ಚಿತ್ರದುರ್ಗದಲ್ಲಿ ಸೋಮವಾರ ಆಯೋಜಿಸಿದ್ದ ವೀರಶೈವ ಅರ್ಬನ್ ಕೋ ಆಪರೇಟಿವ್ ಸೊಸೈಟಿ ರಜತ ಮಹೋತ್ಸವ ಸಮಾರಂಭದಲ್ಲಿ ಜೆ.ಎಂ.ಜಯಕುಮಾರ್ ಸೇರಿ ನಾನಾ ಸಹಕಾರಿಗಳನ್ನು ಗೌರವಿಸಲಾಯಿತು. ಪಟೇಲ್ ಶಿವಕುಮಾರ್, ಸಿ. ಚಂದ್ರಪ್ಪ, ಸುರೇಶ್ ಸಿದ್ದಾಪುರ ಮತ್ತಿತರ ಸೊಸೈಟಿ ನಿರ್ದೇಶಕರು, ಅಽಕಾರಿ, ಸಿಬ್ಬಂದಿ ಇದ್ದರು. 
ಚಿತ್ರದುರ್ಗ

ಪ್ರಗತಿಯತ್ತ ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಪಟೇಲ್ ಶಿವಕುಮಾರ್ ಹೇಳಿಕೆ
  • ರಜತ ಮಹೋತ್ಸವ ಸಮಾರಂಭ,
  • ಸಹಕಾರಿಗಳಿಗೆ ಸನ್ಮಾನ

ಚಿತ್ರದುರ್ಗ:

ನಗರದ ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಹಿವಾಟ ಹಂತ ಹಂತವಾಗಿ ವೃದ್ಧಿಯಾಗುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ಪಟೇಲ್ ಶಿವಕುಮಾರ್ ಹೇಳಿದರು.

ಸೊಸೈಟಿ ಆವರಣದಲ್ಲಿ ಸೋಮವಾರ ಸೊಸೈಟಿಯ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿ, ೨೫ ವರ್ಷಗಳ ಹಿಂದೆ ೨೦೦೧ರಲ್ಲಿ ೫೦೦ ಜನರ ಸದಸತ್ವದೊಂದಿಗೆ ಆರಂಭವಾದ ಸೊಸೈಟಿಯಲ್ಲಿಂದು ೧೭೦೨ ಜನ ಸದಸ್ಯರು ಇದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಪೈಪೋಟಿ ಕೊಡುವ ರೀತಿಯಲ್ಲಿ ಜನರ ನಂಬಿಕೆ ಉಳಿಸಿಕೊಂಡು ಪ್ರಗತಿಯತ್ತ ಸಾಗಿದೆ ಎಂದರು.
೨೦೨೫-೨೬ನೇ ಸಾಲಿನಲ್ಲಿ ಸೊಸೈಟಿ ಠೇವಣಿ, ಸಾಲ ಹಾಗೂ ಮುಂಗಡಗಳಲ್ಲಿ ಗಣನೀಯ ಪ್ರಗತಿ ಕಂಡಿದೆ. ಈ ಎಲ್ಲ ಬೆಳವಣಿ ಗೆಗಳ ಹಿಂದೆ ಸದಸ್ಯರ ಸಹಕಾರ, ಠೇವಣಿದಾರರ ನಂಬಿಕೆ ಮತ್ತು ಆಡಳಿತ ಮಂಡಳಿ ನಿರ್ದೇಶಕರ ನಿಸ್ವಾರ್ಥ ಸೇವೆ ಹಾಗೂ ಅವಿರತ ಬೆಂಬಲ ಕಾರಣವಾಗಿದೆ ಎಂದು ತಿಳಿಸಿದರು.
ಸೊಸೈಟಿ ಆರಂಭವಾದ ೧೦ನೇ ವರ್ಷಕ್ಕೆೆ ಸ್ವಂತ ಕಟ್ಟಡ ನಿರ್ಮಾಣವಾಯಿತು ಎಂದೂ ಪಟೇಲ್ ಶಿವಕುಮಾರ್ ಹೇಳಿದರು.
ಸಹಕಾರಿಗಳಾದ ಜೆ.ಎಂ. ಜಯಕುಮಾರ್, ಸಿ. ಚಂದ್ರಶೇಖರ್‌ಬಾಬು, ಕೆಇಬಿ ಷಣ್ಮುಖಪ್ಪ, ಎಸ್. ಶಂಭುಲಿಂಗಪ್ಪ, ಜೆ.ವಿ. ಮಂಜುನಾಥ್, ಎಸ್.ಬಿ. ಅನಿಲ್‌ಕುಮಾರ್, ಪರಮೇಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು.
ಸೊಸೈಟಿ ಉಪಾಧ್ಯಕ್ಷ ಸಿ. ಚಂದ್ರಪ್ಪ, ನಿರ್ದೇಶಕರಾದ ಕೆ.ಎಚ್. ಮರುಗೇಂದ್ರಪ್ಪ, ಸುರೇಶ್ ಸಿದ್ದಾಪುರ, ಡಿ.ಎಸ್. ರಾಜೇಶ್, ಟಿ.ಎಂ. ಕರಿಬಸವಯ್ಯ, ಜಿ.ಆರ್.ನಿವೇದಿತಾ, ಎಂ. ಶೈಲಜಾ, ಡಿ.ಎಸ್. ನೀಲಕಂಠೇಶ್ವರಪ್ಪ, ಕೆ.ಜಿ. ರೀನಾ, ವ್ಯವಸ್ಥಾಪಕಿ ಕುಸಮಾ ಜವಳಿ, ಲೆಕ್ಕಪತ್ರ ಅಽಕಾರಿ ಚಂಪಾ ಮತ್ತಿತರರು ಇದ್ದರು.