ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ ವಿರೋಽ ಕಾಯ್ದೆ ಕುರಿತ ಒಂದು ದಿನದ ಕಾರ್ಯಾಗಾರವನ್ನು ಹಿರಿಯ ಸಿವಿಲ್ ನ್ಯಾಯಾಽÃಶ ಎಂ. ವಿಜಯ್ ಉದ್ಘಾಟಿಸಿದರು. ಕೆ.ಎಚ್. ವಿಜಯ್‌ಕುಮಾರ್, ಕೆ. ತಿಮ್ಮಯ್ಯ, ಭರತ್ ಎಂ. ಕಾಳಿಸಿಂಗೆ, ಡಿ.ಕೆ. ಶೀಲಾ, ಡಿ. ಮಂಜುನಾಥ, ಗಂಗಾಧರಪ್ಪ ಇದ್ದರು. 
ಚಿತ್ರದುರ್ಗ

ಮಹಿಳೆಯರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ ಕಾರ್ಯದರ್ಶಿ ಅಭಿಮತ
  • ಲೈಂಗಿಕ ದೌರ್ಜನ್ಯ ವಿರೋಽ ಕಾಯ್ದೆ ಕುರಿತ ಕಾರ್ಯಾಗಾರ
  • ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ,
ಚಿತ್ರದುರ್ಗ: ಕೆಲಸದ ಸ್ಥಳಗಳಲ್ಲೂ ಮಹಿಳೆಯರನ್ನು ಮನೆಯ ಹೆಣ್ಣು ಮಕ್ಕಳಂತೆ, ಸಹೋದರಿಯರಂತೆ ರಕ್ಷಣೆ ಮಾಡುವ ಹಾಗೂ ಅವರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳ ಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಽÃಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಹಾಗೂ ಮಕ್ಕಳ ರಕ್ಷಣಾ ಘಟಕಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಬಾಲಭವನದಲ್ಲಿ ಜಿಲ್ಲಾ, ತಾಲೂಕು ಮಟ್ಟದ ಅಽಕಾರಿಗಳಿಗೆ ಹಾಗೂ ಆಂತರಿಕ ದೂರು ನಿವಾರಣಾ ಸಮಿತಿಗಳ ಅಧ್ಯಕ್ಷರಿಗೆ ಮಂಗಳವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಕಾರ್ಯನಿರ್ವಹಿಸುವ ಪ್ರಮಾಣ ದೇಶದಲ್ಲಿ ಶೇ.೧೮ರಿಂದ ೪೧ಕ್ಕೆ ಏರಿಕೆಯಾಗಿದೆ. ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಒದಗಿಸುವ ಜವಾಬ್ದಾರಿ ಉದ್ಯೋಗದಾತರ ಮೇಲಿದೆ. ತಂತ್ರಜ್ಞಾನ ಮುಂದುವರಿದAತೆ ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಮತ್ತು ಯುವತಿಯರ ಮೇಲೆ ಡಿಜಿಟಲ್ ಹಿಂಸಾಚಾರ, ಶೋಷಣೆ, ದೌರ್ಜನ್ಯ ನಡೆಯುತ್ತಿದ್ದು, ಡಿಜಿಟಲ್ ಹಿಂಸಾಚಾರದಿAದ ಮಹಿಳೆಯರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್. ವಿಜಯ್‌ಕುಮಾರ್ ಮಾತನಾಡಿ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಸರ್ಕಾರಿ ಕಚೇರಿ, ಖಾಸಗಿ, ಶಾಲಾಕಾಲೇಜು, ಹೋಟೆಲ್ ಸೇರಿ ಆಂತರಿಕ ದೂರು ನಿವಾರಣಾ ಸಮಿತಿ ರಚಿಸಲಾಗಿದೆ.
ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಡೆದರೆ ಆಂತರಿಕ ದೂರು ನಿವಾರಣಾ ಸಮಿತಿ ಸತ್ಯಾಸತ್ಯತೆ ಪರಿಶೀಲಿಸಿ, ಜಿಲ್ಲಾ ಸಮಿತಿಗೆ ವರದಿ ಸಲ್ಲಿಸಲಿದೆ. ಜಿಲ್ಲಾ ಸಮಿತಿ ಪ್ರಕರಣ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಕಳುಹಿಸಲಿದೆ ಎಂದರು.
ಪಿಯುಡಿಡಿ ಕೆ. ತಿಮ್ಮಯ್ಯ ಮಾತನಾಡಿ, ಮಹಿಳಾ ದೌರ್ಜನ್ಯ ತಡೆಗೆ ಕಾನೂನು ರೂಪಿಸಿದ್ದೇವೆ. ಆಂತರಿಕ ದೂರು ನಿವಾರಣಾ ಸಮಿತಿ ರಚನೆ ಮಾಡಲಾಗಿದೆ. ಆದರೆ, ಬಹಳ ಮುಖ್ಯವಾಗಿ ಮನಸ್ಥಿತಿ ಬದಲಾಗಬೇಕು. ಸಮಾಜದಲ್ಲಿ ಮಹಿಳೆಯರನ್ನು ಗೌರವದಿಂದ ಕಾಣಬೇಕು. ದೌರ್ಜನ್ಯ ನಡೆದಾಗ ದೂರು ಕೊಡುವ ಧೈರ್ಯ ರೂಢಿಸಿಕೊಳ್ಳಬೇಕು ಎಂದರು.
ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ(ವಿರೋಧ, ನಿಬಂರ್ಧನೆ ಹಾಗೂ ನಿವಾರಣೆ) ಕಾಯ್ದೆ- ೨೦ ೧೩ರ ಕುರಿತು ನ್ಯಾಯವಾದಿ ಡಿ.ಕೆ. ಶೀಲಾ ಉಪನ್ಯಾಸ ನೀಡಿದರು. ಆರ್‌ಟಿಒ ಭರತ್ ಎಂ. ಕಾಳಿಸಿಂಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಽಕಾರಿ ಡಿ. ಮಂಜುನಾಥ, ಮಹಿಳಾ ಅಭಿವೃದ್ಧಿ ಅಽಕಾರಿ ಗಂಗಾಧರಪ್ಪ ಇತರರು ಇದ್ದರು.