- ಶನಿಗ್ರಹ
- ಗ್ರಹಗಳ ವೀಕ್ಷಣೆ
- ಬರಿಗಣ್ಣಿಗೆ
ಚಿತ್ರದುರ್ಗ: feb-28ರಂದು ಸಂಜೆ ಆಕಾಶದಲ್ಲಿ ಗ್ರಹಗಳ ಪರೇಡ್ ಅಂದರೆ ಒಂದೇ ಸಾಲಿನಲ್ಲಿ ೬ ಗ್ರಹಗಳನ್ನು ಬರಿಗಣ್ಣಿನಿಂದ ನೋಡ ಬಹುದಾಗಿದೆ. ಅಂದು ಪಶ್ಚಿಮ ದಿಗಂತದೆಡೆ ಕಣ್ಣು ಹಾಯಿಸಿದರೆ, ಬುಧ, ಹೊಳೆಯುವ ಶುಕ್ರ, ಕೆಂಪುಬಣ್ಣದ ಶನಿಗ್ರಹ ಹಾಗೂ ತುಸು ಎತ್ತರದಲ್ಲಿ ಪ್ರಕಾಶ ಮಾನವಾಗಿ ಹೊಳೆಯುವ ಗುರುಗ್ರಹಗಳನ್ನು ನೋಡಬಹುದಾಗಿದೆ.
ಈ ಅಪರೂಪದ ಜೋಡಣೆ ಬರಿಗಣ್ಣಿಗೆ ಒಂದು ರೇಖೆಯಂತೆ ಕಂಡರೂ, ವಾಸ್ತವದಲ್ಲಿ ಗ್ರಹಗಳು ಬಾಹ್ಯಾಕಾಶದಲ್ಲಿ ತಮ್ಮದೇ ಆದ ಕಕ್ಷೆ ಗಳಲ್ಲಿರುತ್ತವೆ. ಈ ಘಟನೆಯನ್ನು ಸಂಜೆ ೬.೩೦ರಿಂದ ೮ ಗಂಟೆವರೆಗಿನ ಈ ಅವಽಯಲ್ಲಿ ಅರ್ಧ ತಾಸು ಗ್ರಹಗಳ ವೀಕ್ಷಣೆಗೆ ಅವಕಾಶ ದೊರೆಯಲಿದೆ.
ಯುರೇನಸ್ ಹಾಗೂ ನೆಪ್ಚೂನ್ ಗ್ರಹಗಳನ್ನು ಬೈನಾಕ್ಯುಲರ್ ಇಲ್ಲವೇ ಉತ್ತಮ ದೂರದರ್ಶಕಗಳ ಮೂಲಕ ನೋಡಬೇಕು. ಇಂತಹದ್ದೊAದು ಘಟನೆಯನ್ನು ಮತ್ತೆ ನೋಡಲು ೨೦೪೦ರ ವರೆಗೆ ಕಾಯಬೇಕಾಗುತ್ತದೆ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್‌ಎಸ್‌ಟಿ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.