ಎಸ್.ನಾಗಭೂಷಣ್ 
ಚಿತ್ರದುರ್ಗ

ಎನ್‌ಸಿಇಆರ್‌ಟಿಯಿಂದ ಕಲಾತ್ಮಕ ಸ್ಪರ್ಧೆಗಳ ಆಯೋಜನೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆ
  • ೭.೪೮ ಲಕ್ಷ ರೂ. ಅನುದಾನ ಬಿಡುಗಡೆ
  • ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಲಾ ಸಂಭ್ರಮ

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ


ಸಂಸ್ಕೃತಿ, ಕಲೆ ಹಾಗೂ ಶೈಕ್ಷಣಿಕ ಮೌಲ್ಯಗಳನ್ನು ಮೇಳೈಸುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎನ್‌ಸಿಇಆರ್‌ಟಿ ಹೊಸ ಮೆರುಗು ನೀಡಿದೆ.
ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಜಾಗÊತಿ ಹಾಗೂ ಸಂಸÊ್ಕತಿಯ ಅರಿವು ಮೂಡಿಸಲು ರಾಷ್ಟಿçÃಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ ೫ ಹಂತಗಳ ಬÊಹತ್ ನÊತ್ಯ ಹಾಗೂ ಅಭಿನಯ ಸ್ಪರ್ಧೆಯನ್ನು ಘೋಷಿಸಲಾಗಿದೆ.
ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಕಸ್ತೂರಬಾ ಗಾಂಽ ಬಾಲಿಕಾ ವಸತಿ ಶಾಲೆಗಳ ೮ ಮತ್ತು ೯ನೇ ತರಗತಿಯ ವಿದ್ಯಾ ರ್ಥಿಗಳು ಭಾಗವಹಿಸಬಹುದು. ಈ ಸ್ಪರ್ಧೆಗಳ ಯಶಸ್ವಿ ನಿರ್ವಹಣೆಗಾಗಿ ರಾಜ್ಯದ ೩೪ ಶೈಕ್ಷಣಿಕ ಜಿಲ್ಲೆಗಳಿಗೆ ಒಟ್ಟು ೭.೪೮ ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ಕರ್ನಾಟಕದ ೨೦೪ ತಾಲೂಕುಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಸ್ಪರ್ಧೆಗಳು ಥೀಮ್ ಆಧಾರಿತವಾಗಿದ್ದು ಶಾಲೆ, ತಾಲೂಕು, ಜಿಲ್ಲೆ ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ನಡೆಯಲಿವೆ.
ಆಯಾ ಶಾಲಾ ಶಿಕ್ಷಕರು ಸ್ಪರ್ಧೆ ಆಯೋಜಿಸಿರುವ ಕುರಿತಂತೆ ಎನ್‌ಪಿಇಪಿ ಪೋರ್ಟ್ಲ್ eಠಿಠಿmo://ಡಿಡಿಡಿ.್ಞmಛಿm್ಞ್ಚಛ್ಟಿಠಿ.ಜ್ಞಿ ನಲ್ಲಿ ಕಡ್ಡಾಯವಾಗಿ ಈ ತಿಂಗಳ ಅಂತ್ಯದೊಳಗೆ ನೋಂದಣಿ ಮಾಡಿಕೊಳ್ಳಬೇಕಿದೆ.
ಪಾತ್ರಾಭಿನಯ ಸ್ಪರ್ಧೆ
ಅರ್ಹ ಶಾಲೆಗಳ ೯ನೇ ತರಗತಿಯ ಪ್ರತಿ ತಂಡದಲ್ಲಿ ೪-೫ ವಿದ್ಯಾರ್ಥಿಗಳು ಒಂದು ಥೀಮ್ ಆಯ್ಕೆ ಮಾಡಿಕೊಂಡು ೫-೬ ನಿಮಿಷದ ಅವಽಯಲ್ಲಿ ಹಿಂದಿ/ಇAಗ್ಲಿಷ್‌ನಲ್ಲಿ ಪ್ರದರ್ಶನವನ್ನು ಪ್ರಸ್ತುತಪಡಿಸಬೇಕು. ಸ್ಪರ್ಧೆಗೆ ಯಾವುದೇ ವೇಷಭೂಷಣ, ಪೋಸ್ಟರ್, ಪರಿಕರಗಳ ನ್ನು ಬಳಸುವಂತಿಲ್ಲ.
ಜಾನಪದ ನÊತ್ಯ ಸ್ಪರ್ಧೆ
ಅರ್ಹ ಶಾಲೆಗಳ ೮ ಮತ್ತು ೯ನೇ ತರಗತಿಯ ಪ್ರತಿ ತಂಡದಲ್ಲಿ ೪-೬ವಿದ್ಯಾರ್ಥಿಗಳು ಒಂದು ಥೀಮ್ ಆಯ್ಕೆ ಮಾಡಿಕೊಂಡು ೫-೬ ನಿಮಿಷದ ಅವಽಯಲ್ಲಿ ಸ್ಥಳೀಯ ಭಾಷೆಯಲ್ಲಿ ಜಾನಪದ ನÊತ್ಯ ಪ್ರಸ್ತುತ ಪಡಿಸಬೇಕು. ಅಗತ್ಯವಿರುವ ವೇಷಭೂಷಣ, ಧ್ವನಿ ಮುದ್ರಿತ ಸಂಗೀತ, ಪರಿಕರಗಳ ಬಳಕೆಗೆ ಅವಕಾಶವಿದೆ. ರಾಷ್ಟಿçÃಯ ಮಟ್ಟದಲ್ಲಿ ತೀರ್ಪುಗಾರರಿಗೆ ನೃತ್ಯದ ವಿವರವನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಒದಗಿಸಬೇಕಾಗುತ್ತದೆ.
ಲಿಂಗ ಸಮಾನತೆ, ಆರೋಗ್ಯ ಮತ್ತು ನೈರ್ಮಲ್ಯ, ಮಾದಕ ವಸ್ತುಗಳ ದುರ್ಬಳಕೆ ವಿರುದ್ಧ ಜಾಗೃತಿ, ಅಂತರ್ಜಾಲ ಮತ್ತು ಮಾಧ್ಯಮಗಳ ಸುರಕ್ಷಿತ ಬಳಕೆ ಉತ್ತೇಜನ, ಪರಿಸರ ಸಂರಕ್ಷಣೆ ಇತ್ಯಾದಿ ೧೨ ಥೀಮ್‌ಗಳಲ್ಲಿ ಒಂದನ್ನು ಸ್ಪರ್ಧೆಗೆ ಆಯ್ಕೆ ಮಾಡಿಕೊಳ್ಳಬೇಕು. ಪ್ರತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡ ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತದೆ.
ಸ್ಪರ್ಧೆ ವೇಳಾಪಟ್ಟಿ
೧. ಶಾಲಾಮಟ್ಟ-ಆಗಸ್ಟ್-ಸೆಪ್ಟೆಂಬರ್
೨. ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟ-ಸೆಪ್ಟೆಂಬರ್/ಅಕ್ಟೋಬರ್
೩. ಎನ್‌ಸಿಇಆರ್‌ಟಿಗೆ ರಾಜ್ಯದ ವಿಜೇತ ತಂಡದ ವಿವರದ ವರದಿ ಸಲ್ಲಿಕೆ-ಅಕ್ಟೋಬರ್ ೩೧ರೊಳಗೆ
೪. ರಾಷ್ಟಿçÃಯ ಮಟ್ಟದ ಸ್ಪರ್ಧೆ-ಡಿಸೆಂಬರ್/೨೦೨೭ಜನವರಿ.
----

