ಚಿತ್ರದುರ್ಗದಲ್ಲಿ ಮಂಗಳವಾರ ರಾಜ್ಯಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಸಂತೋಷ್‌ಕುಮಾರ್ ಅಽಕಾರಿಗಳ ಸಭೆ ನಡೆಸಿದರು. ಸದಸ್ಯ ಸತ್ಯನಾರಾಯಣ ಶೆಟ್ಟಿ, ಮಂಜುನಾಥ್, ಡಾ.ಎಂ.ಸಿ. ಸುನಿಲ್‌ಕುಮಾರ್, ಡಾ. ಅಭಿನವ್, ಬಿ. ಮಂಜುನಾಥ್ ಇತರರು ಇದ್ದರು.
- ಗುತ್ತಿಗೆದಾರ, ಥರ್ಡ್ಪಾರ್ಟಿ ಇನ್ಸ್ಪೆಕ್ಸನ್ ಕಂಪನಿಗೆ ನೋಟಿಸ್
- ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿರ್ದೇಶನ
- ಇವತ್ತೇ ಮಗು ಮಾರಾಟ ಆರೋಪ ತನಿಖಾ ವರದಿಗೆ ತಾಕೀತು
ಜಿಲ್ಲೆಯ ಆಯ್ದ ಶಾಲೆ, ವಿದ್ಯಾರ್ಥಿ ನಿಲಯಗಳಿಗೆ ಕಳಪೆ ಆಹಾರ ಪದಾರ್ಥ ಪೂರೈಸಿರುವ ಸರಬರಾಜುದಾರರು ಹಾ ಗೂ ಗುಣಮಟ್ಟ ಪರಿಶೀಲಿಸುವ ತÊತೀಯ ಕಂಪನಿಗಳಿಗೆ ನೋಟಿಸ್ ನೀಡಿ, ಪರಿಶೀಲನಾ ವರದಿ ಸಲ್ಲಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸಂತೋಷ್‌ಕುಮಾರ್ ಅಽಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಅಽಕಾರಿಗಳ ಸಭೆಯಲ್ಲಿ ಮಾತನಾಡಿ, ಚಿತ್ರದುರ್ಗ ತಾಲೂಕಿನ ಗುತ್ತಿನಾಡು, ಮಲ್ಲಾಪು ರ ಸರ್ಕಾರಿ ಶಾಲೆಗಳಿಗೆ ಕಳಪೆ ಬೇಳೆಕಾಳು ಸರಬರಾಜಾಗಿವೆ. ದಾಖಲೆಗಳ ನಿರ್ವಹಣೆ ಸರಿಯಾಗಿಲ್ಲ. ರಿಜಿಸ್ಟರ್‌ನಲ್ಲಿ ಆಹಾರ ಪದಾರ್ಥಗಳ ಖರ್ಚು ಒಂದೇ ರೀತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಷ್ಟು ವರ್ಷದಿಂದ ಜಿಲ್ಲೆಯಲ್ಲಿ ಕೆಲಸ ಮಾಡುತ್ತೀದ್ದೀರಿ? ಪೂರೈಕೆಯಾಗುವ ಆಹಾರ ಧಾನ್ಯಗಳನ್ನು ಪರಿಶೀಲಿಸಿದ್ದೀರಾ? ಕಳಪೆ ಆಹಾರ ಧಾನ್ಯ ಪತ್ತೆಯಾದ ಸಂದರ್ಭದಲ್ಲಿ ಸರಬರಾಜುದಾರರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಜಿಲ್ಲಾ ಅಕ್ಷರ ದಾ ಸೋಹ ಅಽಕಾರಿಯನ್ನು ಖಾರವಾಗಿ ಪ್ರಶ್ನಿಸಿದರು. ಕೆಎಂಎ-ïನಿAದ ಹಾಲಿನ ಪುಡಿ ಖರೀದಿಸಿದ ವಿವರ ನೀಡುವಂತೆ ತಾಕೀತು ಮಾಡಿದರು.
