ಜಿಲ್ಲಾ ಕೌಶಲ ಮಿಷನ್ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಚ್. ಟಿ.ಬಸವರಾಜ್ ಅಶೋಕಪ್ಪ, ಸಣ್ಣಕ್ಕಿ ಮಾರುತಿ, ಅತೀಕ್‌ರೆಹಮಾನ್ ಮತ್ತಿತರರು ಇದ್ದರು. 
ಚಿತ್ರದುರ್ಗ

ಉದ್ಯೋಗಾಧಾರಿತ ಕೌಶಲ ತರಬೇತಿಗೆ ಆದ್ಯತೆ ಕೊಡಿ

ಅಽಕಾರಿಗಳಿಗೆ ಎಡಿಸಿ ಕಟ್ಟುನಿಟ್ಟಿನ ಸೂಚನೆ

ಚಿತ್ರದುರ್ಗ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿ, ಯುವಜನರು ಪದವಿ ಶಿಕ್ಷಣಕ್ಕೆ ಸೀಮಿತವಾಗದೆ, ಕೌಶಲಾಧಾರಿತ ಉದ್ಯೋಗಕ್ಕಾಗಿ ಸೂಕ್ತ ತರಬೇತಿ ಪಡೆಯುವುದು ಅಗತ್ಯ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ಗುರುವಾರ ಜಿಲ್ಲಾ ಕೌಶಲ ಮಿಷನ್ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯುವ ಜನರಿಗೆ ಕೌಶಲಾಧಾರಿತ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೌಶಲ ತರಬೇತಿಗೆ ಆದ್ಯತೆ ನೀಡಿ ಎಂದು ಅಽಕಾರಿಗಳಿಗೆ ತಾಕೀತು ಮಾಡಿದರು.

ಕೌಶಲಾಧಾರಿತ ತರಬೇತಿ ಕಾರ್ಯಕ್ರಮಗಳು ಯುವಜನರಿಗೆ ಸ್ವಾವಲಂಬನೆ, ಉದ್ಯೋಗಾವಕಾಶ ಕಂಡುಕೊಳ್ಳಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಕೌಶಲಾಭಿವೃದ್ಧಿ ಯೋಜನೆಗಳ ಅನುಷ್ಠಾನ ಹಾಗೂ ತರಬೇತಿಗೆ ಸಂಬAಽಸಿದ ಇಲಾಖೆಗಳು ಹಾಗೂ ಸಂಸ್ಥೆಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕಿದೆ ಎಂದರು.

ಜಿಲ್ಲೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು, ಜಿಟಿಟಿಸಿ, ಪಾಲಿಟೆಕ್ನಿಕ್ ಕಾಲೇಜುಗಳು, ಸರ್ಕಾರಿ, ಖಾಸಗಿ ಇಂಜಿನಿಯರಿAಗ್ ಕಾಲೇಜುಗಳು, ಖಾಸಗಿ ವೃತ್ತಿಪರ ತರಬೇತಿ ಸಂಸ್ಥೆಗಳು ಯುವಜನರಿಗೆ ನೀಡುತ್ತಿರುವ ತರಬೇತಿ ಮತ್ತು ಉದ್ಯೋಗಾವಕಾಶ ಕುರಿತಂತೆ ಮಾಹಿತಿ ಪಡೆದ ಎಡಿಸಿ, ಉದ್ಯೋಗಾಧಾರಿತ ಕೋರ್ಸ್ಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಮುಖ್ಯಮಂತ್ರಿ ಕೌಶಲ ಕರ್ನಾಟಕ ಯೋಜನೆ ಅನುಷ್ಠಾನಕ್ಕಾಗಿ ಬೇಡಿಕೆಗೆ ಅನುಗುಣವಾಗಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅಽಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಕೌಶಲಾಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ತರಬೇತಿ ಅವಶ್ಯಕತೆಯ ಗುರುತಿಸುವಿಕೆ, ಕೈಗಾರಿಕಾ ಸಂಪರ್ಕ ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳು, ಕಾಲೇಜುಗಳು, ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ಬ್ಯಾಂಕ್‌ಗಳು ಮತ್ತು ಇತರೆ ಸಂಸ್ಥೆಗಳ ಸಮಗ್ರ ಮಾಹಿತಿ ಸಂಗ್ರಹಿಸಬೇಕು. ಜಿಲ್ಲಾ ಆರೋಗ್ಯಾಽಕಾರಿಗಳು, ಲೀಡ್‌ಬ್ಯಾಂಕ್ ವ್ಯವಸ್ಥಾಪಕರು, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು ಈ ಕುರಿತು ಸಭೆ ನಡೆಸಿ ಕ್ರಮ ವಹಿಸುವಂತೆ ಸೂಚಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಮಂಜುನಾಥ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ಪಿ.ಪ್ರವೀಣ್, ಜಿಲ್ಲಾ ಕೌಶಲಾ ಭಿವೃದ್ಧಿ ಕಚೇರಿ ಸಹಾಯಕ ಸಾಂಖ್ಯಿಕ ಅಽಕಾರಿ ವೇಮಣ್ಣ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಮಂಜುನಾಥ, ಡೇ-ನಲ್ಮ್ ಅ ಭಿಯಾನ ವ್ಯವಸ್ಥಾಪಕ ಅತೀಕ್‌ರೆಹಮಾನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಽಕಾರಿ ಪುಷ್ಪಲತಾ ಭಾವಿಮಠ, ಅಲ್ಪಸಂ ಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಽಕಾರಿ ರೇಖಾ, ಚಿತ್ರದುರ್ಗ ಜಿಟಿಟಿಸಿ ಕಾಲೇಜು ಪ್ರಾಂಶುಪಾಲ ಸುಹಾಸ್, ಜಿಲ್ಲಾ ಕೈಗಾರಿಕೋದ್ಯ ಮಿಗಳ ಸಂಘದ ಅಧ್ಯಕ್ಷ ಜಿ.ಡಿ.ಕೆಂಚವೀರಪ್ಪ ಇದ್ದರು.

