ಎಲ್ಲ ಬೆಳೆಗಳಿಗೂ ಕೂಡಲೇ ಬೆಳೆವಿಮೆ ಪರಿಹಾರ ಬಿಡುಗಡೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.  
ಚಿತ್ರದುರ್ಗ

ಎಲ್ಲ ಬೆಳೆಗೂ ತ್ವರಿತ ಬೆಳೆವಿಮೆ ಪರಿಹಾರ ನೀಡಿ

ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯಿರಿ

ಚಿತ್ರದುರ್ಗ: ಎಲ್ಲ ಬೆಳೆಗಳಿಗೂ ತ್ವರಿತವಾಗಿ ಬೆಳೆವಿಮೆ ಪರಿಹಾರ ಬಿಡುಗಡೆಗೆ ಆಗ್ರಹಿಸಿ ರಾಜ್ಯ ರೈತಸಂಘ (ಕೆ.ಎಸ್. ಪುಟ್ಟಣ್ಣಯ್ಯ ಬಣ) ಜಿಲ್ಲಾ ಸಮಿತಿ ಪದಾಽಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ರೈತರ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸಿಎಂಗೆ ಮನವಿ ರವಾನಿಸಿದರು. ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಮಾತನಾಡಿ, ಜಿಲ್ಲೆಯ ೬ ತಾಲೂಕುಗಳಲ್ಲೂ ತೀವ್ರ ಬರ ಪರಿಸ್ಥಿತಿ ಇದೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಪ್ರತಿ ಗ್ರಾಮ ಪಂಚಾಯಿತಿಗೆ ಒಂದರAತೆ ತುರ್ತಾಗಿ ಗೋಶಾಲೆ ತೆರೆಯಬೇಕು ಎಂದು ಆಗ್ರಹಿಸಿದರು.

ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯಲ್ಲಿ ಎಕರೆಗೆ ೭೦-೮೦ ಕೆಜಿಯಷ್ಟು ಸೂರ್ಯಕಾಂತಿ ಬೆಳೆ ಬಂದಿದೆ. ಕೇಂದ್ರ ಸರ್ಕಾರ ೮,೩೪೩ ರೂ. ಬೆಂಬಲ ಬೆಲೆ ಘೋಷಿಸಿದೆ. ಆದ್ದರಿಂದ ಕೂಡಲೇ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿದರು. ಜಮೀನುಗಳನ್ನು ಅಳತೆ, ಹದ್ದುಬಸ್ತ್ ಮಾಡಿಸಲು ದರ ಹೆಚ್ಚಿಸಿದ್ದು, ರೈತರಿಗೆ ತುಂಬಾ ತೊಂದರೆಯಾಗಿದೆ. ಹೀಗಾಗಿ, ಉಚಿತವಾಗಿ ನಡೆಸಿ, ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದರು.

ರೈತ ಮುಖಂಡ ಕೆ.ಪಿ. ಭೂತಯ್ಯ ಮಾತನಾಡಿ, ಸತತ ೧೩ ವರ್ಷಗಳಿಂದ ಜಿ¯್ಲೆ ಬರಗಾಲ ಎದುರಿಸುತ್ತಿದೆ. ಬೆಳೆಗಳು ಸಂಪೂರ್ಣ ಒಣಗಿವೆ. ಖರ್ಚು ಮಾಡಿ ಬಿತ್ತನೆ ಮಾಡಿದ್ದ ರೈತರೆಲ್ಲರೂ ಸಾಲಗಾರನಾಗಿz್ದÁರೆ. ಆದ್ದರಿಂದ ಒಂದು ಎಕರೆಗೆ ಕನಿಷ್ಠ ೨೫ ಸಾವಿರ ರೂ. ಪರಿಹಾರ ನೀಡಬೇಕೆಂದು ಎಂದು ಒತ್ತಾಯಿಸಿದರು.

ಬರದಿಂದಾಗಿ ರೈತರು ಜೀವನ ನಡೆಸುವುದೇ ಕಷ್ಟವಾಗಿದೆ. ಹೀಗಾಗಿ, ಎಲ್ಲ ಬ್ಯಾಂಕ್‌ಗಳಲ್ಲಿನ ಸಾಲಮನ್ನಾ ಮಾಡಬೇಕು. ಹಿಂಗಾರು ಬಿತ್ತನೆಗೆ ಹೊಸ ಸಾಲ ನೀಡಲು ಕ್ರಮ ವಹಿಸಬೇಕು ಎಂದು ಸರ್ಕಾರಕ್ಕೆ ಕೋರಿದರು.

ಶಶಿಧರರೆಡ್ಡಿ, ಡಿ.ಎಚ್. ರಾಮರೆಡ್ಡಿ, ಎ. ತಿಪ್ಪೇಸ್ವಾಮಿ, ಕೆ.ಎಂ. ಕಾಂತರಾಜ್, ಟಿ. ಕಿರಣ್‌ಕುಮಾರ್, ಕೆ.ಟಿ. ಹನುಮಂತ, ಹೊನ್ನೇಶ ಇತರರಿದ್ದರು.