ಬಿಎಸ್‌ವೈ ಅಭಿಮಾನೋತ್ಸವ ಸ್ಥಳದಲ್ಲಿ ಊಟೋಪಚಾರದ ಸಿದ್ಧತೆ ಕುರಿತು ಮಂಗಳವಾರ ಎಸ್.ಆರ್. ವಿಶ್ವನಾಥ್, ಮುನಿರತ್ನ, ಗೋಪಾಲಯ್ಯ, ಮುನಿರಾಜ್, ಕÊಷ್ಣಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು. ತಮ್ಮೇಶ್ ಗೌಡ, ಮಲ್ಲಿಕಾರ್ಜನ, ಕಲ್ಲಂ ಸೀತರಾಮರೆಡ್ಡಿ ಇತರರು ಚರ್ಚಿಸಿದರು. 
ಚಿತ್ರದುರ್ಗ

ಅಭಿಮಾನೋತ್ಸವದ ಊಟೋಪಚಾರಕ್ಕೆ ಸಿದ್ಧತೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ೧೦ ಲಕ್ಷ ನೀರಿನ ಬಾಟಲಿ
  • ೩೦ ಟನ್ ಬಾಳೆಹಣ್ಣು
  • ಲೋಡ್‌ಗಟ್ಟಲೇ ಮಜ್ಜಿಗೆ ಪಾಕೆಟ್
ಚಿತ್ರದುರ್ಗ: ಮೇ ೯ರಂದು ಬಿಎಸ್‌ವೈ ಅಭಿಮಾನೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಬರುವ ಲಕ್ಷಾಂತರ ಅಭಿಮಾನಿಗಳಿಗೆ ಊಟೋಪಚಾರದಲ್ಲಿ ಯಾವುದೇ ಕೊರತೆ ಆಗದಂತೆ ನಿಭಾಯಿಸಲಾಗುವುದು ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವ ನಾಥ್ ಹೇಳಿದರು.
ಬೆಂಗಳೂರಿನ ಇತರ ಶಾಸಕರು, ಮಾಜಿ ಸಚಿವರೊಂದಿಗೆ ಮಂಗಳವಾರ ನಗರದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ ಸ ಮೀಪದ ಸಮಾರಂಭ ಸ್ಥಳಕ್ಕೆ ಭೇಟಿ ನೀಡಿ ಅಡುಗೆಗೆ ಸಂಬAಽಸಿದAತೆ ಪರಿಶೀಲನೆ ನಡೆಸಿ ಮಾತನಾಡಿದರು.
ಕುಡಿಯುವ ನೀರು, ಊಟೋಪಚಾರದಲ್ಲಿ ಕೊರತೆ ಆಗದಂತೆ ನೋಡಿಕೊಳ್ಳುವ ಹೊಣೆಯನ್ನು ಬಿಜೆಪಿಯ ಬೆಂಗಳೂರಿನ ಶಾಸಕ ರು ಮತ್ತು ಪ್ರಮುಖರಿಗೆ ವಹಿಸಲಾಗಿದೆ. ಅಡುಗೆ ಸಿದ್ಧತೆಗೆ ೫೦೦ಕ್ಕೂ ಹೆಚ್ಚು ಬಾಣಸಿಗರನ್ನು ನೇಮಿಸಲಾಗಿದೆ. ಐದು ಕೌಂಟರ್‌ ಗಳಲ್ಲಿ ಬಫೆ ವ್ಯವಸ್ಥೆಯೊಂದಿಗೆ ತಿಂಡಿ, ಊಟ ವಿತರಿಸುವ ಹೊಣೆ ವಹಿಸಲಾಗಿದೆ ಎಂದರು.