ಸಾವಿರ ಅಭ್ಯರ್ಥಿಗಳಿಗೆ ತರಬೇತಿ

ರುಡ್‌ಸೆಡ್ ಸಂಸ್ಥೆಯಿAದ ಪ್ರಸಕ್ತ ಸಾಲಿನಲ್ಲಿ ೧೦೦೦ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುವ ಗುರಿ ಇದೆ ಎಂದು ನಿರ್ದೇಶಕ ಎಚ್.ಟಿ. ಬಸವರಾಜ್ ಅಶೋಕಪ್ಪ ತಿಳಿಸಿದರು.

ಈಗಾಗಲೇ ೬೫೪ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಮೊಬೈಲ್ ರಿಪೇರಿ, ಸಿಸಿಟಿವಿ ಅಳವಡಿಕೆ, ಹೌಸ್‌ವೈರಿಂಗ್ ಹಾಗೂ ಗೃಹೋಪಯೋಗಿ ಉಪಕರಣಗಳ ದುರಸ್ತಿ ಕುರಿತು ತರಬೇತಿ ನೀಡಲಾಗುತ್ತಿದೆ. ಐಟಿಐ ಹಾಗೂ ವಿವಿಧ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ರುಡ್‌ಸೆಟ್ ತರಬೇತಿ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರೆ ಹೆಚ್ಚಿನ ಯುವಜನರಿಗೆ ಅನುಕೂಲವಾಗುತ್ತದೆ ಎಂದರು.

ಯುವ ಉದ್ಯೋಗ ಸೇತು ಪೋರ್ಟಲ್

ರಾಜ್ಯ ಸರ್ಕಾರ ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ಯುವ ಉದ್ಯೋಗ ಸೇತು ಪೋರ್ಟಲ್ ಅನ್ನು ನವೆಂಬರ್ ೩ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಜಿಲ್ಲಾ ಕೌಶಲಾಭಿವÊದ್ಧಿ ಅಽಕಾರಿ ಸಣ್ಣಕ್ಕಿ ಮಾರುತಿ ಮಾಹಿತಿ ನೀಡಿದರು. ಜಿಲ್ಲೆಯಿಂದ ನ.೩ರೊಳಗಾಗಿ ಕನಿಷ್ಠ ೨೦೦ ಉದ್ಯೋಗಾಕಾಂಕ್ಷಿಗಳನ್ನು ಪೋರ್ಟಲ್‌ನಲ್ಲಿ ನೋಂದಾಯಿಸುವ ಗುರಿ ಇದೆ ಎಂದರು.