ಚಿತ್ರದುರ್ಗ ನಗರದಲ್ಲಿ ಮರಗಳನ್ನು ಸಂರಕ್ಷಿಸುವAತೆ ಒತ್ತಾಯಿಸಿ ನಡೆಸಲಿರುವ ಉದ್ದೇಶಿತ ಪ್ರತಿಭಟನೆ ಕುರಿತು ಕಸವನಹಳ್ಳಿ ರಮೇ ಶ್ ಮಾತನಾಡಿದರು. ಡಾ.ಎಚ್.ಕೆ.ಎಸ್.ಸ್ವಾಮಿ,ನಾಗರಾಜ್ ಬೇದ್ರೆ, ಮಧುಕುಮಾರ್,ಮಂಜುನಾಥ್ ಕಳ್ಳಿಹಟ್ಟಿ,ಕೆ.ಟಿ.ಶಿವಕುಮಾರ್,ನಾಗಭೂಷಣï ಇದ್ದರು.  
ಚಿತ್ರದುರ್ಗ

ಮರಗಳ ರಕ್ಷಣೆಗೆ ಒತ್ತಾಯಿಸಿ ಏ.೬ರಂದು ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ವಿಜ್ಞಾನ ಕಾಲೇಜು
  • ತೋಟಗಾರಿಕೆ ಇಲಾಖೆ
  • ಡಿಸಿ ಹೊಸ ಕಚೇರಿ
ಚಿತ್ರದುರ್ಗ : ನಗರದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದ ೨.೨೪ ಎಕರೆ ಹಾಗೂ ತೋಟಗಾರಿಕೆ ಇಲಾಖೆ ೬ ಎಕರೆ ಪ್ರದೇ ಶದಲ್ಲಿರುವ ಸಾವಿರಾರು ಮರಗಳ ಹನನ ವಿರೋಽಸಿ ಏ.೬ರಂದು ಪ್ರತಿಭಟಿಸಲಾಗುವುದು ಎಂದುÀ ರೈನ್ ಟ್ರಸ್ಟ್ ಅಧ್ಯಕ್ಷ ಕಸವ ನಹಳ್ಳಿ ರಮೇಶ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜ್ಞಾನ ಕಾಲೇಜು ಆವರಣದಲ್ಲಿ ಮಹಿಳಾ ಕಾಲೇಜು ಹಾಗೂ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ಡಿಸಿ ಹೊಸ ಕಚೇರಿ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರ ವಿರೋಽಸಿ ಪ್ರತಿಭಟಿಸಲಾಗುತ್ತಿದೆ ಎಂದರು.
ರೈನ್ ಟ್ರಸ್ಟ್,ಕರ್ನಾಟಕ ಜ್ಞಾನವಿಜ್ಞಾನ ಸಮಿತಿ,ಅಖಿಲ ಕರ್ನಾಟಕ ವನ ಕÊಷಿ ಹಾಗೂ ಶ್ರೀಗಂಧ ಬೆಳೆಗಾರರ ಸಂಘ,ಜಿಲ್ಲಾ ಹಾ ಪ್ ಕಾಮ್ಸ್, ಜಿಲ್ಲಾ ತೋಟಗಾರಿಕೆ ಸಂಘ,ಟಾರ್ಗೇಟ್ ಥೌಸೆಂಡ್ ಗ್ರೂಫ್,ಹೊಳಲ್ಕೆರೆ ಪೂಜಾ ಚಾರಿಟೇಬಲ್ ಟ್ರಸ್ಟ್, ಪರಿಸರ ಮತ್ತು ವನ್ಯಜೀವಿ ಸಂರಕ್ಷಣÁ ವೇದಿಕೆ, ವಿಜ್ಞಾನ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘ,ರಿದ್ಧಿ ಫೌಂಡೇಶನ್,ಪ್ರಾಣಿ ದಯಾ ಸಂಘ, ಹಿರಿಯ ನಾಗರಿಕರ ಸಂಘ, ಕನ್ನಡ,ದಲಿತ ಹಾಗೂ ಮಹಿಳಾ ಪರ ಸಂಘಟನೆಗಳು, ರೈತ ಸಂಘ, ಜನಪರ ವೇದಿಕೆಗಳ ಸದಸ್ಯರು ಹಾಗೂ ಪರಿಸರವಾದಿಗಳು ಪ್ರತಿಭ ಟನೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪರಿಸರವಾದಿ ಡಾ.ಎಚ್.ಕೆ.ಎಸ್.ಸ್ವಾಮಿ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಖಂಜಾಚಿ ನಾಗರಾಜ್ ಬೇದ್ರೆ ಮಾತನಾಡಿ ಸರ್ಕಾರ ಹಾಗೂ ಜಿಲ್ಲಾಡಳಿತ ನಿಲುವನ್ನು ವಿರೋಽಸಿದರು. ವಕೀಲ ಮಧುಕುಮಾರ್,ಮಂಜುನಾಥ್ ಕಳ್ಳಿಹಟ್ಟಿ,ಕೆ.ಟಿ.ಶಿವಕುಮಾರ್,ನಾಗಭೂಷಣï,ಪದ್ಮಾವತಿ ಇದ್ದರು.