ಚಿತ್ರದುರ್ಗ ತಾಲೂಕಿನ ೮ ಕೆರೆಗಳಿಗೆ ನೀರು ತುಂಬಿಸುವAತೆ ಒತ್ತಾಯಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಬುಧವಾರ ಬೆಂಗಳೂರಲ್ಲಿ ಮನವಿ ಸಲ್ಲಿಸಿದರು. ನಟ ದೊಡ್ಡಣ್ಣ,ಸುರೇಶ್ ಬಾಬು ಇದ್ದಾರೆ.
- ಡಿಸಿಎಂಗೆ ಶಾಸಕ ಕೆಸಿವಿ ಪಪ್ಪಿ ಮನವಿ
- ಸಂಪುಟ ಸಭೆಯಲ್ಲಿ ಚರ್ಚಿಸಿ ಕ್ರಮ
- ಭದ್ರಾ ಮೇಲ್ದಂಡೆ ಯೋಜನೆ
ಚಿತ್ರದುರ್ಗ : ಚಿತ್ರದುರ್ಗ ತಾಲೂಕಿನ ಮಠದ ಕುರುಬರಹಟ್ಟಿ, ಕಾಟಿಹಳ್ಳಿ,ಸಿದ್ದಾಪುರ ,ಮಾನಂಗಿ, ಹುಲ್ಲೂರು, ನಂದೀಪುರ, ಅನ್ನೇ ಹಾಳು ಮತ್ತು ತಿಮ್ಮಣ್ಣನಾಯಕನ ಕೆರೆಗಳನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಸೇರಿಸಿ,ಈ ಕೆರೆಗಳಿಗೆ ನೀರು ತುಂಬಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭರವಸೆ ಕೊಟ್ಟಿದ್ದಾರೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಶಿವಕುಮಾರ್ ಅವರನ್ನು ಭೇಟಿ ಮಾಡಿ ಭರಮಸಾಗರ ಏತ ನೀರಾವರಿ ಯೋಜನೆ ಅಡಿ ಚಿತ್ರದುರ್ಗ ವಿಧಾನಸಭಾ ಕ್ಷೇ ತ್ರದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು, ಈ ಯೋಜನೆಯಡಿ ಕೈ ಬಿಟ್ಟಿರುವ ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಜಲ ಸಂಪನ್ಮೂಲ ಶಿವ ಕುಮಾರ್ ಸಹಮತ ಸೂಚಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸ ಬೇಕೆಂಬ ಮನವಿ ಸ್ವೀಕರಿಸಿದ ಅವರು,ಅಽಕಾರಿಗಳ ಜತೆ ಚರ್ಚಿಸಿ ಕೆ ರೆಗಳಿಗೆ ನೀರು ತುಂಬಿಸುವುದರ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ರೈತರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ಕೊಟ್ಟಿದ್ದಾರೆಂದು ಶಾಸಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಟ ದೊಡ್ಡಣ್ಣ, ಸುರೇಶ್‌ಬಾಬು ಇದ್ದರು.