ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಜಿಲ್ಲಾ ಭೋವಿ ಸಂಘದ ನೂತನ ಪದಾಽಕಾರಿಗಳನ್ನು ಸನ್ಮಾನಿಸಲಾಯಿತು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
- ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿಕೆ
- ಗುರುಪೀಠದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ
- ನೂತನ ಪದಾಽಕಾರಿಗಳ ಸನ್ಮಾನ ಸಮಾರಂಭ
ಚಿತ್ರದುರ್ಗ: ಭೋವಿ ಸಮಾಜದ ಸಂಘಟನೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ದೂರದೃಷ್ಟಿಯ ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಭೋವಿ ಗುರುಪೀಠದಲ್ಲಿ ಜಿ¯್ಲÁ ಭೋವಿ ಸಂಘದಿAದ ಬುಧವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ, ನೂತನ ಪದಾಽಕಾರಿಗಳ ಅಭಿನಂದನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.
ಭವಿಷ್ಯದಲ್ಲಿ ಸಮಾಜದ ಎಲ್ಲ ಸ್ತರದ ಜನರನ್ನು ಒಳಗೊಳ್ಳುವ ಉದ್ದೇಶದಿಂದ ಮಹಿಳಾ, ಯುವ, ವಿದ್ಯಾರ್ಥಿ ಘಟಕ ಸೃಜಿಸಲು ನಿರ್ಧರಿಸಲಾಗಿದೆ. ಅವುಗಳ ರಚನೆ, ಜವಾಬ್ದಾರಿ ಕುರಿತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲು ವಿಶೇಷ ಕಾರ್ಯಾಗಾರ ಏರ್ಪಡಿಸುವ ಮೂಲಕ ಸಂಘಟನೆಗೆ ಹೊಸ ಆಯಾಮ ನೀಡಲಾಗುವುದು ಎಂದು ಹೇಳಿದರು.
ಸಮಾಜದ ಋಣ ತೀರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಸಂಘಟನೆಯ ಜವಾಬ್ದಾರಿ ಸಿಕ್ಕಾಗ ಅದನ್ನು ಸ್ವಾರ್ಥಕ್ಕಾಗಿ ಬಳಸದೆ ಕಾಯಾ, ವಾಚಾ, ಮನಸಾ ಸೇವೆಯಲ್ಲಿ ತೊಡಗಿಸಿಕೊಳ್ಳುವುದೇ ನೈಜ ನಾಯಕತ್ವದ ಲಕ್ಷಣ ಎಂದು ಸಲಹೆ ನೀಡಿದರು.
ಯಾವುದೇ ಸಂಘಟನೆಯ ಯಶಸ್ಸು ಅಲ್ಲಿನ ಪ್ರಾಮಾಣಿಕತೆಯ ಮೇಲೆ ನಿಂತಿದೆ. ಪದಾಽಕಾರಿಗಳು ಹಣಕಾಸಿನ ವ್ಯವಹಾರಗಳಲ್ಲಿ ಅತ್ಯಂತ ಶಿಸ್ತು ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳುವುದು ಅನಿವಾರ್ಯ. ಸಂಘಟನೆಯೇ ಮೊದಲ ಆದ್ಯತೆ ಎಂಬ ಮಂತ್ರದೊAದಿಗೆ ಕೆಲಸ ಮಾಡಿದಾಗ ಮಾತ್ರ ಸಾರ್ವಜನಿಕರ ನಂಬಿಕೆ ಗಳಿಸಲು ಸಾಧ್ಯ ಎಂದರು.
ಅಽಕಾರ ಎಂಬುದು ಶಾಶ್ವತವಲ್ಲ. ಆದರೆ, ಸಿಕ್ಕಾಗ ಕೈಗೊಳ್ಳುವ ಕೆಲಸಗಳು ಕೊನೆವರೆಗೂ ಉಳಿಯಲಿವೆ. ನಾಯಕತ್ವ ಸಮರ್ಥ ವಾಗಿ ಸದ್ಬಳಕೆ ಮಾಡಿಕೊಂಡು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಾದರಿ ಸೇವೆಯನ್ನಾಗಿ ಪರಿವರ್ತಿಸಬೇಕು. ಪದಾಽಕಾರಿಗಳು ಸದಾ ಒಗ್ಗಟ್ಟಿನಿಂದಲೇ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಸಂಘದ ನೂತನ ಅಧ್ಯಕ್ಷ ಸೂರಗೊಂಡನಹಳ್ಳಿ ಟಿ. ಕೃಷ್ಣಮೂರ್ತಿ, ಗೌರವಾಧ್ಯಕ್ಷರಾದ ಟಿ. ತಿಪ್ಪೇಸ್ವಾಮಿ, ಡಿ. ತಿಮ್ಮಣ್ಣ, ಕಾರ್ಯ ಧ್ಯಕ್ಷ ಡಿ.ಸಿ. ಮೋಹನ, ಉಪಾಧ್ಯಕ್ಷರಾದ ಎಚ್. ಲಕ್ಷಣ, ಅನ್ನೇಹಾಳ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ, ಪದಾಽಕಾರಿಗಳಾದ ಪಿ. ದೇವರಾಜ, ವಿ. ಹನುಮಂತಪ್ಪ, ರಾಮಚಂದ್ರಪ್ಪ, ಎಚ್. ಆಂಜನೇಯ, ಟಿ. ಚಂದ್ರಶೇಖರ್, ಎಚ್. ನಟೇಶ್, ಆರ್. ನಿರಂಜನ, ಎಲï.ಬಿ. ವೆಂಕಟೇಶ, ಎಚ್. ನಾಗರಾಜ, ಸಿ.ಜೆ. ಅಣ್ಣಪ್ಪ, ಪಿ. ಅಂಜಿನಯ್ಯ, ಆರ್. ಈರಣ್ಣ, ಎಂ. ರಾಮು, ಎಚ್. ಭೀಮರಾಜು, ಭೋವಿ ಗುರುಪೀಠದ ಸಿಇಒ ಗೋವಿಂದಪ್ಪ ಇತರರಿದ್ದರು.