ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ
- ಮಾಜಿ ಸಚಿವ ಎಚ್.ಆಂಜನೇಯರಿಗೆ ಶಾಸಕ ಚಂದ್ರಪ್ಪ ಸವಾಲು
- ನನ್ನ ಜೀವನ ಬಿಳಿಹಾಳೆ ಇದ್ದಂತೆ
- ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ
ಚಿತ್ರದುರ್ಗ: ತಮ್ಮ ವಿರುದ್ಧದ ಭೂ ಕಬಳಿಕೆ, ಸರ್ಕಾರಿ ಜಮೀನು ಒತ್ತುವರಿ ಹಾಗೂ ಅಕ್ರಮ ಗಣಿಗಾರಿಕೆ ಆರೋಪವನ್ನು ಸಾಬೀ ತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ ಅವರು, ಮಾಜಿ ಸಚಿ ವ ಎಚ್.ಆಂಜನೇಯ ಅವರಿಗೆ ಸವಾಲು ಹಾಕಿದರು.
ನಗರದ ಪತ್ರಿಕಾಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿ ಶಿಷ್ಟ ಜಾತಿ ಫಲಾನುಭವಿಗಳಿಗೆ ಮಂಜೂರಾದ ಜಮೀನನ್ನು ಬೇರೊಬ್ಬರ ಹೆಸರಿಗೆ ನೋಂದಾಯಿಸಿದ ಬಳಿಕ ತಮ್ಮ ಪುತ್ರ ದೀಪ್ ಚಂದನ್ ಹೆಸರಿಗೆ ಮಾಡಿಸಿದ್ದೇನೆ ಹಾಗೂ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು, ಅಕ್ರಮವಾಗಿ ಕಬ್ಬಿಣ ಅದಿರು ಗಣಿಗಾರಿಕೆ, ಮಣ್ಣು ಮಾರಾಟ ಮಾಡಿದ್ದೇನೆ ಎಂದು ಆಂಜನೇಯ ತಮ್ಮ ವಿರುದ್ಧ ಆರೋಪಿಸಿದ್ದಾರೆ.
ಮಂತ್ರಿಯಾಗಿದ್ದವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಒಂದೇ ಒಂದು ಕ ಪ್ಪು ಚುಕ್ಕೆ ಇಲ್ಲ. ನಾನು ವೈಟ್‌ಪೇಪರ್ ಇದ್ದಂತೆ. ಹಿರೇಕಂದವಾಡಿ ರಿ.ಸರ್ವೆನಂ ೯೧/೫ರ ೪.೦೪ ಎಕರೆ, ಖರಾಬು ೦.೦೬ ಗುಂ ಟೆ, ಒಟ್ಟು ವಿಸ್ತೀರ್ಣ ೩.೩೮ ಎಕರೆ ಮತ್ತು ಇದೇ ಗ್ರಾಮದ ರಿ.ಸರ್ವೆ ನಂ ೯೧.೧ಬಿ ೨ ಎಂಟು ಎಕರೆ, ಖರಾಬು ೦.೧೨ ಗುಂಟೆ, ಒಟ್ಟು ವಿಸ್ತೀರ್ಣ ೭.೨೮ ಎಕರೆ ಜಮೀನು ತಮ್ಮ ಪುತ್ರನ ಹೆಸರಲ್ಲಿದೆ. ೧೯೧೦ರಿಂದ ಪಿತ್ರಾರ್ಜಿತ ಆಸ್ತಿಯಾಗಿದ್ದ ಸರ್ವೆ ನಂ ೯೧. ೧ಬಿ ೨ರ ೮ ಎಕರೆ ಹಾಗೂ ೯೧/೫ರ ೪.೦೪ ಎಕರೆ ೧೯೧೦ರಿಂದ ಯರ‍್ಯಾರಿಗೋ ಪರಭಾರೆಯಾದ ಬಳಿಕ ತಮ್ಮ ಪುತ್ರನ ಹೆಸ ರಿಗೆ ೨೦೨೧ರಲ್ಲಿ ನೋಂದಣಿಯಾಗಿದೆ ಎಂಬುದನ್ನು ವಿವರಿಸಿದರು.
೧೯೧೦ರಲ್ಲಿ ಪಿಟಿಸಿಎಲ್ ಕಾಯ್ದೆ ಇತ್ತೇ? ಅಂದ ಮೇಲೆ ಪರಿಶಿಷ್ಟ ಜಾತಿ ಫಲಾನುಭವಿಗಳ ಜಮೀನು ಕಬಳಿಕೆ ಆರೋಪ ಎಷ್ಟರ ಮಟ್ಟಿಗೆ ಸರಿ? ನನಗೆ ೨೦೦ ಎಕರೆಗೂ ಅಽಕ ಜಮೀನಿದೆ. ೧೯೯೪ರಿಂದ ಜಿಲ್ಲೆಯಲ್ಲಿ ಮೈನಿಂಗ್ ನಡೆಯುತ್ತಿದ್ದರೂ ಒಬ್ಬ ಗಣಿ ಮಾಲೀಕನನ್ನು ನಾನು ಮಾತನಾಡಿಸಿಲ್ಲ.
ಆಂಜನೇಯ ಅವರು ತಪ್ಪು ದಾಖಲೆ ಕೊಟ್ಟು ತಮ್ಮನ್ನು(ಮಾಧ್ಯಮ)ಮಿಸ್‌ಲೀಡ್ ಮಾಡಿದ್ದಾರೆ. ಮಂತ್ರಿಯಾಗಿದ್ದಾಗ ಅವರ ವಿರು ದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಕಾಂಗ್ರೆಸ್ ನಾಯಕರ ವಿರುದ್ಧವೂ ಭೂ ಕಬಳಿಕೆ ಆರೋಪ ಬಂದಿದ್ದನ್ನು ನೋಡಿದ್ದೇ ನೆ.
ರಾಜಕಾರಣದ ಧ್ವೇಷಕ್ಕಾಗಿ ವೈಯಕ್ತಿಕ ತೇಜೋವಧೆ ಶೋಭೆ ತರದು. ಸಾಮಾನ್ಯ ಜ್ಞಾನ ಇರಬೇಕು. ಅಕ್ರಮ ಗಣಿಗಾರಿಕೆ ದರಿದ್ರ ನನಗಿಲ್ಲ. ಅಽಕೃತವಾಗಿ ಮುಂದೆ ಗಣಿಗಾರಿಕೆ ಮಾಡುತ್ತೇನೆ. ತಮ್ಮ ಜಮೀನಲ್ಲಿ ನೀರಿನ ತೊಟ್ಟಿ, ಕೆಲಸಗಾರರಿಗೆ ಕ್ವಾಟರ್ಸ್ ಕಟ್ಟಿ ಸಿದ್ದೇನೆ. ಅವರಂತೆ ಕೃಷಿ ಜಮೀನಲ್ಲಿ ಬಂಗಲೆ ನಿರ್ಮಿಸಿಲ್ಲ. ನಾನು ಭರಮಸಾಗರದಲ್ಲೇ ೨ಬಾರಿ ಗೆದ್ದಿದ್ದೇನೆ. ಬಾಣದ ಗುರುತಿ ನಿಂದ ಭರಮಸಾಗರದಲ್ಲಿ ಅವರು ಗೆದ್ದಿದ್ದು ಎಂದು ಆಂಜನೇಯ ವಿರುದ್ಧ ಹರಿಹಾಯ್ದರು.