ವಿವಿಧೆಡೆ ಹಂಪ್ಸ್ಗಳನ್ನು ನಿರ್ಮಿಸುವಂತೆ ಆಗ್ರಹಿಸಿ ಜಿಲ್ಲಾ ಕರುನಾಡು ವಿಜಯ ಸೇನೆ ಕಾ ರ‍್ಯಕರ್ತರು ನಗರಸಭೆ ಬಳಿ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಸಿ.ಜಗದೀಶ್, ವೀಣಾಗೌರಣ್ಣ ಇತರರು ಇದ್ದರು.  
ಚಿತ್ರದುರ್ಗ

ಹಂಪ್ಸ್ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

ಕರುನಾಡು ವಿಜಯ ಸೇನೆ ಕರ‍್ಯಕರ್ತರು ನಗರಸಭೆ ಬಳಿ ಮಂಗಳವಾರ ಪ್ರತಿಭಟನೆ

ಚಿತ್ರದುರ್ಗ: ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಒತ್ತಾಯಿಸಿ ಜಿಲ್ಲಾ ಕರುನಾಡು ವಿಜಯ ಸೇನೆ ಕರ‍್ಯಕರ್ತರು ನಗರಸಭೆ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಮುಖ್ಯರಸ್ತೆ, ವಾಹÀನ ದಟ್ಟಣೆ ರಸ್ತೆಗಳಲ್ಲಿ, ವಾಹನಗಳ ವೇಗ ನಿಯಂತ್ರಣಕ್ಕಾಗಿ ಹಂಪ್ಸ್ ನಿರ್ಮಿಸಬೇಕು ಹಾಗೂ ನಗರದ ಕೆಲವೆಡೆ ಒಳಚರಂಡಿಗಳು ಕಟ್ಟಿಕೊಂಡು ಚರಂಡಿ ನೀರು ರಸ್ತೆ ಮೇಲೆ ಹರಿಯುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸ ಬೇಕೆಂದು ಆಗ್ರಹಿಸಿದರು.

೪-೫ ತಿಂಗಳ ಹಿಂದೆ ಹಂಪ್ಸ್ ನಿರ್ಮಿಸಿದ್ದರೂ ಕಳಪೆ ಕಾರಣ ಹಾಳಾಗಿವೆ. ಈ ಕಳಪೆ ಕಾಮಗಾರಿ ವಿರೋಽಸಿ ಸಂಘಟನೆ ಈ ಹಿಂದೆ ಪ್ರತಿಭಟನೆ ನಡೆಸಿ, ಬಿಲ್ ತಡೆಗೆ ಹಾಗೂ ಕಳಪೆ ಕಾಮಗಾರಿಗೆ ಕಾರಣರಾದ ಗುತ್ತಿಗೆದಾರರನ್ನು ಕಪ್ಪು ಪ ಟ್ಟಿಗೆ ಸೇರಿಸುವಂತೆ ಒತ್ತಾಯಿಸಲಾಗಿತ್ತು . ಒಳಚರಂಡಿಗಳು ಅಲ್ಲಲ್ಲಿ ಕಟ್ಟಿಕೊಂಡು ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯಕ್ಕೂ ಸಮಸ್ಯೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜೆಸಿಆರ್ ರಸ್ತೆ, ತುರುವನೂರು ರಸ್ತೆ, ಹೊಳಲ್ಕೆರೆ ರಸ್ತೆ, ಬೆಂಗಳೂರು ದಾವಣಗೆರೆ ರಸ್ತೆ ಸೇರಿ ಹಲವು ರಸ್ತೆಗಳಲ್ಲಿ ಹಂಪ್ಸ್ಗಳನ್ನು ನಿ ರ್ಮಿಸಿ ಅಪಘಾತಗಳನ್ನು ನಿಯಂತ್ರಿಸಬೇಕು ಹಾಗೂ ಒಳಚರಂ ಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳ ಬೇಕೆಂದು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ವೀಣಾಗೌರಣ್ಣ, ಸಿ.ಜಗದೀಶ್, ಆರ್.ಪ್ರದೀಪ್, ವರುಣ್, ಅವಿನಾಶ್, ಮುಜಾಹಿದ್ ಮತ್ತಿತರರು ಇದ್ದರು.