ವಿದ್ಯಾರ್ಥಿ ನಿಲಯಗಳಲ್ಲಿದ್ದ ಅವಽ ಮುಗಿದ ಆಹಾರ ಪದಾರ್ಥಗಳ ಸ್ಯಾಂಪಲ್ ಪ್ರದರ್ಶಿಸಿ ಅಸಮಧಾನ ವ್ಯಕ್ತಪಡಿಸಿದ ಅವರು, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಈ ರೀತಿ ಘಟನೆ ಕಂಡು ಬಂದಿದೆ. ಜಿಲ್ಲಾಮಟ್ಟದ ಅಽಕಾರಿಗಳು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರೆ ಇಂಥ ಘಟನೆ ಆಗುತ್ತಿರಲಿಲ್ಲ. ಅಡುಗೆಗೆ ಸ್ವಚ್ಛತಾ ಪರಿಕರಗಳನ್ನು ಬಳಸುತ್ತಿಲ್ಲ. ಯಾವುದೇ ವಿದ್ಯಾರ್ಥಿ ನಿಲಯಗಳಲ್ಲಿ ದೂರು ಪೆಟ್ಟಿಗೆಗಳ ನಿರ್ವಹಣೆಯಿಲ್ಲ. ಕೂಡಲೇ ಹಾಸ್ಟೆಲ್ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂದರು.
ತಾಯಿ ಮಗು ಆಸ್ಪತ್ರೆಯಲ್ಲಿ ಸ್ವಚ್ಛತೆ ಕೊರತೆ
ನಗರದ ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲದ್ದಕ್ಕೆ ಆಯೋಗದ ಅಧ್ಯಕ್ಷರು, ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಾಯಿ ಹಾಗೂ ಮಗುವಿಗೆ ಆಸ್ಪತ್ರೆಯಲ್ಲಿ ಸ್ವಚ್ಛತೆ ವಾತಾವರಣ ಸಿಗಬೇಕು. ಈ ನಿರ್ಲಕ್ಷ್ಯಕ್ಕೆ ಸಂಬAಽಸಿದ ಅಽಕಾರಿಗಳಿಗೆ ತಕ್ಷಣ ಕಾರಣ ಕೇಳಿ ನೋಟಿಸ್ ನೀಡುವಂತೆ ನಿರ್ದೇಶಿಸಿದರು.
ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ಗರ್ಭಿಣಿಯರು ಹಾಗೂ ಮಕ್ಕಳಿಗೆ ಅಗತ್ಯ ಔಷಧಗಳ ಕೊರತೆಯಾಗಬಾರದು. ಸ್ಥಳೀಯ ವಾಗಿ ಔಷಧಗಳ ಖರೀದಿಗೆ ನಿಯಮಾವಳಿ ಕಡ್ಡಾಯವಾಗಿ ಪಾಲಿಸಬೇಕು. ಜಿಲ್ಲೆಯಲ್ಲಿ ಗುರುತಿಸಿರುವ ೨೯೨ ತೀವ್ರ ಅಪೌಷ್ಟಿಕತೆ ಯಿಂದ ಬಳಲುತ್ತಿರುವ ಮಕ್ಕಳ ಪೈಕಿ ಪೌಷ್ಟಿಕ ಪುನಶ್ಚೇತನ ಕೇಂದ್ರಗಳಿಗೆ ಕೇವಲ ೧೪೨ ಮಕ್ಕಳು ದಾಖಲಾಗಿದ್ದಾರೆ. ಉಳಿದವ ರನ್ನು ದಾಖಲಿಸಿ ಚಿಕಿತ್ಸೆ ನೀಡಬೇಕು. ಆಸ್ಪತ್ರೆಗೆ ದಾಖಲಾಗುವ ಮಗು ಮತ್ತು ತಾಯಿಗೆ ನಿಯಮಾನುಸಾರ ನಿತ್ಯದ ಆರ್ಥಿಕ ಭತ್ಯೆ ಹಾಗೂ ಪೌಷ್ಟಿಕ ಆಹಾರ ಸಮರ್ಪಕವಾಗಿ ತಲುಪಿಸಬೇಕೆಂದರು.
