ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಜೆ. ಕರಿಯಪ್ಪ ಮಾಳಿಗೆ ನಡೆ-ನುಡಿ ಕಾರ್ಯಕ್ರಮವನ್ನು ನಟರಾಜ್ ಬೂದಾಳು ಉದ್ಘಾಟಿಸಿದರು. ಲೋಕೇಶ್ ಅಗಸನಕಟ್ಟೆ, ತಾರಿಣಿ ಶುಭದಾಯಿನಿ, ಚಂದ್ರಶೇಖರ್ ತಾಳ್ಯ, ಗಂಗಾಧರ್, ಅರುಣ್‌ಕುಮಾರ್, ಉಜ್ಜಿನಪ್ಪ, ಯೋಗೇಶ್, ಗೌನಹಳ್ಳಿ ಗೋವಿಂದಪ್ಪ, ವೀರೇಶ ವಿ. ಅಪ್ಪು ಇತರರಿದ್ದರು. 
ಚಿತ್ರದುರ್ಗ

ಬಹುತ್ವ ಚಿತ್ರದುರ್ಗ ಜಿಲ್ಲೆಯ ನಿಜವಾದ ಶಕ್ತಿ

ಪ್ರಮುಖ ಮುಖ್ಯಾಂಶಗಳು

  • ಚಿಂತಕ ನಟರಾಜ್ ಬೂದಾಳು ಅನಿಸಿಕೆ
  • ಡಾ.ಜೆ. ಕರಿಯಪ್ಪ ಮಾಳಿಗೆ ನಡೆ-ನುಡಿ ವಿಶಿಷ್ಟ ಪನ್ಯಾಸ ಕಾರ್ಯಕ್ರಮ
ಚಿತ್ರದುರ್ಗ: ಕರ್ನಾಟಕದ ಇತರೆ ಜಿ¯್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗದಲ್ಲಿ ಯಾವುದೇ ಒಂದು ನಿರ್ದಿಷ್ಟ ಜಾತಿ ಬಲಿಷ್ಠವಾಗಿಲ್ಲ. ಹೀಗಾಗಿ ಬಹುತ್ವವೇ ಈ ನೆಲದ ನಿಜವಾದ ಶಕ್ತಿ ಎಂದು ಸಂಸ್ಕೃತಿ ಚಿಂತಕ ಡಾ.ಎಸ್. ನಟರಾಜ ಬೂದಾಳು ಹೇಳಿದರು.
ಕ್ರೀಡಾ ಭವನದಲ್ಲಿ ಪತ್ರಕರ್ತರ ಬಳಗ, ಆಶಯ ವತಿಯಿಂದ ಭಾನುವಾರ ಆಯೋಜಿಸಿದ್ದ ಡಾ.ಜೆ. ಕರಿಯಪ್ಪ ಮಾಳಿಗೆ ನಡೆ-ನುಡಿ, ಗೌರವಾರ್ಪಣೆ ಮತ್ತು ವಿಶಿಷ್ಟ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ನೆಲದ ತತ್ವಪದಕಾರರ ಒಡನಾಟದೊಂದಿಗೆ, ಮಣ್ಣಿನ ಸತ್ವ ಮತ್ತು ಜೀವತಂತುವನ್ನು ಮೀಟಿದ ಅಪರೂಪದ ಸಂಶೋಧಕ ಕರಿಯಪ್ಪ ಮಾಳಿಗೆ ಎಂದು ಅಭಿಪ್ರಾಯಪಟ್ಟರು.
ತತ್ವಪದಗಳ ಸಂಗ್ರಹ ಯೋಜನೆಯಲ್ಲಿ ಕರಿಯಪ್ಪ ಅವರು ತೋರಿದ ಶ್ರದ್ಧೆಯಿಂದಾಗಿ ಹೊನ್ನೆನಹಳ್ಳಿ ದಾಸಗಿರಿ ಅಜ್ಜ, ಸಕ್ಕರೆಪ್ಪ ತಾತ, ವೀರಪ್ಪ ತಾತ ಹಾಗೂ ಕರೀಂ ಪೀರ ಅವರಂತಹ ನೂರಾರು ಅe್ಞÁತ ತತ್ವಪದಕಾರರು ಸಾಂಸ್ಕೃತಿಕ ಲೋಕಕ್ಕೆ ಪರಿಚ ಯವಾಗಿz್ದÁರೆ. ಚಿನ್ಮೂಲಾದ್ರಿ ಪರಂಪರೆಯ ಹಿಂದಿನ ತಲೆಮಾರಿನ ಸ್ವಾಮೀಜಿಗಳು ಕೂಡ ಅದ್ಭುತ ತತ್ವಪದಕಾರರಾಗಿದ್ದರು ಎಂದು ತಿಳಿಸಿದರು.
