ಯರ‌್ರೇನಹಳ್ಳಿ ಸಮೀಪದ ಕಿತ್ತೂರು ರಾಣಿ ಚನ್ನಮ್ಮ ಶಾಲೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಭ್ರಮೋತ್ಸವವನ್ನು ಡಾ. ಬಿ.ಎಂ. ಗುರುನಾಥ ಉದ್ಘಾಟಿಸಿದರು. ಶ್ರೀ ಬಸವಲಿಂಗ ಸ್ವಾಮೀಜಿ, ದಸ್ತಗಿರಿಸಾಬ್, ಡಿ.ಒ. ಮುರಾರ್ಜಿ, ಕೆ.ಓ. ಶಿವಣ್ಣ, ಕಾಂತರಾಜ, ನರಸಿಂಹಮೂರ್ತಿ ಇದ್ದರು. Culture 
ಚಿತ್ರದುರ್ಗ

ಮುಂದಿನ ಪೀಳಿಗೆಗೆ ಸಂಸ್ಕೃತಿ, ಪರಂಪರೆ ತಲುಪಿಸಿ Culture

ಪ್ರಮುಖ ಮುಖ್ಯಾಂಶಗಳು

  • ಶ್ರೀ ಬಸವಲಿಂಗ ಸ್ವಾಮೀಜಿ ಸಲಹೆ
  • ಸಾಂಸ್ಕೃತಿಕ ಸಂಭ್ರಮೋತ್ಸವ
ಮೊಳಕಾಲ್ಮೂರು: ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸದ ಮೌಲ್ಯ ಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನ ಎಲ್ಲರಿಂದಾಗಬೇಕು ಎಂದು ಸಿದ್ದಯ್ಯನಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು. Culture
ತಾಲೂಕಿನ ಯರ‌್ರೇನಹಳ್ಳಿ ಸಮೀಪದ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಸಾಂಸ್ಕೃತಿಕ ರಂಗ ಮಂದಿರದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಗ್ರಾಮೀಣ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಭ್ರಮೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ವ್ಯವಸ್ಥೆಯಲ್ಲಿ ಜಾನಪದ, ಗಿಗೀ ಪದಗಳು, ಸೋಬಾನೆ, ಕಂಸಾಳೆ, ಕೋಲಾಟ, ಗೊರವರ ಕುಣಿತ, ವೀರಗಾಸೆ, ತಮಟೆ ವಾದ್ಯ ಇತ್ಯಾದಿ ಗ್ರಾಮೀಣ ಸೊಗಡಿನ ಕಲಾ ಪ್ರಕಾರಗಳು ಅಳಿವಿನ ಅಂಚಿನಲ್ಲಿವೆ. ಯುವಕರು ಮೊಬೈಲ್ ಹಾಗೂ ಟಿವಿ ವ್ಯಾಮೋಹಕ್ಕೆ ದಾಸರಾಗಿರುವುದು ಇಷ್ಟಕ್ಕೆಲ್ಲ ಕಾರಣ. ಮನೆಯ ಹಿರಿಯರು ಮಕ್ಕಳಲ್ಲಿ ಉತ್ತಮ ನಾಗರಿಕತೆ ಹಾಗೂ ಮುಂದಿನ ಉಜ್ವಲ ಭವಿಷ್ಯದ ಬಗ್ಗೆ ತಿಳಿವಳಿಕೆ ನೀಡುವ ಅಗತ್ಯವಿದೆ ಎಂದರು.
ಕನ್ನಡ, ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಎಂ. ಗುರುನಾಥ ಮಾತನಾಡಿ, ನಾನಾ ಪ್ರಕಾರಗಳ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ಸಿಕ್ಕ ವೇದಿಕೆಗಳನ್ನು ಸಮರ್ಥವಾಗಿ ಬೆಳಸಿಕೊಂಡರೆ ಪ್ರತಿಭಾವಂತರಾಗಿ ರೂಪುಗೊಳ್ಳಬಹುದು ಎಂದರು.
ಸಾಂಸ್ಕೃತಿಕ ಕ್ಷೇತ್ರದ ಬೆಳವಣಿಗೆಗೆ ಇಲಾಖೆ ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತಿದೆ. ಕಲಾ ಪ್ರತಿಭೆಗಳು ಸಮರ್ಥವಾಗಿ ಬೆಳಸಿಕೊಳ್ಳಬೇಕು ಎಂದರು. ಕಿತ್ತೂರು ರಾಣಿ ಚನ್ನಮ್ಮ ಶಾಲೆ ಪ್ರಾಚಾರ್ಯ ದಸ್ತಗಿರಿಸಾಬ್, ಜಿಲ್ಲಾ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಒ. ಮುರಾರ್ಜಿ, ಸಂಗೀತ ಶಿಕ್ಷಕ ಕೆ.ಒ. ಶಿವಣ್ಣ, ಕಾಂತರಾಜ, ನರಸಿಂಹಮೂರ್ತಿ, ಮಮತಾ, ನವೀನ್ ಕುಮಾರ, ಅರುಣಕುಮಾರ, ಶಿವಣ್ಣ, ಲಿಂಗರಾಜು, ತಿಪ್ಪೇಸ್ವಾಮಿ, ಅನ್ನಪೂರ್ಣ ಇತರರು ಇದ್ದರು.