ಜಿಲ್ಲಾ ಆರೋಗ್ಯ ಶಿಕ್ಷಣಾಽಕಾರಿ ಕೃಷ್ಣನಾಯಕ್ ಮಾತನಾಡಿದರು. ಹಿರಿಯ ಆರೋಗ್ಯ ನಿರೀಕ್ಷಣಾಽಕಾರಿ ರುದ್ರಮುನಿ ಅಂಗಾAಗ ದಾನದ ಪ್ರತಿಜ್ಞಾವಿಽ ಬೋಽಸಿದರು. ಕವಿತಾ, ಶ್ರೀನಿವಾಸ್ ಮತ್ತಿತರರು ಇದ್ದರು.  
ಚಿತ್ರದುರ್ಗ

ಹಾವು ಕಡಿದಾಗ ಸಮಯಪ್ರಜ್ಞೆ ಅತಿ ಮುಖ್ಯ

ಕ್ಯಾಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ

ಹಾವು ಕಡಿತದ ಸಂದರ್ಭದಲ್ಲಿ ಭಯಕ್ಕಿಂತ ಜಾಗÊತಿ ಮತ್ತು ಸಮಯಪ್ರಜ್ಞೆ ಅತ್ಯಂತ ಮುಖ್ಯ ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಽಕಾರಿ ಜಿ.ವಿ. ಕೊಣ್ಣೂರ ತಿಳಿಸಿದರು.

ಜಿಲ್ಲಾ ಐಇಸಿ ವಿಭಾಗದಿಂದ ತಾಲೂಕಿನ ಕ್ಯಾಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಅಂತಾರಾಷ್ಟಿçÃಯ ಹಾವು ಕಡಿತ ಜಾಗÊತಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಹಾವು ಕಚ್ಚಿದಾಗ ವ್ಯಕ್ತಿಗೆ ಧೈರ್ಯ ತುಂಬಿ ಗಾಬರಿಯಾಗದಂತೆ ನೋಡಿಕೊಳ್ಳಬೇಕು. ಗಾಯದ ಜಾಗವನ್ನು ಕತ್ತರಿಸುವುದು, ಬಿಗಿಯಾಗಿ ಕಟ್ಟುವುದು ಅಥವಾ ಬಾಯಿಯಿಂದ ವಿಷ ತೆಗೆಯುವ ಪ್ರಯತ್ನ ಮಾಡಬಾರದು. ಹಾವು ಕಚ್ಚಿಸಿಕೊಂಡ ವ್ಯಕ್ತಿಯನ್ನು ನಡೆದಾಡಲು ಬಿಡದೆ, ಕಚ್ಚಿದ ಕೈ ಅಥವಾ ಕಾಲಿನಲ್ಲಿರುವ ಉಂಗುರ, ಬಳೆ, ವಾಚ್ ಹಾಗೂ ಬಿಗಿಯಾದ ಬಟ್ಟೆಗಳನ್ನು ತಕ್ಷಣ ತೆಗೆಯಬೇಕು. ಇವು ಊತ ಉಂಟಾದಾಗ ರಕ್ತಸಂಚಾರಕ್ಕೆ ಅಡೆ ತಡೆ ಉಂಟು ಮಾಡುತ್ತವೆ ಎಂದು ತಿಳಿಸಿದರು.

ಯಾವುದೇ ರೀತಿಯ ಮನೆಮದ್ದು, ನಾಟಿ ಚಿಕಿತ್ಸೆ ಸೇರಿ ಅಸುರಕ್ಷಿತ ವಿಧಾನ ಹಾಗೂ ಮೂಢನಂಬಿಕೆಗಳನ್ನು ಅನುಸರಿಸುತ್ತಾ ಕಾಲಹರಣ ಮಾಡದೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು. ಆಸ್ಪತ್ರೆಗೆ ಸಾಗಿಸುವಾಗ ಹಾವು ಕಚ್ಚಿದ ಭಾಗ ಅಲುಗಾಡದಂತೆ ರೋಗಿಯನ್ನು ಎಡಭಾಗಕ್ಕೆ ಮಲಗಿಸಬೇಕು. ರಾತ್ರಿ ವೇಳೆ ಸಂಚರಿಸುವಾಗ ಟಾರ್ಚ್ ಲೈಟ್ ಬಳಸುವುದು ಹಾಗೂ ಮನೆ ಸುತ್ತಮುತ್ತ ನೈರ್ಮಲ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.