ವಿಮರ್ಶಕ ಡಾ. ಲೋಕೇಶ್ ಅಗಸನಕಟ್ಟೆ ಮಾತನಾಡಿ, ಬರವಣಿಗೆ ಬದುಕಿನ ನಡೆಯನ್ನೇ ಪ್ರತಿಬಿಂಬಿಸುವ ಕನ್ನಡಿಯಾಗಬೇಕು. ಕರಿಯಪ್ಪ ಮಾಳಿಗೆ ಅವರ ಬದುಕು ಮತ್ತು ಬರಹ ಎರಡೂ ಒಂದೇ ಆಗಿವೆ ಎಂದು ತಿಳಿಸಿದರು.
ಜಾನಪದ ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷೆಯ ಗ್ರಾಮ ಚರಿತ್ರೆ ಮತ್ತು ಗ್ರಾಮ ಕೋಶ ಸಿದ್ಧಪಡಿಸುವಲ್ಲಿ ಕರಿಯಪ್ಪ ಅವರ ಶ್ರಮ
ಅಪಾರ. ಪ್ರತಿ ಹಳ್ಳಿಯ ಅಸ್ಮಿತೆ ನಾಶವಾಗುವ ಮೊದಲೇ ಅವುಗಳನ್ನು ದಾಖಲಿಸಬೇಕೆಂಬ ಸದ್ದುದ್ದೇಶದೊಂದಿಗೆ ಮಾಹಿತಿ ಸಂಗ್ರಹಿಸುವ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಮರ್ಶಕಿ ತಾರಿಣಿ ಶುಭದಾಯಿನಿ ಮಾತನಾಡಿ, ಮಾಳಿಗೆ ಅವರು ಗಾದೆಗಳು ಮತ್ತು ಜನಪದ ಕಥನಗಳ ಮೂಲಕ ಸಾಂಸ್ಕೃತಿಕ ಸತ್ವವನ್ನು ಶೋಽಸುವ ಕೆಲಸ ಮಾಡಿz್ದÁರೆ. ಬಳ್ಳಾರಿಯ ಅವಧೂತರ ಕುರಿತು ಮಾಡಿದ ಸಂಶೋಧನೆಯು ಅವರ ತಾತ್ವಿಕ ಅಧ್ಯಯನಕ್ಕೆ ಉತ್ತಮ ನಿದರ್ಶನ ಎಂದರು.
ಕವಿ ಚಂದ್ರಶೇಖರ್ ತಾಳ್ಯ ಮಾತನಾಡಿ, ಕರಿಯಪ್ಪ ಮಾಳಿಗೆ ಅವರು ಮಣ್ಣಿನ ಗುಣ ಮತ್ತು ಜನರ ನಾಡಿಮಿಡಿತವನ್ನು ಚೆನ್ನಾಗಿ ಬಲ್ಲವರಾಗಿz್ದÁರೆ. ಮಾನವೀಯ ಸಂಬAಧಗಳು ಹೇಗಿರಬೇಕು ಎಂಬುದಕ್ಕೆ ಸ್ಪೂರ್ತಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಂತಕ ಡಾ.ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಯುವಜನತೆ ತಮ್ಮ ಬದುಕಿನ ಅಸ್ಮಿತೆ ಮತ್ತು ಶಕ್ತಿಯನ್ನು ಕಂಡುಕೊಳ್ಳಲು ವಚನ ಸಾಹಿತ್ಯದ ಓದು ಅನಿವಾರ್ಯ ಎಂದರು.
ಕಥೆಗಾರ ಗಂಗಾಧರ್, ಅಹೋಬಲ ಟಿವಿಎಸ್ ಮಾಲೀಕ ಟಿ.ವಿ. ಅರುಣ್‌ಕುಮಾರ್, ಹಿರಿಯ ಪತ್ರಕರ್ತರಾದ ಜಿ.ಎಸ್. ಉಜ್ಜಿನಪ್ಪ, ಎಂ.ಎನ್.ಯೋಗೇಶ್, ಗೌನಹಳ್ಳಿ ಗೋವಿಂದಪ್ಪ, ವೀರೇಶ ವಿ. ಅಪ್ಪು, ವೀರೇಂದ್ರಕುಮಾರ್ ಕೋಗುಂಡೆಮಠ, ಎಸ್. ಸಿದ್ಧರಾಜು, ಮಹೇಶ್‌ಬಾಬು, ಕೆ.ಪಿ. ಓಂಕಾರಮೂರ್ತಿ, ಪ್ರಾಧ್ಯಾಪಕರಾದ ಡಾ. ವಿಜಯ್‌ಕುಮಾರ್, ಡಾ.ಕೆ. ಚಿತ್ತಯ್ಯ ಇತರರಿದ್ದರು.