ರಂಜಿತ್‌ಕುಮಾರ್ ಬಂಡಾರು, ಎಸ್‌ಪಿ ಚಿತ್ರದುರ್ಗ
- ರಾಜ್ಯದ ಎಲ್ಲ ಠಾಣೆಗಳಲ್ಲಿ `ಸನ್ಮಿತ್ರ' ಜಾರಿ
- `ನಿಮ್ಮ ರಕ್ಷಣೆ ನಮ್ಮ ಗುರಿ' ಘೋಷಣೆ
- ರಾಜ್ಯ ಪೊಲೀಸ್ ಇಲಾಖೆ
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಮಾದಕವಸ್ತು ವ್ಯಸನಿಗಳನ್ನು ಅದರಿಂದ ಹೊರಗೆ ತಂದು ಸಮಾಜದ ಮುಖ್ಯವಾಹಿನಿಗೆ ತರಲು ಪೊಲೀಸರು ಇನ್ನು ವ್ಯಸನಿಗಳ `ಸನ್ಮಿತ್ರ' ರಾಗಿ ಕೆಲಸ ಮಾಡಲಿದ್ದಾರೆ.
ಮಾದಕ ವಸ್ತುಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುತ್ತಿರುವ ಪೊಲೀಸರು, ವ್ಯಸನಿಗಳನ್ನು ಮಾತ್ರ ಬರೀ ಆರೋಪಿ, ಅಪ ರಾಽಗಳೆಂದು ನೋಡದೆ, ಅವರನ್ನು ಮಿತ್ರರನ್ನಾಗಿ ಪರಿಗಣಿಸಿ, ಸಮಸ್ಯೆಯಿಂದ ಮುಕ್ತಗೊಳಿಸಲು ರಾಜ್ಯ ಪೊಲೀಸ್ ಇಲಾಖೆ `ನಿ ಮ್ಮ ರಕ್ಷಣೆ ನಮ್ಮ ಗುರಿ'ಎಂಬ ಘೋಷಣೆಯೊಂದಿಗೆ `ಸನ್ಮಿತ್ರ' ಕಾರ್ಯಕ್ರಮ ಜಾರಿಗೊಳಿಸಿದೆ.
ಎನ್‌ಡಿಪಿಎಸ್ ಕಾಯ್ದೆಯಡಿ ಮಾದಕವಸ್ತು ಕಳ್ಳ ಸಾಗಾಣಿಕೆ ಜಾಲ, ಮಾರಾಟ ಮತ್ತು ಬಳಕೆ ನಿಯಂತ್ರಣಕ್ಕೆ ಕಾನೂನು ಜಾರಿ ಕ ರ್ತವ್ಯದೊಂದಿಗೆ ಪಿಡುಗನ್ನು ಬೇರು ಸಹಿತ ಕಿತ್ತು ಹಾಕಲು ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಠಾಣೆಗಳಲ್ಲಿ help de sk ಸ್ಥಾಪಿಸಿ ಸನ್ಮಿತ್ರ ಅನುಷ್ಠಾನಕ್ಕೆ ಪೊಲೀಸ್ ಮಹಾ ನಿರ್ದೇಶಕರು ನಿರ್ದೇಶಿಸಿದ್ದಾರೆ.
ಪ್ರತಿ ಠಾಣೆ ವ್ಯಾಪ್ತಿಯಲ್ಲಿ ವ್ಯಸನಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ, ಕೌನ್ಸೆಲಿಂಗ್ ಕೊಡಿಸುವ ಮೂಲಕ ದುಶ್ಚಟದಿಂದ ಅವ ರನ್ನು ದೂರ ಮಾಡುವುದು. ವ್ಯಸನಿಯ ಹೆಸರು ಮತ್ತಿತರ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿ ಇಡುವುದು. ಪೊಲೀಸ್ ಸಿಬ್ಬಂ ದಿ, ವ್ಯಸನಿ ಜತೆ ದೂರವಾಣಿಯಲ್ಲಿ ಮಾತನಾಡಿ, ಚಿಕಿತ್ಸೆ ವಿವರಗಳ ಫಾಲೋ ಅಪ್‌ನೊಂದಿಗೆ ತೀರಾ ಅಗತ್ಯವೆನಿಸಿದರೆ ವ್ಯಸನಿ ಮನೆಗೆ ಮಫ್ತಿಯಲ್ಲಿ ತೆರಳಿ ಅವರ ಕುಶಲ ವಿಚಾರಿಸಬೇಕಿದೆ.
