ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ರಾಜ್ಯ ಕಾನೂನು ಸೇವಾ ಪ್ರಾಽಕಾರದ ಅಧ್ಯಕ್ಷರು, ನ್ಯಾಯಮೂರ್ತಿ ಅ ನುಶಿವರಾಮನ್ ಉದ್ಘಾಟಿಸಿದರು. ನ್ಯಾಯಮೂರ್ತಿಗಳಾದ ಎಂ.ಜಿ. ಉಮಾ, ವಿ. ಶ್ರೀಶಾನಂದ, ಟಿ. ವೆಂಕಟೇಶ್‌ನಾಯ್ಕ್, ಜಿಲ್ಲಾ ಕಾನೂನು ಸೇವಾ ಪ್ರಾಽಕಾರದ ಅಧ್ಯಕ್ಷ ರೋಣ್ ವಾಸುದೇವ, ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಇದ್ದರು.
- ಹೈಕೋರ್ಟ್ ನ್ಯಾಯಾಮೂರ್ತಿ ಅನುಶಿವರಾಮನ್ ಪ್ರತಿಪಾದನೆ
- ನೊAದವರಿಗೆ ಶೀಘ್ರನ್ಯಾಯ, ಪರಿಹಾರ ದೊರಕಬೇಕು
- ಕೋರ್ಟ್ ಆದೇಶಗಳು ಸಕಾಲದಲ್ಲಿ ಜಾರಿಯಾಗಲಿ
ಚಿತ್ರದುರ್ಗ: ಸಮನ್ವಯತೆ ಮೂಲಕ ಸಮಾಜದ ದುರ್ಬಲ ವರ್ಗದವರಿಗೆ ಕಾಲಮಿತಿಯೊಳಗೆ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಽಕಾರಗಳು ನ್ಯಾಯ ದೊರಕಿಸಿಕೊಡಬೇಕು ಎಂದು ಹೈಕೋರ್ಟ್ ನ್ಯಾಯಾಮೂರ್ತಿ, ರಾಜ್ಯ ಕಾನೂನು ಸೇವೆಗಳ ಪ್ರಾಽಕಾರದ ಅಧ್ಯಕ್ಷೆ ಅನುಶಿವರಾಮನ್ ಹೇಳಿದರು.
ರಾಜ್ಯ ಕಾನೂನು ಸೇವಾ ಪ್ರಾಽಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸಹಯೋಗದಲ್ಲಿ ಶನಿವಾರ ಜಿಲ್ಲಾ ಪಂ ಚಾಯಿತಿಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕಾನೂನು ಸೇವಾ ಪ್ರಾಽಕಾರಗಳ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳಿಗೆ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಽಕಾರಗಳ ನಡುವಿನ ಅಂತರ ನಿವಾರಣೆ ಹಾಗೂ ಪ್ರಾಽಕಾರಗಳ ದಕ್ಷತೆ ಹೆಚ್ಚಿಸುವ ಕುರಿತು ಮಾತನಾಡಿದರು. ಸಮಾಜದ ಕಟ್ಟಕಡೆ ವ್ಯಕ್ತಿಗೂ ನ್ಯಾಯ ದೊರಕಬೇಕೆಂಬ ಉದ್ದೇಶದಿಂದ ೧೯೮೫ರಲ್ಲಿ ಸ್ಥಾಪಿತ ರಾ ಷ್ಟಿçÃಯ ಕಾನೂನು ಸೇವಾ ಪ್ರಾಽಕಾರದಡಿ ರಾಜ್ಯ, ಜಿಲ್ಲಾ ಕಾನೂನು ಸೇವಾ ಪ್ರಾಽಕಾರಗಳು ಕಾರ್ಯನಿರ್ವಹಿಸುತ್ತಿವೆ.
ರಾಷ್ಟಿçÃಯ ಮಟ್ಟದಲ್ಲಿ ರೂಪಿಸುವ ಯೋಜನೆಗಳ ಅನುಷ್ಠಾನ ಜವಾಬ್ದಾರಿ ನಮ್ಮಗಳ ಮೇಲಿದೆ. ಈ ಕಾರ್ಯವನ್ನು ಶಿಷ್ಟಾಚಾರ ನೋಡದೆ ಮಾನವೀಯ ಕಳಕಳಿಯೊಂದಿಗೆ ನಿರ್ವಹಿಸಬೇಕಿದೆ ಎಂದು ನ್ಯಾಯಮೂರ್ತಿ ಹೇಳಿದರು. ಜಿಲ್ಲಾ ನ್ಯಾಯಾಽÃಶರನ್ನು ಪ್ರಾಽಕಾರದ ಜಿಲ್ಲಾಧ್ಯಕ್ಷರಾಗಿ, ಹಿರಿಯ ನ್ಯಾಯಾಽÃಶರನ್ನು ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಪ್ರಾಽಕಾರದ ಕರ್ತವ್ಯ ನಿರ್ವಹಣೆ ಸಮಯದಲ್ಲಿ ಕಡು ವ್ಯತ್ಯಾಸಗಳನ್ನು ಮರೆತು ಒಂದಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.