ಮಗು ಮಾರಾಟ ಪ್ರಕರಣ ತನಿಖೆಗೆ ನಿರ್ಲಕ್ಷ್ಯ
ನಗರದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಮಗು ಮಾರಾಟದ ದೂರಿಗೆ ಸಂಬAಽಸಿದAತೆ ತನಿಖೆ ನಡೆಸಿ ವರದಿ ನೀಡುವಂತೆ ಕಳೆದ ಜೂನ್ ೬ರಂದು ಡಿಎಚ್‌ಒಗೆ ಪತ್ರ ಬರೆಯಲಾಗಿದೆ. ಆದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಲಾಗಿದೆ. ಆಯೋಗ ಜಿಲ್ಲೆಗೆ ಭೇಟಿ ನೀಡಲಿದೆ ಎಂಬ ಕಾರಣಕ್ಕೆ ಇವತ್ತು ತನಿಖಾ ಸಮಿತಿ ರಚಿಸಲಾಗಿದೆ.
ಗಂಭೀರ ಆರೋಪ ಕೇಳಿ ಬಂದರೂ ಅಽಕಾರಿಗಳು ನಿರ್ಲಕ್ಷ್ಯ ವಹಿಸಿದ್ದೀರಿ. ನರ್ಸಿಂಗ್ ಹೋಂನೊAದಿಗೆ ನೀವು ಶಾಮೀಲು ಆಗಿದ್ದೀರಾ ಎಂದು ಡಿಎಚ್‌ಒ ಹಾಗೂ ಆರ್‌ಸಿಎಚ್ ಅಽಕಾರಿಗಳನ್ನು ಸಂತೋಷ್ ಕುಮಾರ್ ಪ್ರಶ್ನಿಸಿದರು. ನಾಳೆಯೇ ಆಯೋಗಕ್ಕೆ ತನಿಖಾ ವರದಿ ಸಲ್ಲಿಸುವಂತೆ ತಾಕೀತು ಮಾಡಿದರು.
ಕÊಷಿ ಹೊಂಡಕ್ಕೆ ಬೇಲಿ ಅಳವಡಿಸಿದ ಜಿಪಿಎಸ್ -ೆÇÃಟೋ ನೀಡಿದ ಬಳಿಕವೇ ಬಿಲ್ ಪಾವತಿಸುವಂತೆ ಕÊಷಿ ಹಾಗೂ ತೋಟ ಗಾರಿಕೆ ಅ ಽಕಾರಿಗಳಿಗೆ ಸೂಚಿಸಿದರು. ಚಳ್ಳಕೆರೆ ಕಸ್ತೂರಿ ಬಾ ವಸತಿ ಶಾಲೆ ವಿದ್ಯುತ್ ಕಂಬ ತೆರವಿಗೆ ಸಂತೋಷ್ ಕುಮಾರ್ ಸೂಚಿಸಿದರು.
ಪಿಯು ಕಾಲೇಜಿಂದ ಪದೋನ್ನತಿ ಹೊಂದಿ ತಿಂಗಳ ಹಿಂದೆ ಜಿಲ್ಲೆಗೆ ಆಗಮಿಸಿದ ಪಿಯು ಉಪನಿರ್ದೇಶಕರಿಗೆ ಶೈಕ್ಷಣಿಕ ವೇಳಾ ಪಟ್ಟಿಯ ಸಾಮಾನ್ಯ ಜ್ಞಾನವಿಲ್ಲ. ಆಯೋಗದ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ಅವರಿಗೆ ನೋಟಿಸ್ ನೀಡಲು ನಿರ್ದೇಶಿ ಸಿದರು.
