ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧ ಚಿತ್ರದುರ್ಗದಲ್ಲಿ ಬುಧವಾರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸೌದೆ ಒಲೆಯಲ್ಲಿ ಅಡುಗೆ ತಯಾರಿಸುವ ಮೂಲಕ ಪ್ರತಿಭಟನೆ ನಡೆಸಿದರು. 
ಚಿತ್ರದುರ್ಗ

ಅಡುಗೆ ಅನಿಲ ದರ ಏರಿಕೆಗೆ ವಿರೋಧ

ಪ್ರಮುಖ ಮುಖ್ಯಾಂಶಗಳು

  • ದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
  • ಬೆಲೆ ನಿಯಂತ್ರಣಕ್ಕೆ ಒತ್ತಾಯ
  • ಜನ ವಿರೋಽ ನೀತಿ
ಚಿತ್ರದುರ್ಗ: ಅಡುಗೆ ಅನಿಲ ದರ ಏರಿಕೆ ವಿರೋಽಸಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ನಗರದ ಒನಕೆ ಓಬವ್ವ ವೃತ್ತದಲ್ಲಿ ಸೌದೆ ಒಲೆಯಲ್ಲಿ ಅಡುಗೆ ತಯಾರಿಸುವ ಮೂಲಕ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ೨೦೧೪ರಲ್ಲಿ ಅಽಕಾರಕ್ಕೆ ಬಂದ ಎನ್‌ಡಿಎ ಸರ್ಕಾರ ಅಚ್ಛೇ ದಿನ್ ತರುವು ದಾಗಿ ಹೇಳಿ ಅಡುಗೆ ಅನಿಲದ ಬೆಲೆ ನಿರಂತರ ಏರಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆಗಳು ಸಹ ಏರಿಕೆಯಾಗಿ ಜನರು ಜೀವನ ನಡೆ ಸುವುದೇ ಕಷ್ಟವಾಗಿದೆ. ಕೇಂದ್ರ ಸರ್ಕಾರ ಜನ ವಿರೋಽ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಯುಪಿಎ ಸರ್ಕಾರದ ಅವಽಯಲ್ಲಿ ೪೦೦ ರೂ. ಇದ್ದ ಮನೆ ಬಳಕೆ ಎಲ್‌ಪಿಜಿ ಸಿಲಿಂಡರ್ ಇಂದು ೧ ಸಾವಿರ ರೂ.ಗೆ ತಲುಪಿದೆ. ಕೂಡಲೇ ಬೆಲೆ ಏರಿಕೆ ನಿಯಂತ್ರಣಕ್ಕೆ ತರಬೇಕು ಎಂದು ಆಗ್ರಹಿಸಿದರು.
ರಂಜಾನ್ ಮಾಸದಲ್ಲಿ ಇರಾನ್ ಮೇಲೆ ದಾಳಿ ನಡೆಸಿ, ಅಮಾಯಕರ ಸಾವು ನೋವು, ಅಪಾರ ಪ್ರಮಾಣದ ಹಾನಿಗೆ ಕಾರಣವಾ ಗಿರುವ ಅಮೆರಿಕ-ಇಸ್ರೇಲ್ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕೂಡಾ ಮಾಜಿ ಅಧ್ಯಕ್ಷ ಆರ್.ಕೆ. ಸರ್ದಾರ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಽಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿವೆ. ಅಡುಗೆ ಅನಿಲದ ಬೆಲೆ ಹೆಚ್ಚಳದಿಂದ ಬಡವರು, ಮಧ್ಯಮ ವರ್ಗದವರು ತತ್ತರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪದಾಽಕಾರಿಗಳಾದ ಕೆ.ಎಂ. ಹಾಲಸ್ವಾಮಿ, ಆರ್. ಶಿವಣ್ಣ, ಡಿ.ಎನ್. ಮೈಲಾರಪ್ಪ, ಎನ್.ಡಿ. ಕುಮಾರ್, ಗೀತಾನಂದಿನಿಗೌಡ, ಮುನಿರಾ ಎ. ಮಕಾಂದಾರ್, ನಜ್ಮತಾಜ್, ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ, ಎಸ್.ಎನ್. ರವಿಕುಮಾರ್, ಕೆ.ಪಿ. ಸಂಪತ್‌ಕುಮಾರ್, ಪವಿತ್ರಾ, ಮುದಸಿರ್ ನವಾಜ್, ಸೈಯದ್ ಸೈ-ÀÅಲ್ಲಾ, ಪ್ರಕಾಶ್ ರಾಮನಾಯ್ಕ್, ಚೋಟು, ಸೈಯದ್ ವಲಿಖಾದ್ರಿ, ಸೈಯದ್ ಖುದ್ದೂಸ್, ಡಾ. ರಹಮತ್‌ವುಲ್ಲಾ, ಮಂಜುನಾಥ್, ಉಸ್ಮಾನ್, ಲಕ್ಷಿ÷್ಮÃಕಾಂತ್, ಇಂದಿರಾ, ನೇತ್ರಾ, ಬಸಮ್ಮ ಇತರರಿದ್ದರು.