ಚಿತ್ರದುರ್ಗ: ಹಿರಿಯೂರಲ್ಲಿ ನ.೨೧ ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತÊತ್ವದಲ್ಲಿ ಪ್ರಜಾ ಸೇವಾ ಆಂದೋಲನ ಸಭೆ ಜರುಗಲಿ ದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ, ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಹೇಳಿದರು. ಸೇವಾ ಅಂದೋಲನದ ಪೂರ್ವ ಸಿ ದ್ಧತೆ ಕುರಿತಂತೆ ಅಽಕಾರಿಗಳೊಂದಿಗೆ ಜಿಲ್ಲಾಽಕಾರಿ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಿದ ಅವರು, ಅಂದಿನ ಸಭೆಗೂ ಇದ ಕ್ಕೂ ಮುನ್ನವೇ ಅರ್ಜಿ ನಮೂನೆಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಿ, ಸ್ವೀಕÊತವಾಗುವ ಅರ್ಜಿಗಳ ವಿಲೇವಾರಿಗೆ ಪ್ರಯತ್ನಿಸುವಂತೆ ಅಽ ಕಾರಿಗಳಿಗೆ ಸೂಚಿಸಿದರು.
ಹಿರಿಯೂರಿನ ಎಲ್ಲ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಜನರಿಗೆ ಪ್ರಜಾಸೇವಾ ಆಂದೋಲನ ಕುರಿತು ತಿಳಿಸ ಬೇಕು. ಈ ಹಿಂ ದೆ ಹಿರಿಯೂರಲ್ಲಿ ಕಳೆದ ಸೆಪ್ಟೆಂಬರ್೫ರAದು ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ, ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸ ಲಾಗಿತ್ತು. ಹೀಗೆ ಸ್ವೀಕÊತವಾಗಿದ್ದ ಅರ್ಜಿಗಳ ಪೈಕಿ ಎಷ್ಟು ವಿಲೇವಾರಿ ಆಗಿವೆ.
ಯಾವ ಅರ್ಜಿಗಳ ವಿಲೇವಾರಿ ತಡವಾಗಿದೆ. ಅದಕ್ಕೆ ಕಾರಣವೇನು ಎಂಬುದರ ಪಟ್ಟಿ ಮಾಡಿ ಮಾಹಿತಿ ಒದಗಿಸಬೇಕು. ಈಗಾಗಲೇ ಪ್ರಜಾಸೇವಾ ಆಂದೋಲನ ಸೇರಿ, ಐಪಿಜಿಆರ್ಎಸ್. ಪೋ ರ್ಟ್ಲ್ನಲ್ಲಿ ಸ್ವೀಕÊತವಾಗಿರುವ ಅರ್ಜಿಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಮ ಟ್ಟದ ಅಽಕಾರಿಗಳ ಹಂತದಲ್ಲೇ ಪರಿಹಾರ ಒದಗಿಸ ಬಹುದಾದರೆ, ಕೂಡಲೇ ಅಽಕಾರಿಗಳು ಸ್ಪಂದಿಸಿ ಕೆಲಸ ಮಾಡಿಕೊಡಬೇಕೆಂದರು.
ಮನೆ, ಮನೆಗೆ ಭೇಟಿ ನೀಡಿ
ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ಜರುಗುತ್ತಿರುವುದರಿಂದ ಹಿರಿಯೂರು ತಾಲೂಕಿನ ಎಲ್ಲ ಗ್ರಾಮ,ನಗರ ಪ್ರದೇಶದಲ್ಲಿ ಮನೆ, ಮನೆ ಗಳಿಗೆ ಭೇಟಿ ನೀಡಿ, ಅರ್ಜಿಗಳನ್ನು ವಿತರಿಸಿ, ಮರಳಿ ಅರ್ಜಿಗಳನ್ನು ಸ್ವೀಕರಿಸುವ ಕೆಲಸವಾಗಬೇಕು. ವೇದಿಕೆ ಕರ್ಯಕ್ರಮದ ಸ್ಥಳದಲ್ಲಿ ಸಾ ರ್ವಜನಿಕರಿಗೆ ನೆರಳು, ಸೂಕ್ತ ಆಸನದ ವ್ಯವಸ್ಥೆ ಕಲ್ಪಿಸಬೇಕು. ಸ್ಥಳದಲ್ಲಿ ಇಲಾಖೆವಾರು ಕೌಂಟರ್ ತೆರೆಯಬೇಕು.
ನೀರಿನ ಸಮಸ್ಯೆ
ಬರಗಾಲ ಹಿನ್ನಲೆಯಲ್ಲಿ ಸಾಕಷ್ಟು ಜನರು ಕುಡಿಯುವ ನೀರಿನ ಸಮಸ್ಯೆ ಹೊತ್ತು ಬರುತ್ತಾರೆ. ಇದರೊಂದಿಗೆ ಕಂದಾಯ ಇಲಾಖೆಗೆ ಸಂಬAಽಸಿದ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಅಽಕಾರಿಗಳು ಇದಕ್ಕೆ ಸಿದ್ಧರಿದ್ದು, ತಕ್ಷಣವೇ ಪರಿಹಾರಕ್ಕೆ ಮುಂದಾಗ ಬೇಕೆಂದು ರಘು ಮೂರ್ತಿ ತಿಳಿಸಿದರು.
ಜಿಲ್ಲಾಽಕಾರಿ ಎಸ್.ರಮ್ಯಾ, ಜಿಪಂ ಸಿಇಒ ಡಾ.ಎಸ್.ಆಕಾಶ್, ಉಪಕಾರ್ಯದರ್ಶಿ ಎಂ.ಬಾಬು, ಸಿಪಿಒ ಗಾಯಿತ್ರಿ, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ಡಾ.ಕೆ.ಜೆ.ಕಾಂತರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಆಹಾರ ಇಲಾಖೆ ಜೆಡಿ ಶಿ ದ್ರಾಮ ಮಾರಿಹಾಳ, ಹಿರಿಯೂರು ತಹಸೀಲ್ದಾರ್ ಸಿದ್ದೇಶ್ ಮತ್ತಿತರ ಅಽಕಾರಿಗಳಿದ್ದರು.