ವಿದ್ಯುತ್ ಖಾಸಗೀಕರಣ ವಿರೋಽಸಿ ಚಿತ್ರದುರ್ಗದಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿ ಎಸಿ ಡಾ. ಕಾಂತರಾಜು ಅವರಿಗೆ ಮನವಿ ಸಲ್ಲಿಸಿದರು. ಕೆ.ಪಿ.ಭೂತಯ್ಯ, ಕೆ.ಟಿ. ತಿಪ್ಪೇಸ್ವಾಮಿ, ರೆಡ್ಡಿಹಳ್ಳಿ ವೀರಣ್ಣ,ಪ್ರವೀಣ್‌ಕುಮಾರ್, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಲಕ್ಷ÷್ಮಣ್‌ಹೂ ಗಾರ್, ರ‍್ಲಹಳ್ಳಿ ರವಿಕುಮಾರ್ ಇತರರು ಇದ್ದರು. 
ಚಿತ್ರದುರ್ಗ

ವಿದ್ಯುತ್ ಪೂರೈಕೆ ವ್ಯವಸ್ಥೆ ಖಾಸಗೀಕರಣಕ್ಕೆ ವಿರೋಧ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಕಚೇರಿ ಮುಂದೆ ರೈತರ ಪ್ರತಿಭಟನೆ
  • ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗ
  • ವಿದ್ಯುತ್ ವಿತರಣೆ ಪರವಾನಗಿ
ಚಿತ್ರದುರ್ಗ: ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ವಿತರಣೆ ಪರವಾನಗಿಯನ್ನು ಯಾವುದೇ ಖಾಸಗಿ ಕಂಪನಿಗಳಿಗೆ ವಹಿಸಬಾರದು ಎಂದು ಆಗ್ರಹಿಸಿ ರೈತರು ಸೋಮವಾರ ನಗರದ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿAದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಽಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದ ಪ್ರತಿ ಭಟನಾಕಾರರು, ವಿದ್ಯುತ್ ವಿತರಣೆ ವ್ಯವಸ್ಥೆ ಖಾಸಗಿಯವರ ಕೈಗೆ ಸೇರಿದರೆ ಗೃಹಜ್ಯೋತಿ ಮತ್ತಿತರ ಉಚಿತ ವಿದ್ಯುತ್ ಸೌಲಭ್ಯಗಳು ರದ್ದಾಗುವ ಸಾಧ್ಯತೆ ಇದೆ.
ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ವ್ಯವಸ್ಥೆ ಜಾರಿ ಮಾಡಿ ಶುಲ್ಕ ನಿಗದಿ ಮಾಡುತ್ತಾರೆ. ಇದರಿಂದ ಆರ್ಥಿಕ ಹೊರೆ ಹೆಚ್ಚಾಗಿ ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಖಾಸಗೀಕರಣದಿಂದ ವಿದ್ಯುತ್ ದರ ದುಬಾರಿಯಾಗಲಿದೆ. ಬೆಸ್ಕಾಂ, ಎಸ್ಕಾಂ, ಮೆಸ್ಕಾಂ ಸಿಇಎಸ್‌ಸಿ ಕಂಪನಿಗಳ ನೌಕರರು ಮ ತ್ತು ಅವರ ಕುಟುಂಬದವರ ಜೀವನ ನಿರ್ವಹಣೆಗೆ ತೊಂದರೆಯಾಗಲಿದೆ. ನೇಮಕಾತಿಯಲ್ಲಿ ಮೀಸಲಾತಿ ಕೂಡ ರದ್ದಾಗಲಿದೆ. ದಲಿತರು, ಶೋಷಿತ ವರ್ಗದವರಿಗೆ ಉದ್ಯೋಗ ಮರಿಚೀಕೆಯಾಗಲಿದೆ.
ಗ್ರಾಮೀಣ ಪ್ರದೇಶಗಳು ವಿದ್ಯುತ್ ಪೂರೈಕೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ. ಆದ್ದರಿಂದ ಯಾವುದೇ ಕಾರಣಕ್ಕೂ ವಿದ್ಯುತ್ ವಿತ ರಣೆ ಖಾಸಗಿಯವರಿಗೆ ವಹಿಸಬಾರದು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿ ಉಪ ವಿಭಾಗಾಽ ಕಾರಿ ಡಾ. ಕಾಂತರಾಜು ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಡಿಎಸ್‌ಹಳ್ಳಿ ಮಲ್ಲಿಕಾರ್ಜುನ,ರೆಡ್ಡಿಹಳ್ಳಿ ವೀ ರಣ್ಣ, ಪ್ರವೀಣ್‌ಕುಮಾರ್, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಹಂಪಣ್ಣ, ಲಕ್ಷ÷್ಮಣ್‌ಹೂಗಾರ್, ರ‍್ಲಹಳ್ಳಿ ರವಿಕುಮಾರ್, ವೆಂಕಟೇಶ್, ಮಹೇಶ್, ರಾಜಣ್ಣ,ತಿಪ್ಪೇಸ್ವಾ ಮಿ, ಚಂದ್ರಣ್ಣ, ಈರಣ್ಣ, ಕಾಂತರಾಜ್, ನಾಗರಾಜು, ಚಂದ್ರಶೇಖರಪ್ಪ, ನಾರಾಯಣಪ್ಪ, ಗಂಗಾ ಧರ, ಮಹೇಶ್ ಇತರರು ಪ್ರತಿ ಭಟನೆಯಲ್ಲಿ ಭಾಗವಹಿಸಿದ್ದರು.