ಪ್ರತಿ ಕೌಂಟರ್ ಉಸ್ತುವಾರಿಯನ್ನು ಬೆಂಗಳೂರಿನ ಇಬ್ಬರು ಶಾಸಕರು ಹಾಗೂ ೧೨೦ ಕಾರ್ಯಕರ್ತರಿಗೆ ವಹಿಸಲಾಗಿದೆ. ಅಭಿಮಾ ನೋತ್ಸವದ ದಿನ ಬೆಳಗ್ಗೆ ೯ ರಿಂದ ಸಮಾರಂಭ ಪೂರ್ಣಗೊಳ್ಳುವವರೆಗೂ ಊಟದÀ ವ್ಯವಸ್ಥೆ ಇರಲಿದೆ. ಬೆಳಗಿನ ಉಪಾಹಾರಕ್ಕೆ ಟೊಮ್ಯಾಟೊ ಬಾತ್, ಮೊಸರನ್ನ, ಮೈಸೂರುಪಾಕ್ ಹಾಗೂ ಮಧ್ಯಾಹ್ನ ೧೨ರ ನಂತರ ಊಟಕ್ಕೆ ವೆಜಿಟೇಬಲ್ ಪಲಾವ್, ಮೊಸ ರನ್ನ, ಮೈಸೂರುಪಾಕ್ ಹಾಗೂ ಬಾಟಲ್ ನೀರು ನೀಡಲಾಗುವುದು.
ಬಂದವರನ್ನು ಯಾವ ಕಾರಣಕ್ಕೂ ಹಸಿದ ಹೊಟ್ಟೆಯಲ್ಲಿ ಕಳುಹಿಸುವುದಿಲ್ಲ. ತುರ್ತು ಸಂದರ್ಭದಲ್ಲೂ ಆಹಾರ ಸಿದ್ಧಪಡಿಸಲು ವ್ಯ ವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಾಜಿ ಸಚಿವ ಮುನಿರತ್ನ ಮಾತನಾಡಿ, ಯಡಿಯೂರಪ್ಪ ಅವರು ನುಡಿದಂತೆ ನಡೆದುಕೊಂಡಿರುವ ನಾಯಕರು. ತಾವು ಬೆಳೆದು ಜತೆಯಲ್ಲಿದ್ದವರನ್ನೂ ಬೆಳೆಸುವ ಮೂಲಕ ದೊಡ್ಡ ವ್ಯಕ್ತಿಯಾಗಿದ್ದಾರೆ. ನಂಬಿದವರನ್ನು ಕೈಬಿಡುವುದಿಲ್ಲವೆಂಬ ಹೆಸರು ಯಾರಿಗಾ ದರೂ ಇದ್ದರೆ ಅದು ಬಿಎಸ್‌ವೈಗೆ ಮಾತ್ರ ಎಂದು ಬಣ್ಣಿಸಿದರು.
ಬಿಎಸ್‌ವೈ ಅವರ ಸುದೀರ್ಘ ೫೦ ವರ್ಷಗಳ ಹೋರಾಟ ಜೀವನದ ಅಭಿಮಾನೋತ್ಸವದ ಯಶಸ್ಸಿಗೆ ಎಲ್ಲರೂ ಕಂಕಣಬದ್ಧರಾಗಿ ಶ್ರಮಿಸುತ್ತಿದ್ದೇವೆ. ಎಲ್ಲೆಡೆ ಹಬ್ಬದ ವಾತಾವರಣ ಮೂಡಿದೆ ಎಂದರು.
ಕಾರ್ಯಕ್ರಮದ ಉಸ್ತುವಾರಿ ತಮ್ಮೇಶ್‌ಗೌಡ ಮಾತನಾಡಿ, ೧೦ ಲಕ್ಷಕ್ಕೂ ಹೆಚ್ಚು ನೀರಿನ ಬಾಟಲ್, ಲೋಡ್‌ಗಟ್ಟಲೇ ಮಜ್ಜಿಗೆ ಪಾಕೆಟ್, ೩೦ ಟನ್ ಬಾಳೆ ಹಣ್ಣು ತರಿಸಲಾಗುತ್ತ್ತಿದೆ ಎಂದು ವಿವರಿಸಿದರು.
ಶಾಸಕರಾದ ಮಹಾಲಕ್ಷಿ÷್ಮÃಪುರಂ ಗೋಪಾಲಯ್ಯ, ದಾಸರಹಳ್ಳಿ ಮುನಿರಾಜ್, ಬೆಂಗಳೂರು ದಕ್ಷಿಣದ ಕÊಷ್ಣಪ್ಪ, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಮುಖಂಡರಾದ ಮಲ್ಲಿಕಾರ್ಜುನ, ಕಲ್ಲಂ ಸೀತರಾಮರೆಡ್ಡಿ ಇತರರು ಇದ್ದರು.