಅಂಗವಿಕಲರ ಕಲ್ಯಾಣಾಽಕಾರಿ ಜೆ. ವೈಶಾಲಿ ಮಾತನಾಡಿದರು.
೨೦೨೪-೨೫ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ಜಿಲ್ಲೆಯ ವಿದ್ಯಾರ್ಥಿಗಳಾದ ಹೊಳಲ್ಕೆರೆ ಧನಂಜಯ, ಹೊಸದುರ್ಗ ಕೆ.ಎಚ್.ಭರತ್, ಮೊಳಕಾಲ್ಮೂರು ಬಿ.ಪ್ರೇಮಕುಮಾರ, ಚಿತ್ರದುರ್ಗದ ಜಿ.ಎಂ. ಚೇತನಾ, ಚಳ್ಳಕೆರೆ ಎ. ಮಾನಸ ಹಾಗೂ ಹಿರಿಯೂರಿನ ಸಿ. ಸಂಗೀತ ಅವರನ್ನು ಗೌರವಿಸಲಾಯಿತು.
ಸ್ವಯಂ ಉದ್ಯೋಗ ಮಾಡುತ್ತಿರುವ ಚಿತ್ರದುರ್ಗ ತಾಲೂಕು ಮಾನಂಗಿ ಗ್ರಾಮದ ಬಿ. ಕುಮಾರಸ್ವಾಮಿ, ಕಲಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ಚಿತ್ರದುರ್ಗ ನೆಹರು ನಗರದ ಆರ್. ಶ್ರೀಚಿತ್ರಾ ಹಾಗೂ ಅಂಗವಿಕಲರ ಸಾಧನೆಗೆ ಸೂರ್ತಿ ನೀಡಿದ ಲಾಸಿಕಾ ಫೌಂಡೇಷನ್ ಕಾರ್ಯದರ್ಶಿ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಡಿವೈಎಸ್‌ಪಿ ಪಿ.ಕೆ. ದಿನಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯಕುಮಾರ್,ನಿರೂಪಣಾಽಕಾರಿ ಮಂಜುನಾಥ ಇತರರು ಇದ್ದರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅ ಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಕ್ರೀಡೆ ಹಾಗೂ ಶಿಕ್ಷಣ ಇಲಾಖೆಗಳು, ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾ ಘಟಕ, ಗ್ರಾಮೀಣ, ನಗರ, ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರ ಜಿಲ್ಲಾ ಒಕ್ಕೂಟ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿ ಸಲಾಗಿತ್ತು.