ನ್ಯಾಯ ಸಿಗದ ಅಸಹಾಯಕ ಮತ್ತು ತುಳಿತಕ್ಕೆ ಒಳಗಾದ ಜನರ ಸೇವೆಗೆ ಪ್ರಾಽಕಾರವಿದೆ. ಕಾನೂನು ನೆರವು ಪಡೆಯುವುದು ಈ ಜನರ ಹಕ್ಕು. ಅದನ್ನು ಒದಗಿಸುವುದು ನಮ್ಮ ಕರ್ತವ್ಯ. ನೋಂದವರಿಗೆ ಶೀಘ್ರ ನ್ಯಾಯ, ಪರಿಹಾರ ದೊರಕಬೇಕು. ನ್ಯಾಯಾ ಲಯಗಳ ಪರಿಹಾರದ ಆದೇಶಗಳು ಸಕಾಲದಲ್ಲಿ ಜಾರಿಯಾಗಬೇಕೆಂದು ಅನುಶಿವರಾಮನ್ ಹೇಳಿದರು.
ನ್ಯಾಯಮೂರ್ತಿ ಎಂ.ಜಿ. ಉಮಾ ಅವರು ಲೆಕ್ಕಪತ್ರ ನಿರ್ವಹಣೆ ಮತ್ತು ಕಾನೂನು ಸೇವೆಗಳ ಚಟುವಟಿಕೆಗಳ ಕುರಿತು, ನ್ಯಾಯ ಮೂರ್ತಿ ಹಾಗೂ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಽÃಶ ವಿ. ಶ್ರೀಶಾನಂದ ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರಗಳ ಪಾತ್ರ ಮತ್ತು ಜವಾಬ್ದಾರಿಗಳು ಕುರಿತು ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್‌ನಾಯ್ಕ್ ಅವರು ಜಿ ಲ್ಲಾ ಕಾನೂನು ಸೇವಾ ಪ್ರಾಽಕಾರಗಳು ಸರ್ಕಾರಿ ಇಲಾಖೆಗಳೊಂದಿಗೆ ಸಹಯೋಗ ಮತ್ತು ಸಮನ್ವಯ ಕುರಿತು ಮಾತನಾಡಿ ದರು.
ರಾಜ್ಯ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ, ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಅಧ್ಯಕ್ಷ ರೋಣ್‌ವಾಸುದೇವ, ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಇತರರು ಇದ್ದರು.
ರಾಜ್ಯದ ಹೃದಯ ಭಾಗ ಚಿತ್ರದುರ್ಗ
ರಾಜ್ಯದ ಪ್ರತಿ ಜಿಲ್ಲೆಯಲ್ಲಿರುವ ಭಿನ್ನ ಸಮಸ್ಯೆಗಳನ್ನರಿತು ಜಿಲ್ಲಾ ಮಟ್ಟದ ಕಾನೂನು ಸೇವಾ ಪ್ರಾಽಕಾರಗಳು ಕೆಲಸ ಮಾಡಬೇಕು. ನ್ಯಾ ಯಾಂಗದ ಕರ್ತವ್ಯಗಳಿಗಿಂತ ಪ್ರಾಽಕಾರದ ಕರ್ತವ್ಯಗಳು ಭಿನ್ನವಾಗಿವೆ. ಜಿಲ್ಲಾಮಟ್ಟದಲ್ಲಿ ಶಾಸಕಾಂಗ ಹಾಗೂ ಕಾರ್ಯಾಂಗದ ಆಡಳಿತಾತ್ಮಕ ಕೆಲಸಗಳ ಮೇಲ್ವಿಚಾರಣೆಯೊಂದಿಗೆ, ಸಂವಿಧಾನದ ಆಶಯಗಳನ್ನು ಈಡೇರಿಸಲು, ನ್ಯಾಯವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯು ವ ಕೆಲಸವನ್ನು ಪ್ರಾಽಕಾರಗಳು ಮಾಡಬೇಕಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಹÊದಯಭಾಗ ಚಿತ್ರದುರ್ಗದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಅನುಶಿವರಾಮನ್ ಹೇಳಿದರು.
ರಾಜ್ಯ ಕಾನೂನು ಸೇವಾ ಪ್ರಾಽಕಾರದಲ್ಲಿ ಜಿಲ್ಲೆಗಳಿಗೆ ಸಂಬAಽದAತೆ ಅಂದಾಜು ೬ ಕೋಟಿ ರೂ. ಶುಲ್ಕ ಹಾಗೂ ೨೧ ಕೋಟಿ ರೂ. ಸಂತ್ರಸ್ತರ ಪರಿಹಾರ ಪಾವತಿ ಬಾಕಿಯಿದ್ದು, ಕಡತಗಳ ತ್ವರಿತ ವಿಲೇವಾರಿ ಅತ್ಯಗತ್ಯತೆಯನ್ನು ನ್ಯಾಯಮೂರ್ತಿ ಅನುಶಿವರಾಮನ್ ಪ್ರತಿಪಾದಿಸಿ ದರು. ಪ್ರಾಽಕಾರದ ಜಿಲ್ಲಾಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳೊಂದಿಗೆ ಅವರು ಸಂವಾದ ನಡೆಸಿದರು.