ನಿವೃತ್ತ ನೌಕರರ ಮತ್ತು ಕುಟುಂಬ ಪಿಂಚಣಿದಾರರ ಸೌಲಭ್ಯ ಕಡಿತಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಽಕಾರಿಗಳು ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಪ್ರೇಮನಾಥ್, ತಿಮ್ಮಪ್ಪ, ರಂಗಪ್ಪರೆಡ್ಡಿ, ಚಂದ್ರಶೇಖರಯ್ಯ, ನಾಗರಾಜ್, e್ಞÁನಮೂರ್ತಿ ಇತರರು ಇದ್ದರು.
- ಪಿಂಚಣಿದಾರರ ಹಿತ ಕಾಪಾಡಿ
- ಸರ್ಕಾರಿ ನಿವೃತ್ತ ನೌಕರರ ಸಂಘ ಆಗ್ರಹ
- ತುಟ್ಟಿ ಭತ್ಯೆ
ಚಿತ್ರದುರ್ಗ: ಕೇಂದ್ರ ಸರ್ಕಾರ ನಿವೃತ್ತ ನೌಕರರಿಗೆ ಸೌಲಭ್ಯಗಳನ್ನು ನೀಡಬೇಕೆ ಹೊರತು ಇರುವುದನ್ನು ಸ್ಥಗಿತಗೊಳಿಸುವ ಕ್ರಮ ಖಂಡನೀಯ ಎಂದು ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಽಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಎಡಗೈಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತುಟ್ಟಿ ಭತ್ಯೆ ವಿಚಾರವಾಗಿ ಹೊಸ ನೀತಿಯನ್ನು ರೂಪಿಸದಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ರವಾನಿಸಿದರು.
ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂದಿನ ದಿನಗಳಲ್ಲಿ ನಿವೃತ್ತಿ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಹಾಗೂ ವಾರ್ಷಿಕವಾಗಿ ನೀಡುತ್ತಿರುವ ೨ ತುಟ್ಟಿ ಭತ್ಯೆ (ಡಿಎ) ಸ್ಥಗಿತಗೊಳಿಸುವ ಮೂನ್ಸೂಚನೆ ನೀಡಿದ್ದಾರೆ. ಹೊಸ ನೀತಿ ಜಾರಿಗೆ ತರಬಾರದು ಎಂದು ಆಗ್ರಹಿಸಿದರು.
ವೃದ್ಧಾಪ್ಯದಲ್ಲಿರುವ ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರ ಹಿತಾಸಕ್ತಿಗೆ ಧಕ್ಕೆ ತರುವ ಯಾವ ಯೋಜನೆಗೂ ಕೈ ಹಾಕಬಾರದು. ಬದಲಿಗೆ ಹೆಚ್ಚಿನ ಆರ್ಥಿಕ ಸೌಲಭ್ಯ ನೀಡುವ ಮೂಲಕ ನೆಮ್ಮದಿ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪಿಂಚಣಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮವಾಗಿದೆ. ವೃದ್ಧಾಪ್ಯದಲ್ಲಿ ಸಂಕಷ್ಟಕ್ಕೆ ಸಿಲುಕದಂತೆ ಆರ್ಥಿಕ ಸಬಲತೆಯ ಬುನಾದಿ ಯಾಗಿದೆ. ಇದಕ್ಕೆ ಅಡಚಣೆ ಉಂಟು ಮಾಡಬಾರದು ಎಂದು ಕೋರಿದರು.
ಸಂಘದ ಜಿ¯್ಲÁಧ್ಯಕ್ಷ ಬಿ.ಪಿ. ಪ್ರೇಮನಾಥ್, ಕಾರ್ಯದರ್ಶಿ ಟಿ. ತಿಮ್ಮಪ್ಪ, ಆರ್. ರಂಗಪ್ಪರೆಡ್ಡಿ, ವೈ. ಚಂದ್ರಶೇಖರಯ್ಯ, ಟಿ.ಎ. ಮಂಜುನಾಥ್, ಪಿ. ನಾಗರಾಜ್, ಟಿ.ಪಿ. e್ಞÁನಮೂರ್ತಿ, ಕೆ.ಎಸ್. ಜಯಣ್ಣ, ಎ-ï.ಆರ್. ಹಾಲಗೇಶಿ, ಎನ್.ಆರ್. ಭೈಯಣ್ಣ, ಎಸ್. ಜಗದೀಶ್ ಇತರರು ಇದ್ದರು.