ಅಖಂಡ ಕರ್ನಾಟಕ ರೈತ ಸಂಘ ಪ್ರತಿಭಟನೆ
ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣೆಗೆ ಅವಕಾಶ ನೀಡಲು ಹೊರಟಿರುವುದನ್ನು ಆಕ್ಷೇಪಿಸಿ ಸೋಮವಾರ ಚಳ್ಳಕೆರೆ ತಾ ಲೂಕು ಅಖಂಡ ಕರ್ನಾಟಕ ರೈತ ಸಂಘ ಹಾಗೂ ವಿವಿಧ ಗ್ರಾಮ ಘಟಕಗಳ ಪದಾಽಕಾರಿಗಳು ಸೋಮವಾರ ಪರಶುರಾಮಪುರ
ನಾಡಕಚೇರಿಗೆ ತೆರಳಿ ಉಪ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮದ ಮುಖ್ಯ ವೃತ್ತದಲ್ಲಿ ಜಮಾಯಿಸಿದ ಪದಾಽಕಾರಿಗಳು ಮಾನವ ಸರಪಳಿ ರಚಿಸಿ, ವಿದ್ಯುತ್ ಪೂರೈಕೆ ಖಾಸಗಿ ಕಂಪನಿ ಗಳಿಗೆ ನೀಡಲು ಮುಂದಾಗಿರುವ ಸರ್ಕಾರದ ನಡೆ ಖಂಡಿಸಿ ಘೋಷಣೆ ಕೂಗಿದರು. ಮೆರವಣಿಗೆ ಮೂಲಕ ಬೆಸ್ಕಾಂ ಕಚೇರಿಗೆ ತೆರಳಿ ಶಾಖಾಽಕಾರಿಗೆ ಮನವಿ ಸಲ್ಲಿಸಿದರು.
ತಾಲೂಕು ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಕೆ. ಚಿಕ್ಕಣ್ಣ ಮಾತನಾಡಿ, ರಾಜ್ಯದಲ್ಲಿ ಈವರೆಗೂ ಕರ್ನಾಟಕ ವಿದ್ಯುತ್ ಪ್ರ ಸರಣ ನಿಗಮದ ನೌಕರರು ರೈತರಿಗೆ ಸಕಾಲಕ್ಕೆ ವಿದ್ಯುತ್ ಸೇವೆ ನೀಡುತ್ತಿದ್ದರು. ಈಗ ಖಾಸಗಿ ಕಂಪನಿಗಳ ವಶಕ್ಕೆ ನೀಡುತ್ತಿರು ವುದು ಎಷ್ಟು ಸರಿ.? ಕೂಡಲೇ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಗೌರವಾಧ್ಯಕ್ಷ ಶಾಂತಣ್ಣ ಮಾತನಾಡಿ, ವಿದ್ಯುತ್ ವಿತರಣಾ ಕಂಪನಿಗಳು ರಾಜ್ಯ ಸರ್ಕಾರದ ಅಽÃನದಲ್ಲಿಯೇ ಕಾರ್ಯ ನಿರ್ವಹಿಸ ಲು ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬೆಸ್ಕಾಂ ಎಸ್‌ಒ ಶಿವಕುಮಾರ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ರೈತರು ನೀಡಿರುವ ಮನವಿ ಪತ್ರವನ್ನು ಮೇಲಾಽಕಾರಿಗಳಿಗೆ ನೀಡಲಾಗುವುದು ಎಂದರು.
ಸAಘದ ಕಾರ್ಯಾಧ್ಯಕ್ಷ ಹನುಮಂತರಾಯ, ಜಂಪಣ್ಣ, ಕಾರ್ಯದರ್ಶಿ ಪ್ರಕಾಶ, ಖಾದರ್‌ಭಾಷಾ, ನಾಗೇಂದ್ರಪ್ಪ, ನರಸಿಂಹಮೂ ರ್ತಿ, ಶಂಕ್ರಪ್ಪ, ತಿಮ್ಮಯ್ಯ, ಮಂಜಣ್ಣ, ರಮೇಶ ಇತರರು ಇದ್ದರು.