ನಗರದಲ್ಲಿ ಅನಽಕೃತವಾಗಿ ನಡೆಯುತ್ತಿರುವ ಜೆಇಇ ಹಾಗೂ ನೀಟ್ ಕೋಚಿಂಗ್ ಸೆಂಟರ್ ಬಗ್ಗೆ ನಿಗಾವಹಿಸಬೇಕು. ಖಾಸಗಿ ಪಿ ಯು ಕಾಲೇಜುಗಳಲ್ಲಿ ಮಕ್ಕಳ ಹಾಜರಾತಿ ಪರಿಶೀಲಿಸಬೇಕು. ಕಾಲೇಜಿಗೆ ಗೈರಾಗಿ ಕೋಚಿಂಗ್ ಸೆಂಟರ್‌ಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಶೇ.೭೦ ಹಾಜರಾತಿ ಇರದಿದ್ದರೆ ಪರೀಕ್ಷಾ ಪ್ರವೇಶ ಪತ್ರ ಕೊಡಲಾಗದೆಂಬುದರ ಕುರಿತು ಜಾಗೃತಿ ಮೂಡಿಸ ಬೇಕು ಎಂದರು.
ಆಯೋಗದ ಸದಸ್ಯ ಸತ್ಯನಾರಾಯಣ ಶೆಟ್ಟಿ, ಡಿಡಿಪಿಐ ಮಂಜುನಾಥ್, ಡಿಎಚ್‌ಒ ಡಾ.ಎಂ.ಸಿ. ಸುನಿಲ್‌ಕುಮಾರ್, ಆರ್‌ಸಿಎಚ್ ಅಽಕಾರಿ ಡಾ. ಅಭಿನವ್, ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ್, ಕಾರ್ಮಿಕ ಅಽಕಾರಿ ಅನಿಲ ಬಾಲಚಂದ್ರಬಗಟಿ, ಪರಿಶಿಷ್ಟ ವರ್ಗಗಳ ಕಲ್ಯಾಣಽಕಾರಿ ದಿವಾಕರ್.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಽಕಾರಿ ರೇಖಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಽಕಾರಿ ಜೆ. ವೈಶಾಲಿ, ಬಿಇಒ ಗಿರಿಜಾ, ಜಿಲ್ಲಾ ಮಕ್ಕಳ ರಕ್ಷಣಾಽಕಾರಿ ವೀಣಾ ಮತ್ತಿತರ ಅಽಕಾರಿ ಗಳು ಇದ್ದರು.
ಸಭೆಗೂ ಮುನ್ನ ಅಧ್ಯಕ್ಷರು, ಸದಸ್ಯರು, ಎಸ್‌ಪಿ ರಂಜಿತ್‌ಕುಮಾರ್‌ಬAಡಾರು, ಡಿಸಿ ಟಿ.ವೆಂಕಟೇಶ್ ಹಾಗೂ ಜಿಪಂ ಸಿಇಒ ಡಾ.ಎಸ್. ಆಕಾಶ್ ಅವರೊಂದಿಗೆ ಚರ್ಚಿಸಿದರು.
ಮಲ್ಲಾಪುರ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ, ಮುರಾರ್ಜಿ ವಸತಿ ಶಾಲೆ, ಗೂಳಯ್ಯನ ಹಟ್ಟಿ ಸರ್ಕಾರಿ ಪ್ರೌಢಶಾಲೆ, ಗುತ್ತ್ತಿನಾಡು, ಮೆದೇಹಳ್ಳಿ ಅಲ್ಪಸಂಖ್ಯಾತರ ಇಲಾಖೆ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಸದಸ್ಯ ಸತ್ಯನಾರಾಯಣ ಶೆಟ್ಟಿ ಅವರು ಚಳ್ಳಕೆರೆ ತಾಲೂಕು ಬಾಲೇನಹಳ್ಳಿ ಇಂದಿರಾಗಾAಽ ಹಾಗೂ ಚಳ್ಳಕೆರೆ ಟೌನ್‌ನ ಕಸ್ತೂರಬಾಗಾಂಽ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.