ಚಿತ್ರದುರ್ಗ ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುನ್ನ ಪಟೇಲ್‌ಶಿವಕುಮಾರ್ ತಂಡದ ಅಭ್ಯರ್ಥಿಗಳು ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ, ಜಿ.ಟಿ. ಸುರೇಶ್‌ಸಿದ್ದಾಪುರ, ವಕೀಲ ಅನಿಲ್‌ಕುಮಾರ್ ಇತರರು ಇದ್ದರು. 
ಚಿತ್ರದುರ್ಗ

ವೀರಶೈವ ಸೊಸೈಟಿಗೆ ಪಟೇಲ್ ಶಿವಕುಮಾರ್ ತಂಡದಿAದ ನಾಮಪತ್ರ ಸಲ್ಲಿಕೆ

ಪ್ರಮುಖ ಮುಖ್ಯಾಂಶಗಳು

  • ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ
  • ಆಡಳಿತ ಮಂಡಳಿ ಚುನಾವಣೆ
  • ಹತ್ತು ಮಂದಿ ಅಭ್ಯರ್ಥಿಗಳು
ಚಿತ್ರದುರ್ಗ: ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಪಟೇಲ್ ಶಿವಕುಮಾರ್ ತಂಡದ ಹತ್ತು ಮಂದಿ ಅಭ್ಯರ್ಥಿಗಳು ಗುರುವಾರ ಚುನಾವಣಾಽಕಾರಿ ಯೂನುಸ್ ಫರ್ವಿಜ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಪಟೇಲ್‌ಶಿವಕುಮಾರ್, ಕೆಇಬಿ ಷಣ್ಮುಖಪ್ಪ, ಜಿ.ಟಿ. ಸುರೇಶ್‌ಸಿದ್ದಾಪುರ, ಡಿ.ಎಸ್. ರಾಜೇಶ್, ಕುಳೇನೂರುಗೌಡ್ರು ಮುರುಗೇಂದ್ರಪ್ಪ, ಸಿ. ಚಂದ್ರು, ಬಿ.ಎಂ. ಕರಿಬಸವಯ್ಯ, ಟಿಎಸ್‌ಎನ್ ಪ್ರಸಾದ್, ರೀನಾವೀರಭದ್ರಪ್ಪ ಹಾಗೂ ಶೈಲಜಾ ಪ್ರಶಾಂತ್ ಅವರು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಅಭ್ಯರ್ಥಿಗಳು ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ, ವಕೀಲ ಅನಿಲ್‌ಕುಮಾರ್, ಜಿ.ಆರ್. ಪ್ರಭಾಕರ್, ಮಲ್ಲಿಕಾರ್ಜುನ್, ಜಯಣ್ಣ, ಪ್ರಭು, ಕಲ್ಲೇಶಯ್ಯ ಮತ್ತಿತರರು ಇದ್ದರು.
ಸೊಸೈಟಿ ಆಡಳಿತ ಮಂಡಳಿಯ ೧೧ ನಿರ್ದೇಶಕ ಸ್ಥಾನಗಳಿಗೆ ಡಿ.೨೮ ರಂದು ಚುನಾವಣೆ ನಡೆಯಲಿದೆ. ಡಿ.೧೪ ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ೨೧ ಕೊನೇದಿನವಾಗಿದೆ.