ವಿದ್ಯುತ್ ಖಾಸಗೀಕರಣದ ಅನುಮತಿ ನಿರಾಕರಿಸುವಂತೆ ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ (ಡಾ. ವಾಸುದೇವ ಮೇಟಿ)ಬಣದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಈ.ಎನ್. ಲಕ್ಷಿ÷್ಮÃಕಾಂತ, ಲೋಲಾಕ್ಷಮ್ಮ, ಪವಿತ್ರಾ, ಕಾಂತರಾಜ್ ಇತರರು ಇದ್ದರು.
- ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ
- ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನೆ
- ಖಾಸಗೀಕರಣ ಏಕೆ ?
ಚಿತ್ರದುರ್ಗ: ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಖಾಸಗಿ ಕಂಪನಿಗಳಿಗೆ ನೀಡುವ ನಿರ್ಧಾರ ವಿರೋಽಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ (ಡಾ.ವಾಸುದೇವ ಮೇಟಿ) ಬಣದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಿAದ ಡಿಸಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ವಿದ್ಯುತ್ ಖಾಸಗೀಕರಣದ ಪ್ರಸ್ತಾವನೆಯ ಅನು ಮತಿ ನಿರಾಕರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ರಾಜ್ಯದ ೧೯ ಜಿ¯್ಲೆಗಳಿಗೆ ಸಂಬAಽಸಿದ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ವಿದ್ಯುತ್ ವಿತರಣಾ ಕಂಪನಿಗಳನ್ನು ವ್ಯವಸ್ಥಿತ ವಾಗಿ ಖಾಸಗಿ ಕಂಪನಿಗೆ ವಹಿಸುವ ಜನವಿರೋಽ ತೀರ್ಮಾನ ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸಾವಿರಾರು ಕೋಟಿ ಮೌಲ್ಯದ, ಬೃಹತ್ ಸೌಕರ್ಯ ಹೊಂದಿರುವ ವಿತರಣಾ ಕಂಪನಿಗಳು, ಉಪಕೇಂದ್ರಗಳು, ಯಂತ್ರೋಪಕರಣ ಸಾರ್ವಜನಿಕ ಆಸ್ತಿ ಎಂಬುದನ್ನು ಸರ್ಕಾರ ಮರೆತಂತಿದೆ. ಅಲ್ಲದೆ, ಸದ್ಯ ಸರ್ಕಾರಿ ಸ್ವಾಮ್ಯದ ಕಂಪನಿಗಳು ಮತ್ತು ನೌಕರರು ಸಮ ಪರ್ಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿz್ದÁರೆ. ಆದರೂ ಖಾಸಗೀಕರಣ ಏಕೆ ಎಂದು ಪ್ರಶ್ನಿಸಿದರು.
ಖಾಸಗೀಕರಣವಾದಲ್ಲಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಿ ಪೋ¸್ಟï ಪೇಯ್ಡ್ ಮಾದರಿ ಜಾರಿಯಾಗಲಿದೆ. ಜನಸಾಮಾನ್ಯರ ಬದುಕಿಗೆ ಆಧಾರವಾಗಿರುವ ಉಚಿತ ವಿದ್ಯುತ್ ಪೂರೈಕೆ, ರೈತರ ಪಂಪ್‌ಸೆಟ್‌ಗಳಿಗೆ ಬಳಕೆ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಆರ್‌ಆರ್‌ಜಿ ಇನ್ನಿತರೆ ಯೋಜನೆಗಳು ರದ್ದಾಗಲಿವೆ.
ಇದರಿಂದ ಅವಲಂಬಿತ ಎಲ್ಲರ ಮೇಲೂ ಆರ್ಥಿಕ ಹೊರೆ ಬೀಳುವ ಆತಂಕ ಎದುರಾಗಿದೆ. ಆದ್ದರಿಂದ ಎಲ್ಲ ವರ್ಗದ ಹಿತ ಕಾಪಾಡಲು ಅನುಮತಿ ನೀಡದಂತೆ ಸರ್ಕಾರವನ್ನು ಕೋರಿದರು.
ಸಂಘದ ಜಿಲ್ಲಾಧ್ಯಕ್ಷ ಈ.ಎನ್. ಲಕ್ಷಿ÷್ಮÃಕಾಂತ ಲಿಂಗಾವರಹಟ್ಟಿ, ಮಹಿಳಾ ಘಟಕದ ಜಿ¯್ಲÁಧ್ಯಕ್ಷೆ ಲೋಲಾಕ್ಷಮ್ಮ, ಪದಾಽಕಾ ರಿಗಳಾದ ಪವಿತ್ರಾ, ಮಂಜುಳಾ ಕೊಳಹಾಳ್, ಜಯಲಕ್ಷಿ÷್ಮÃ, ಎಸ್. ಕಾಂತರಾಜ್, ನಾಗರಾಜ್, ಹೇಮಾರೆಡ್ಡಿ ಕರೀಕೆರೆ, ಸಿ. ಓಂಕಾರಪ್ಪ, ತಿಪ್ಪೇಸ್ವಾಮಿ, ಮಾರುತಿ ಇತರರು ಇದ್ದರು.