"

ವಿದ್ಯಾರ್ಥಿಗಳ ಸಮಗ್ರ ವಿಕಸನದ ನಿಟ್ಟಿನಲ್ಲಿ ಜಾಗÊತಿ ಮೂಡಿಸಲು ಈ ಸ್ಪರ್ಧೆಗಳು ಸಹಕಾರಿಯಾಗಿವೆ. ಚಿತ್ರದುರ್ಗ ಜಿಲ್ಲೆಯ ೧೧೫ ಸ ರ್ಕಾರಿ, ೧೯೮ ಅನುದಾನಿತ ಪ್ರೌಢಶಾಲೆಗಳು, ೨ ಕೆಜಿಬಿವಿ ಶಾಲೆಗಳ ಸಹಿತ ಒಟ್ಟು ೩೧೫ ಶಾಲೆಗಳಿಂದ ೩೪೬೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ಗುರಿ ಇದೆ.

— ಎಸ್.ನಾಗಭೂಷಣ್, ಪ್ರಾಚಾರ್ಯ, ಡಯಟ್,ಚಿತ್ರದುರ್ಗ.

"

ವಿದ್ಯಾರ್ಥಿಗಳಲ್ಲಿ ಜೀವನ ಕೌಶಲ ಬೆಳೆಸಲು, ಅನುಭವಾಧಾರಿತ ಕಲಿಕೆ ಉತ್ತೇಜಿಸಲು, ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಮನೋಭಾವ ವೃದ್ಧಿಗೆ ಸ್ಪರ್ಧೆಗಳು ನೆರವಾಗುತ್ತವೆ. ಪ್ರತಿ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ತಾಲೂಕು ನೋಡಲ್ ಅ ಽಕಾರಿಗಳು ಪ್ರೋತ್ಸಾಹಿಸಬೇಕಿದೆ..

— ಎಸ್.ಬಸವರಾಜು, ಎನ್‌ಪಿಇಪಿ ಜಿಲ್ಲಾ ನೋಡಲ್ ಅಽಕಾರಿ