ಚಿತ್ರದುರ್ಗ ತಾಲೂಕು ಹಿರೇಗುಂಟನೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟಿçÃಯ ಡೆಂಘೆ ರೋಗ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಡಾ.ಟಿ.ಆರ್. ಮೇಘನಾ, ಪುಟ್ಟಸ್ವಾಮಿ, ಹಾಲಾನಾಯ್ಕ, ಇಸ್ಲಾಯಿಲ್, ಜಬೀವುಲ್ಲಾ, ಗಂಗಮ್ಮ ಇತರರು ಇದ್ದರು.
- ಡಾ.ಟಿ.ಆರ್.ಮೇಘನಾ ಅಭಿಮತ
- ಹಿರೇಗುಂಟನೂರಲ್ಲಿ ಜಾಗೃತಿ ಅಭಿಯಾನ
- ಆರೋಗ್ಯ ಶಿಕ್ಷಣ
ಚಿತ್ರದುರ್ಗ: ಮಳೆಗಾಲದ ದಿನಗಳಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಡೆಂಘೇ ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಪಿಎಚ್‌ಸಿ ಆಡಳಿತ ವೈದ್ಯಾಽಕಾರಿ ಡಾ.ಟಿ.ಆರ್. ಮೇಘನಾ ಹೇಳಿದರು.
ಚಿತ್ರದುರ್ಗ ತಾಲೂಕು ಹಿರೇಗುಂಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟಿçÃಯ ಡೆಂಘೇ ರೋಗ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ತಿಂಗಳಾAತ್ಯದವರೆಗೆ ಸಾರ್ವಜನಿಕರಲ್ಲಿ ಡೆಂಘೇ ಕಾಯಿಲೆ ಮತ್ತು ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತು ಜಾಗೃತಿ ಮೂಡಿ ಸಲಾಗುವುದು. ಈ ಜಾಗೃತಿ ಅಭಿಯಾನ ಆರೋಗ್ಯ ಇಲಾಖೆಗೆ ಸೀಮಿತವಾಗದೆ, ಸಾರ್ವಜನಿಕರು ಹಾಗೂ ಸಮುದಾಯಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮನೆಗಳ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಆರೋಗ್ಯ ನಿರೀಕ್ಷಣಾಽಕಾರಿ ಪುಟ್ಟಸ್ವಾಮಿ ಮಾತನಾಡಿ, ಸೊಳ್ಳೆ ಕಚ್ಚಿದ ೫-೭ ದಿನಗಳಲ್ಲಿ ಡೆಂಘೇ ಜ್ವರದ ಲಕ್ಷಣಗಳು ಕಾಣಿಸಿ ಕೊಳ್ಳುತ್ತವೆ. ಂiÀiÁರಿಗಾದರೂ ದಿಢೀರ್ ಬರುವ ತೀವ್ರ ಜ್ವರ ಮತ್ತು ಅಸಹನೀಯ ತಲೆನೋವು ಇತ್ಯಾದಿ ಈ ಕಾಯಿಲೆ ಲಕ್ಷಣಗಳು ಕಾಣಿಸಿಕೊಂಡರೆ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದರು.
ಆರೋಗ್ಯ ಕೇಂದ್ರದ ಹಾಲಾನಾಯ್ಕ, ಇಸ್ಮಾಯಿಲ್, ಜಬೀವುಲ್ಲಾ, ಗಂಗಮ್ಮ, ಈರಮ್ಮ, ಜ್ಞಾನೇಶ್ವರಿ, ಸಿಂಧು, ಪುಷ್ಪವತಿ, ಸಿದ್ದಮ್ಮ, ಲೋಕೇಶ್ ಮತ್ತಿತರ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
ಚಿತ್ರದುರ್ಗ ಜಿಲ್ಲಾ ಹಾಗೂ ತಾಲೂಕು ಆರೋಗ್ಯಾಽಕಾರಿಗಳ ಕಚೇರಿ, ನೆಹರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಾಸವಿ ಪದವಿ ಪೂರ್ವ ಕಾಲೇಜು ಇವುಗಳ ಆಶ್ರಯದಲ್ಲಿ ಇತ್ತೀಚೆಗೆ ಚಿತ್ರದುರ್ಗದ ವಾಸವಿ ಶಾಲೆಯಲ್ಲಿ ಡೆಂಘೇ ವಿರೋಽ ಮಾಸಾಚರಣೆ ಆಯೋಜಿಸಲಾಗಿತ್ತು.
ಕೀಟ ಶಾಸöಜ್ಞೆ ನಂದಾ, ಜಿಲ್ಲಾ ಆರೋಗ್ಯ ಶಿಕ್ಷಣಾಽಕಾರಿ ಕೃಷ್ಣಾನಾಯಕ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಽಕಾರಿ ಗೋವಿಂದ ರೆಡ್ಡಿ ಕೊಣ್ಣೂರ ಹಾಗೂ ತಾಲೂಕ ಆರೋಗ್ಯ ಶಿಕ್ಷಣಾಽಕಾರಿ ಮೂಗಪ್ಪ ಅವರು ಮಾತನಾಡಿದರು. ಪ್ರಾಚಾರ್ಯ ಶ್ರೀಧರ್, ಆರೋಗ್ಯ ಶಿಕ್ಷಣಾಽಕಾರಿ ಜಾನಕಿ, ಮಲ್ಲಿಕಾರ್ಜುನ, ಹನುಮಂತಪ್ಪ, ನಾಗರತ್ನಮ್ಮ, ರವಿ, ಆಶಾ ಕಾರ್ಯಕರ್ತೆಯರು ಇದ್ದರು.
ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಯುವ ಪೀಳಿಗೆಗೆ ಆರೋಗ್ಯ ಶಿಕ್ಷಣದ ಅಗತ್ಯವಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಽಕಾರಿ ಬಿ. ಮೂಗಪ್ಪ ಹೇಳಿದರು.
ಚಿತ್ರದುರ್ಗ ತಾಲೂಕು ಆರೋಗ್ಯ ಅಽಕಾರಿ ಕಚೇರಿ, ಭೀಮಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಿAದ ಭೀಮಸಮುದ್ರದ ಭೀಮೇಶ್ವರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಮಾತನಾಡಿ, ಜನಸಂಖ್ಯಾ ಸೋಟದಿಂದ ದುಷ್ಪರಿಣಾಮಗಳು ಉಂಟಾಗುತ್ತಿವೆ.
ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅಪಾರ ಒತ್ತಡ ಆಗುತ್ತಿದೆ. ಬಡತನ, ನಿರುದ್ಯೋಗ, ಪರಿಸರ ಮಾಲಿನ್ಯ ಮತ್ತು ಅರಣ್ಯನಾಶ ಮುಂತಾದ ಸಮಸ್ಯೆಗಳು ಹೆಚ್ಚುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಆಸ್ಪದ ಕೊಡಬಾರದು ಎಂದರು. ಆರೋಗ್ಯ ಸುರಕ್ಷತಾಽಕಾರಿ ನಾಗರತ್ನಮ್ಮ, ಆರೋಗ್ಯ ನಿರೀಕ್ಷಣಾಽಕಾರಿ ಜಿ. ರವಿ ಹಾಗೂ ಶಿಕ್ಷಕ ಪ್ರದೀಪ್ ಮಾತನಾಡಿದರು. ಶಿಕ್ಷಕರಾದ ಗಿರೀಶ್, ಸುಮಾ ಇತರರು ಇದ್ದರು.