ವ್ಯಸನಿ ಸಂಪೂರ್ಣ ವ್ಯಸನಮುಕ್ತನಾಗಿದ್ದರೆ ಮತ್ತೆ ದುಶ್ಚಟಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಹಾಗೂ ವ್ಯಸನಿಯ ಸ್ನೇಹಿತ ರು ದುಶ್ಚಟಗಳಿಗೆ ದಾಸರಾಗಿದ್ದರೆ ಕೂಡಲೇ ಮೇಲಽಕಾರಿ ಗಮನಕ್ಕೆ ತರುವುದು. ವೈದ್ಯರು, ಪುನರ್ವಸತಿ ಕೇಂದ್ರದ ತಜ್ಞರ ಜತೆ ಸಮಾಲೋಚನೆ ನಡೆಸಿ ವ್ಯಸನಿಯ ಆರೋಗ್ಯ ರಕ್ಷಣೆ ಕೆಲಸವನ್ನು ಪೊಲೀಸರು ಮಾಡಲಿದ್ದಾರೆ.
ಹಿರಿಯ ಅಽಕಾರಿಗಳ ಮೇಲ್ವಿಚಾರಣೆ
ಠಾಣಾಽಕಾರಿ ಹಾಗೂ ಹಿರಿಯ ಅಽಕಾರಿಗಳು ಅನುಷ್ಠಾನದ ಮೇಲ್ವಿಚಾರಣೆ ನಡೆಸಲಿದ್ದಾರೆ. ಠಾಣಾಽಕಾರಿ ಪ್ರತಿ ಎರಡು ವಾರಕ್ಕೊಮ್ಮೆ, ಜಿಲ್ಲಾ ರಕ್ಷಣಾಽಕಾರಿ ಸೇರಿ ಹಿರಿಯ ಅಽಕಾರಿಗಳು ಸೂಚಿತ ಕಾಲಾವಽಯಲ್ಲಿ ಮೇಲಽಕಾರಿಗಳಿಗೆ ಪ್ರಗತಿ ವರದಿ ಮಾಡಬೇಕಿದೆ.
ಕಾನೂನು ಕನ್ನಡಕದಿಂದ ಸಮಸ್ಯೆ ನೋಡದೆ ವ್ಯಸನಿಗಳ ಪುನರುಜ್ಜೀವನ ಹಾದಿಯಲ್ಲಿ ಸ್ನೇಹಿತನಂತೆ ಪೊಲೀಸರು ನೆರವಾಗಲಿ ದ್ದಾರೆ. ಸಮಾಜದಲ್ಲಿ ಅಳುಕು, ಅವಮಾನ ನಿವಾರಣೆಗೆ ಪೊಲೀಸರ ಮಾತು, ವರ್ತನೆ ಮತ್ತು ಕೌನ್ಸೆಲಿಂಗ್ ಪ್ರಮುಖ ಪಾತ್ರ ವಹಿ ಸ ಬೇಕೆಂಬುದು ಇಲಾಖೆಯ ಇರಾದೆಯಾಗಿದೆ.
ಸನ್ಮಿತ್ರ ಜಾರಿಗೆ ಪೊಲೀಸ್ ಮಹಾನಿರ್ದೇಶಕರು ನಿರ್ದೇಶಿಸಿದ್ದಾರೆ. ಡಿಸೆಂಬರ್‌ನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ನಮ್ಮ ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ವ್ಯಸನಿಗಳನ್ನು ಗುರುತಿಸಿ ಅವರ ಪುನರುಜ್ಜೀವನಕ್ಕೆ ಪೊಲೀಸರು ಮಿತ್ರರಾಗಿ ಕೆಲಸ ಮಾಡಲಿದ್ದಾರೆ ಹಾಗೂ ಮಾದಕ ವಸ್ತು ಬಳಕೆ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಇನ್ನಷ್ಟು ಹಮ್ಮಿಕೊಳ್ಳಲಾಗುವುದು.